ಜಿಲ್ಲೆಯ 0-5 ವರ್ಷದೊಳಗಿನ 66,852 ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸಲು ಕ್ರಮ

ಉಡುಪಿ, ಮಾರ್ಚ್ 01: ಜಿಲ್ಲೆಯಲ್ಲಿ ಮಾರ್ಚ್ 3 ರಿಂದ 6 ರವರೆಗೆ ಪಲ್ಸ್ ಪೋಲಿಯೋ ಕಾರ್ಯಕ್ರಮ ನಡೆಯಲಿದ್ದು, 0-5 ವರ್ಷದೊಳಗಿನ ಗ್ರಾಮೀಣ ಪ್ರದೇಶದ 53661 ಹಾಗೂ ನಗರ ಪ್ರದೇಶದ 13191 ಸೇರಿದಂತೆ ಒಟ್ಟು 66852 ಅರ್ಹ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸಲು 660 ಲಸಿಕಾ ಕೇಂದ್ರಗಳನ್ನು ತೆರೆಯಲಾಗಿದೆ. ಭಾರತವು 12 ವರ್ಷಕ್ಕೂ ಮೇಲ್ಪಟ್ಟು ಪೋಲಿಯೋ ಮುಕ್ತ ರಾಷ್ಟ್ರವಾಗಿದೆ. ಇದು ಮಹತ್ತರವಾದ ಸಾಧನೆಯಾಗಿದ್ದರೂ ಭಾರತದ ನೆರೆರಾಷ್ಟ್ರಗಳಲ್ಲಿ ವೈಲ್ಡ್ ಪೋಲಿಯೋ ವೈರಸ್ ಇರುವುದು ಆತಂಕಕಾರಿಯಾಗಿದೆ. ಪೋಲಿಯೋ ನಿರ್ಮೂಲನೆ ಮಾಡುವುದು ನಮ್ಮೆಲ್ಲರ […]

ದ್ವಿತೀಯ ಪಿಯುಸಿ ಪರೀಕ್ಷೆ – 44 ಗೈರು ಹಾಜರಿ

ಉಡುಪಿ: ಜಿಲ್ಲೆಯಲ್ಲಿ ಇಂದು ನಡೆದ ಪಿಯುಸಿ ಕನ್ನಡ ಪರೀಕ್ಷೆಯಲ್ಲಿ ಒಟ್ಟು9389 ಅಭ್ಯರ್ಥಿಗಳು ಪರೀಕ್ಷೆಗೆ ನೊಂದಾಯಿಸಿಕೊಂಡು, 9345 ಮಂದಿ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 44 ಅಭ್ಯರ್ಥಿಗಳು ಗೈರು ಹಾಜರಾಗಿರುತ್ತಾರೆ. ಶೇ 99.5 ರಷ್ಟು ಹಾಜುರಾತಿ ಇರುತ್ತದೆ. ವಿದ್ಯಾರ್ಥಿಗಳಲ್ಲಿ ಗಂಡು ವಿದ್ಯಾರ್ಥಿಗಳು 4361 ನೋಂದಣಿಗಾಗಿ, 4336 ಜನ ಹಾಜರಾಗಿದ್ದು, 25 ಜನ ಗೈರಾಗಿರುತ್ತರೆ. 5028 ಜನ ವಿದ್ಯಾರ್ಥಿನಿಯರು ನೊಂದಾಯಿಸಿಕೊಂಡು, 5009 ಪರೀಕ್ಷೆ ಬರೆದಿದ್ದು, 19 ಜನ ವಿದ್ಯಾರ್ಥಿನಿಯರು ಗೈರು ಹಾಜರಾಗಿರುತ್ತಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.

