ಗೌತಮ್ ಗಂಭೀರ್ ಇನ್ನೊಂದು ಮುಖ ನಿಮಗೆ ಗೊತ್ತಾ?

ಭಾರತದ ತಂಡದ ಆರಂಭಿಕ ಆಟಗಾರ ಗೌತಮ್ ಗಂಭೀರ್ ತಮ್ಮ ಕ್ರಿಕೆಟ್ ವೃತ್ತಿಜೀವನಕ್ಕೆ ಮಂಗಳವಾರ

ವಿದಾಯ ಹೇಳಿದ್ದಾರೆ. ಗಂಭೀರ್ ಬಗ್ಗೆ ಆಸಕ್ತಿದಾಯಕ ಸಂಗತಿಗಳು ಇಲ್ಲಿದೆ ನೋಡಿ:

ಗಂಭೀರ್ ಆಟದ ಬಗ್ಗೆ ಒಂದಿಷ್ಟು:

ಗೌತಮ್ ಗಂಭೀರ್ ಅವರು 2007 ರಲ್ಲಿ ನಡೆದ ಟ್ವೆಂಟಿ -20 ವಿಶ್ವಕಪ್ ಅಂತಿಮ ಪಂದ್ಯದಲ್ಲಿ ಮತ್ತು ಐಸಿಸಿ ವಿಶ್ವ ಕಪ್ 2011 ರಲ್ಲಿ ಅವರು ಕ್ರಮವಾಗಿ 57 ಮತ್ತು 97 ರನ್ಗಳನ್ನು ಗಳಿಸಿ ಉತ್ತಮ ಬ್ಯಾಟಿಂಗ್ಪ್ರದರ್ಶನ ನೀಡಿದ್ದರು. ಅಂತಿಮವಾಗಿ ಭಾರತವು ಎರಡೂ ಪಂದ್ಯಾವಳಿಗಳನ್ನು ಗೆದ್ದಿತು.

ಗೌತಮ್ ಗಂಭೀರ್ ದಾಖಲೆಗಳು

  1. 2009 ರಲ್ಲಿ,  ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಗಂಭೀರ್ ಅವರು ಸ್ಥಾನ ಪಡೆದಿದ್ದರು . ಅದೇ ವರ್ಷ, ಅವರು ಐಸಿಸಿ ವರ್ಷದ ಟೆಸ್ಟ್ ಆಟಗಾರ ಪ್ರಶಸ್ತಿಯನ್ನು ಸ್ವೀಕರಿಸಿದ್ದರು . 2009 ರಲ್ಲಿ ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಶತಕದ ಸಾಧನೆ . 2008 ರಲ್ಲಿ ಭಾರತದ ಎರಡನೇ ಅತ್ಯುನ್ನತ ಕ್ರೀಡಾ ಪ್ರಶಸ್ತಿ,ಅರ್ಜುನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
  2.    ಸತತ ಐದು ಟೆಸ್ಟ್ ಶತಕಗಳನ್ನು ಗಳಿಸಿದ ಏಕೈಕ ಭಾರತೀಯ ಕ್ರಿಕೆಟಿಗ ಗಂಭೀರ್. ಬ್ರಾಡ್ಮನ್, ಕಾಲಿಸ್ ಮತ್ತು ಮೊಹದ್ ಯೂಸುಫ್ ಈ ಸಾಧನೆಗೈದ ಇತರ ಆಟಗಾರರು. ಸರ್ ವಿವಿಯನ್ ರಿಚರ್ಡ್ಸ್ 11 ಸತತ ಅರ್ಧ ಶತಕಗಳನ್ನು ಗಳಿಸಿದ ಎರಡನೇ ಆಟಗಾರ.

