2023ರ ಆಸ್ಕರ್ಗೆ ಭಾರತದ ಅಧಿಕೃತ ಪ್ರವೇಶ ಗುಜರಾತಿ ಚಲನಚಿತ್ರ ಛೆಲೋ ಶೋ(ಕೊನೆಯ ಚಿತ್ರ) ಎಂದು ಘೋಷಿಸಲಾಗಿದೆ . ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾ 95 ನೇ ಅಕಾಡೆಮಿ ಪ್ರಶಸ್ತಿಗಳಿಗೆ ಭಾರತದ ಅಧಿಕೃತ ಪ್ರವೇಶವನ್ನು ಪ್ರಕಟಿಸಿದೆ. ಈ ಸಿನಿಮಾವು ಅತ್ಯುತ್ತಮ ಅಂತರಾಷ್ಟ್ರೀಯ ಚಲನಚಿತ್ರ ವಿಭಾಗದಲ್ಲಿ ಆಯ್ಕೆಯಾಗಿದೆ. ಚಿತ್ರವು ಭಾರತದಲ್ಲಿ ಅಕ್ಟೋಬರ್ 14 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಇಂಗ್ಲಿಷ್ನಲ್ಲಿ ಲಾಸ್ಟ್ ಫಿಲ್ಮ್ ಶೋ ಎಂದು ಹೆಸರಿಸಲಾದ ಛೆಲೋ ಶೋ, 2021 ರಲ್ಲಿ ರಾಬರ್ಟ್ ಡಿನಿರೋ ಅವರ ಟ್ರಿಬೆಕಾ ಫಿಲ್ಮ್ ಫೆಸ್ಟಿವಲ್ನಲ್ಲಿ ಆರಂಭಿಕ ಚಲನಚಿತ್ರವಾಗಿ ಅದರ ವಿಶ್ವ ಪ್ರಥಮ ಪ್ರದರ್ಶನವನ್ನು ಕಂಡಿತ್ತು. ಸಿನಿಮಾವು ವಿವಿಧ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಅನೇಕ ಪ್ರಶಸ್ತಿಗಳನ್ನು ಗೆದ್ದಿದೆ.
ಆಸ್ಕರ್ ಪ್ರಶಸ್ತಿಗೆ ತಮ್ಮ ಚಿತ್ರವನ್ನು ಆಯ್ಕೆ ಮಾಡಿದ್ದಕ್ಕಾಗಿ ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾ ಮತ್ತು ತೀರ್ಪುಗಾರ ಸದಸ್ಯರಿಗೆ ಚಿತ್ರದ ನಿರ್ದೇಶಕ ಪಾನ್ ನಳಿನ್ ಧನ್ಯವಾದ ತಿಳಿಸಿದ್ದಾರೆ.
ಭವಿನ್ ರಾಬರಿ, ಭವೇಶ್ ಶ್ರೀಮಾಲಿ, ರಿಚಾ ಮೀನಾ, ದಿಪೆನ್ ರಾವಲ್ ಮತ್ತು ಪರೇಶ್ ಮೆಹ್ತಾ ನಟಿಸಿರುವ ಛೆಲೋ ಶೋ ಚಲನಚಿತ್ರ ಭಾರತದ ದೂರದ ಹಳ್ಳಿಯಲ್ಲಿ ವಾಸಿಸುವ 9 ವರ್ಷದ ಹುಡುಗ ಸಮಯ್ ಮತ್ತು ಸಿನಿಮಾದೊಂದಿಗಿನ ಅವನ ಪ್ರೇಮ ಸಂಬಂಧದ ಸುತ್ತ ಸುತ್ತುತ್ತದೆ. ಚಿಕ್ಕ ಹುಡುಗ ಪ್ರೊಜೆಕ್ಷನ್ ಬೂತ್ನಿಂದ ಚಲನಚಿತ್ರಗಳನ್ನು ನೋಡುತ್ತಾ ಬೇಸಿಗೆಯನ್ನು ಹೇಗೆ ಕಳೆಯುತ್ತಾನೆ ಎಂಬುದನ್ನು ಚಿತ್ರ ತೋರಿಸುತ್ತದೆ. ತನ್ನ 35 ಎಂಎಂ ಕನಸುಗಳ ಅನ್ವೇಷಣೆಯಲ್ಲಿ ಆಕಾಶ ಭೂಮಿ ಒಂದು ಮಾಡುವ ಹುಡುಗ ತನ್ನನ್ನು ಕಾಯುತ್ತಿರುವ ಹೃದಯವಿದ್ರಾವಕ ಘಳಿಗೆಯ ಬಗ್ಗೆಅನಭಿಜ್ಞನಾಗಿರುವ ಕಥಾ ಹಂದರವನ್ನು ಈ ಚಿತ್ರ ಹೊಂದಿದೆ ಎನ್ನಲಾಗಿದೆ.