ಹಿರಿಯಡ್ಕ: ವ್ಯಕ್ತಿ ನಾಪತ್ತೆ

ಹಿರಿಯಡ್ಕ, ಮಾರ್ಚ್ 01: ವಿಪರೀತ ಮಧ್ಯಾಪಾನ ಮಾಡುವ ಚಟ ಹೊಂದಿದ್ದ ಹಿರಿಯಡ್ಕ ನಿವಾಸಿ ವಾಸು ಶೇರಿಗಾರ್ (57) ಎಂಬ ವ್ಯಕ್ತಿಯು ಫೆಬ್ರವರಿ 22 ರಂದು ಮನೆಯಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ. 5 ಅಡಿ 2 ಇಂಚು ಎತ್ತರ, ಬಿಳಿ ಮೈಬಣ್ಣ, ಸಪೂರ ಶರೀರ ಹೊಂದಿದ್ದು, ಕನ್ನಡ ಹಾಗೂ ತುಳು ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಹಿರಿಯಡ್ಕ ಪೊಲೀಸ್ ಠಾಣೆಯ ಠಾಣಾಧಿಕಾರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಉಡುಪಿ: ಲಾಡ್ಜ್ ಮ್ಯಾನೆಜರ್ ನಾಪತ್ತೆ

ಉಡುಪಿ, ಮಾರ್ಚ್ 01: ನಗರದ ಲಾಡ್ಜ್ವೊಂದರಲ್ಲಿ ಮ್ಯಾನೆಜರ್ ಕೆಲಸ ಮಾಡಿಕೊಂಡಿದ್ದ ಸೈಯದ್ ಇಮ್ರಾನ್ (41) ಎಂಬ ವ್ಯಕ್ತಿಯು ಫೆಬ್ರವರಿ 23 ರಂದು ಲಾಡ್ಜ್ನಿಂದ ಕೆಲಸದ ನಿಮಿತ್ತ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ. 170 ಸೆಂ.ಮೀ ಎತ್ತರ, ದಪ್ಪ ಮೈಕಟ್ಟು, ಎಣ್ಣೆ ಕಪ್ಪು ಮೈಬಣ್ಣ, ದುಂಡು ಮುಖ ಹೊಂದಿದ್ದು, ಕನ್ನಡ ಹಾಗೂ ಉರ್ದು ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ಮಂಗಳೂರು: ಮಾರ್ಚ್ 2-3 ರಂದು ಅಂಚೆ ಚೀಟಿ, ನಾಣ್ಯಗಳ ಪ್ರದರ್ಶನ

ಮಂಗಳೂರು: ಕಾಯಿನ್ ಶೋ ಇಂಡಿಯಾ ಆಯೋಜಿಸಿರುವ ನಾಣ್ಯಗಳು, ಅಂಚೆಚೀಟಿಗಳು, ಬ್ಯಾಂಕ್ ನೋಟುಗಳ ಮೆಡಲ್ಸ್ ಹಾಗೂ ಸಂಗ್ರಹಕ ವಸ್ತುಗಳ ಪ್ರದರ್ಶನ ಮಾರ್ಚ್ 2 ಮತ್ತು3 ರಂದು ಸಿಟಿ ಸೆಂಟರ್ ಹತ್ತಿರ ಇರುವ ಹೊಟೇಲ್ ಶ್ರೀನಿವಾಸ ಮಂಗಳಾ ಹೋಲ್‌ನಲ್ಲಿ (ಎಸಿ) ನಡೆಯುತ್ತಿದೆ. ಈ ಪ್ರದರ್ಶನವನ್ನು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶ್ರೀನಿವಾಸ ವಿಶ್ವವಿದ್ಯಾಲಯದ ಸಿಎ ರಾಘವೇಂದ್ರ ರಾವ್ ಉದ್ಘಾಟಿಸಿದರು. ಪ್ರದರ್ಶನವು ಬೆಳಿಗ್ಗೆ 10 ರಿಂದ ರಾತ್ರಿ 8 ರವರೆಗೆ ನಡೆಯಲಿದ್ದು, ಪ್ರವೇಶ ಉಚಿತವಾಗಿದೆ ಹಾಗೂ ನಾಣ್ಯ ಅಂಚೆಚೀಟಿಗಳು, ಬ್ಯಾಂಕ್ ನೋಟುಗಳನ್ನು ವೀಕ್ಷಿಸಲು, […]