ಯಶಸ್ವಿ ನಾಯಕ ಗೌತಮ್ ಗಂಭೀರ್

ಗಂಭೀರ್ ಅವರ ನಾಯಕತ್ವದಲ್ಲಿ ಭಾರತ ಎಂದಿಗೂ ಪಂದ್ಯವನ್ನು ಕಳೆದುಕೊಂಡಿಲ್ಲ. 2010 ರ ಕೊನೆಯ ಭಾಗದಿಂದ 2011 ರ ತನಕ ಆರು ಏಕದಿನ ಪಂದ್ಯಗಳಲ್ಲಿ ಅವರು ಭಾರತದ ತಂಡದ  ನಾಯಕತ್ವ ವಹಿಸಿದ್ದರು.

ಮಾನವೀಯತೆಯ “ಗಂಭೀರ“ ಮುಖ:

ಗೌತಮ್ ಗಂಭೀರ್ ಅವರು ರಾಷ್ಟ್ರೀಯತಾವಾದಿ ಮತ್ತು ಮಾನವೀಯರೆಂದು ಹೆಸರುವಾಸಿಯಾಗಿದ್ದಾರೆ- ರಾಷ್ಟ್ರೀಯ ಹೆಮ್ಮೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಅವರಿಗೆ ಆಸಕ್ತಿ ಜಾಸ್ತಿ. ಭಯೋತ್ಪಾದಕಾರ ಹತ್ಯೆಗೊಳಗಾದ  ಜೆ & ಕೆ ಪೊಲೀಸ್ ಎಎಸ್ಐ ಅವರ ಮಕ್ಕಳ ಶಿಕ್ಷಣಕ್ಕೆ  ಗೌತಮ್ ಇಂದಿಗೂ ಸಹಾಯ ಮಾಡುತ್ತಿದ್ದಾರೆ.

  • ಸಾಮಾಜಿಕ ಕೆಲಸಕ್ಕೆ ಬೆಂಬಲ:

*ಗೌತಮ್ ಗಂಭೀರ್ ಅವರ ಜಿ.ಜಿ. ಸಂಸ್ಥೆ  ಜನರ ಕಲ್ಯಾಣಕ್ಕಾಗಿ ಬಹಳಷ್ಟು ಕೆಲಸ ಮಾಡುತ್ತಿದೆ. ಬಡವರಿಗೆ ಉಚಿತ ಆಹಾರ ನೀಡುತ್ತಿರುವ ಈ ಸಂಸ್ಥೆ ಇದೀಗ ಸಮುದಾಯ ಅಡುಗೆಮನೆ ಪ್ರಾರಂಭಿಸಿದೆ. ‘ಕಂಪ್ಯಾಷನ್ ಇನ್ ಮೈ ಹಾರ್ಟ್, ನನ್ನ ಕೈಯಲ್ಲಿ ಒಂದು ಪ್ಲೇಟ್ ಮತ್ತು ನನ್ನ ತುಟಿಗಳಿಗೆ ಪ್ರಾರ್ಥನೆ’ ಯಾರೂ ಹಸಿವಿನಿಂದ ಮಲಗಬೇಡಿ’ಮೊದಲಾದ ಘೋಷ ವಾಕ್ಯಗಳು ಈ ಸಂಸ್ಥೆಯದ್ದು.

ಗೌತಮ್ ಗಂಭೀರ್ ಟ್ರಾನ್ಸ್ಜೆಂಡರ್ ಹಕ್ಕುಗಳ ಬೆಂಬಲಿಗರಾಗಿದ್ದಾರೆ. ಟ್ರಾನ್ಸ್ಜೆಂಡರ್ ಸಮಸ್ಯೆಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು, ಅವರು ತಮ್ಮ ಮಾಧ್ಯಮದ ಜನಪ್ರಿಯತೆಯನ್ನು ಬಳಸುತ್ತಾರೆ. ಸಾಮಾಜಿಕ ಕೆಲಸಗಳಿಗೆ ಧ್ವನಿಯಾಗುವಂತೆ  ಅವರು ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳಲ್ಲಿ ವಿನಂತಿಸಿಕೊಳ್ಳುತ್ತಿದ್ದರು.