ಗ್ರಾಮ ಪಂಚಾಯತ್ ಚುನಾವಣೆ: ನಾಮಪತ್ರ ಸಲ್ಲಿಕೆ ಆರಂಭ

udupixpress

ಉಡುಪಿ: ಜಿಲ್ಲೆಯ ಉಡುಪಿ ತಾಲೂಕಿನ 16 ಗ್ರಾಮ ಪಂಚಾಯತಿಗಳ 329 ಸದಸ್ಯ ಸ್ಥಾನಗಳಿಗೆ, ಬ್ರಹ್ಮಾವರ ತಾಲೂಕಿನ 27 ಗ್ರಾಮ ಪಂಚಾಯತಿಗಳ 412 ಸದಸ್ಯ ಸ್ಥಾನಗಳಿಗೆ, ಬೈಂದೂರು ತಾಲೂಕಿನ 15 ಗ್ರಾಮ ಪಂಚಾಯತ್‌ಗಳ 259 ಸದಸ್ಯ ಸ್ಥಾನಗಳಿಗೆ ಹಾಗೂ ಹೆಬ್ರಿ ತಾಲ್ಲೂಕಿನ 9 ಗ್ರಾಮಗಳ 122 ಸದಸ್ಯ ಸ್ಥಾನಗಳಿಗೆ ಸಹಿತ ಒಟ್ಟು ನಾಲ್ಕು ತಾಲೂಕುಗಳ 67 ಗ್ರಾಮ ಪಂಚಾಯತಿಗಳ 415 ಕ್ಷೇತ್ರಗಳ 1122 ಸದಸ್ಯ ಸ್ಥಾನಗಳಿಗೆ ಮೊದಲನೆ ಹಂತದಲ್ಲಿ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಇಂದಿನಿಂದ ಆರಂಭಗೊಂಡಿದೆ.

ಡಿಸೆಂಬರ್ 22 ರಂದು ಬೆಳಗ್ಗೆ 7 ರಿಂದ ಸಂಜೆ 5 ರ ವರೆಗೆ ಚುನಾವಣೆ ನಡೆಯಲಿದೆ. ನಾಮಪತ್ರ ಸಲ್ಲಿಸಲು ಡಿಸೆಂಬರ್ 11 ಕೊನೆಯ ದಿನವಾಗಿದೆ. ಡಿಸೆಂಬರ್ 12 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಡಿಸೆಂಬರ್ 14 ಕೊನೆಯ ದಿನವಾಗಿದ್ದು, ಮತಗಳ ಎಣಿಕೆಯು ಡಿಸೆಂಬರ್ 30 ರಂದು ತಾಲೂಕು ಕೇಂದ್ರಗಳಲ್ಲಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.