ಗೋವುಗಳ ಕಳ್ಳಸಾಗಾಟ ತಡೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ಮನವಿ

ಉಡುಪಿ: ಉಡುಪಿ ಜಿಲ್ಲೆಯಲ್ಲಿ ನಿರಂತರವಾಗಿ ನಡೆಯುತ್ತಿರುವ ಹಟ್ಟಿಯಿಂದ ಗೋಕಳ್ಳತನ, ಅಕ್ರಮ ಗೋಸಾಗಾಟವನ್ನು ತಡೆಯಬೇಕು ಎಂದು ಆಗ್ರಹಿಸಿ ವಿಶ್ವ ಹಿಂದೂ‌ ಪರಿಷತ್ ಹಾಗೂ‌ ಬಜರಂಗದಳದ ವತಿಯಿಂದ ಸೋಮವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ಮನವಿ ಮಾಡಲಾಯಿತು.
ಕಾನೂನನ್ನು ಗಾಳಿಗೆ ತೂರಿ ಹಿಂದೂಗಳು ಪವಿತ್ರ ಭಾವನೆಯಿಂದ ಪೂಜಿಸುವ ಗೋಮಾತೆ ಲಯ ಅಕ್ರಮ ಕಳ್ಳ ಸಾಗಾಟ ಜಿಲ್ಲಾದ್ಯಂತ ನಡೆಯುತ್ತಿದ್ದು, ಇದು ಸ್ವಸ್ಥ ಸಮಾಜದ ಶಾಂತಿ ಸುವ್ಯವಸ್ಥೆಯನ್ನು ಹಾಳು ಮಾಡುವ ಉದ್ದೇಶದಿಂದ ಕಿಡಿಗೇಡಿಗಳು ಮಾಡುವ ದುಷ್ಕೃತ್ಯವಾಗಿದೆ.
ಬಡ ಕೃಷಿ ಕುಟುಂಬದವರು ಬ್ಯಾಂಕ್ ಸಾಲ ಮಾಡಿ ಜೀವನ ಸಾಗಿಸಲು ಹೈನುಗಾರಿಕೆಯನ್ನು ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ ಆದರೆ ಹಟ್ಟಿಯಿಂದ ಗೋ ಕಳ್ಳತನ ನಡೆಸುತ್ತಿದ್ದು, ಬಡ ಕೃಷಿ ಕುಟುಂಬ ಬೀದಿ ಪಾಲಾಗುವ ಪರಿಸ್ಥಿತಿ ಎದುರಾಗಿದೆ.
ಹೀಗಾಗಿ ಜಿಲ್ಲಾದ್ಯಂತ ಪೊಲೀಸ್ ಚೆಕ್ ಪೋಸ್ಟ್ ಗಳನ್ನು ನಿರ್ಮಿಸಿ ಅನಧೀಕೃತ ಸಂಖ್ಯೆಯಲ್ಲಿ ಸಂಚರಿಸುವ ವಾಹನಗಳನ್ನ ಪರಿಶೀಲಿಸಬೇಕು ಹಾಗೂ ಇತರ ಹಲವು ವಿಷಯಗಳನ್ನು ಮನವಿಯಲ್ಲಿ ತಿಳಿಸಲಾಗಿದ್ದು,  ಗೋ ಹತ್ಯೆಯನ್ನು ಸಂಪೂರ್ಣ ತಡೆಯಬೇಕಾಗಿ ವಿನಂತಿಸಲಾಗಿದೆ.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷದ್ ಜಿಲ್ಲಾ ಕಾರ್ಯದರ್ಶಿ ಪ್ರಮೋದ್ ಮಂದಾರ್ತಿ, ಬಜರಂಗದಳ ಜಿಲ್ಲಾ ಸಂಚಾಲಕ ದಿನೇಶ್ ಮೆಂಡನ್, ಜಿಲ್ಲಾ ಗೋ ರಕ್ಷಾ ಪ್ರಮುಖ್ ದಿನೇಶ್ ಶೆಟ್ಟಿ ಹೆಬ್ರಿ, ಜಿಲ್ಲಾ ಸುರಕ್ಷಾ ಪ್ರಮುಖ್ ಮಹೇಶ್ ಶೆಣೈ ಬೈಲೂರು, ಉಡುಪಿ ನಗರ ವಿಶ್ವ ಹಿಂದೂ ಪರಿಷದ್ ಅಧ್ಯಕ್ಷ ಸಂತೋಷ್ ಸುವರ್ಣ ಬೊಳ್ಜೆ, ಕುಂದಾಪುರ ವಿಶ್ವ ಹಿಂದೂ ಪರಿಷದ್ ಅಧ್ಯಕ್ಷ ವಿಜಯ್ ಶೆಟ್ಟಿ ಗೋಳಿಯಂಗಡಿ ಹಾಗೂ ಉಡುಪಿ ನಗರ ಬಜರಂಗದಳ ಸಂಚಾಲಕ ಲೋಕೇಶ್ ಶೆಟ್ಟಿಗಾರ್ ಉಪಸ್ಥಿತರಿದ್ದರು.