ಭಾರತದ ತಂಡದ ಆರಂಭಿಕ ಆಟಗಾರ ಗೌತಮ್ ಗಂಭೀರ್ ತಮ್ಮ ಕ್ರಿಕೆಟ್ ವೃತ್ತಿಜೀವನಕ್ಕೆ ಮಂಗಳವಾರ
ವಿದಾಯ ಹೇಳಿದ್ದಾರೆ. ಗಂಭೀರ್ ಬಗ್ಗೆ ಆಸಕ್ತಿದಾಯಕ ಸಂಗತಿಗಳು ಇಲ್ಲಿದೆ ನೋಡಿ:
ಗಂಭೀರ್ ಆಟದ ಬಗ್ಗೆ ಒಂದಿಷ್ಟು:
ಗೌತಮ್ ಗಂಭೀರ್ ಅವರು 2007 ರಲ್ಲಿ ನಡೆದ ಟ್ವೆಂಟಿ -20 ವಿಶ್ವಕಪ್ ಅಂತಿಮ ಪಂದ್ಯದಲ್ಲಿ ಮತ್ತು ಐಸಿಸಿ ವಿಶ್ವ ಕಪ್ 2011 ರಲ್ಲಿ ಅವರು ಕ್ರಮವಾಗಿ 57 ಮತ್ತು 97 ರನ್ಗಳನ್ನು ಗಳಿಸಿ ಉತ್ತಮ ಬ್ಯಾಟಿಂಗ್ಪ್ರದರ್ಶನ ನೀಡಿದ್ದರು. ಅಂತಿಮವಾಗಿ ಭಾರತವು ಎರಡೂ ಪಂದ್ಯಾವಳಿಗಳನ್ನು ಗೆದ್ದಿತು.
ಗೌತಮ್ ಗಂಭೀರ್ ದಾಖಲೆಗಳು
- 2009 ರಲ್ಲಿ, ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಗಂಭೀರ್ ಅವರು ಸ್ಥಾನ ಪಡೆದಿದ್ದರು . ಅದೇ ವರ್ಷ, ಅವರು ಐಸಿಸಿ ವರ್ಷದ ಟೆಸ್ಟ್ ಆಟಗಾರ ಪ್ರಶಸ್ತಿಯನ್ನು ಸ್ವೀಕರಿಸಿದ್ದರು . 2009 ರಲ್ಲಿ ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಶತಕದ ಸಾಧನೆ . 2008 ರಲ್ಲಿ ಭಾರತದ ಎರಡನೇ ಅತ್ಯುನ್ನತ ಕ್ರೀಡಾ ಪ್ರಶಸ್ತಿ,ಅರ್ಜುನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
- ಸತತ ಐದು ಟೆಸ್ಟ್ ಶತಕಗಳನ್ನು ಗಳಿಸಿದ ಏಕೈಕ ಭಾರತೀಯ ಕ್ರಿಕೆಟಿಗ ಗಂಭೀರ್. ಬ್ರಾಡ್ಮನ್, ಕಾಲಿಸ್ ಮತ್ತು ಮೊಹದ್ ಯೂಸುಫ್ ಈ ಸಾಧನೆಗೈದ ಇತರ ಆಟಗಾರರು. ಸರ್ ವಿವಿಯನ್ ರಿಚರ್ಡ್ಸ್ 11 ಸತತ ಅರ್ಧ ಶತಕಗಳನ್ನು ಗಳಿಸಿದ ಎರಡನೇ ಆಟಗಾರ.
ಯಶಸ್ವಿ ನಾಯಕ ಗೌತಮ್ ಗಂಭೀರ್
ಗಂಭೀರ್ ಅವರ ನಾಯಕತ್ವದಲ್ಲಿ ಭಾರತ ಎಂದಿಗೂ ಪಂದ್ಯವನ್ನು ಕಳೆದುಕೊಂಡಿಲ್ಲ. 2010 ರ ಕೊನೆಯ ಭಾಗದಿಂದ 2011 ರ ತನಕ ಆರು ಏಕದಿನ ಪಂದ್ಯಗಳಲ್ಲಿ ಅವರು ಭಾರತದ ತಂಡದ ನಾಯಕತ್ವ ವಹಿಸಿದ್ದರು.
ಮಾನವೀಯತೆಯ “ಗಂಭೀರ“ ಮುಖ:
ಗೌತಮ್ ಗಂಭೀರ್ ಅವರು ರಾಷ್ಟ್ರೀಯತಾವಾದಿ ಮತ್ತು ಮಾನವೀಯರೆಂದು ಹೆಸರುವಾಸಿಯಾಗಿದ್ದಾರೆ- ರಾಷ್ಟ್ರೀಯ ಹೆಮ್ಮೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಅವರಿಗೆ ಆಸಕ್ತಿ ಜಾಸ್ತಿ. ಭಯೋತ್ಪಾದಕಾರ ಹತ್ಯೆಗೊಳಗಾದ ಜೆ & ಕೆ ಪೊಲೀಸ್ ಎಎಸ್ಐ ಅವರ ಮಕ್ಕಳ ಶಿಕ್ಷಣಕ್ಕೆ ಗೌತಮ್ ಇಂದಿಗೂ ಸಹಾಯ ಮಾಡುತ್ತಿದ್ದಾರೆ.
- ಸಾಮಾಜಿಕ ಕೆಲಸಕ್ಕೆ ಬೆಂಬಲ:
*ಗೌತಮ್ ಗಂಭೀರ್ ಅವರ ಜಿ.ಜಿ. ಸಂಸ್ಥೆ ಜನರ ಕಲ್ಯಾಣಕ್ಕಾಗಿ ಬಹಳಷ್ಟು ಕೆಲಸ ಮಾಡುತ್ತಿದೆ. ಬಡವರಿಗೆ ಉಚಿತ ಆಹಾರ ನೀಡುತ್ತಿರುವ ಈ ಸಂಸ್ಥೆ ಇದೀಗ ಸಮುದಾಯ ಅಡುಗೆಮನೆ ಪ್ರಾರಂಭಿಸಿದೆ. ‘ಕಂಪ್ಯಾಷನ್ ಇನ್ ಮೈ ಹಾರ್ಟ್, ನನ್ನ ಕೈಯಲ್ಲಿ ಒಂದು ಪ್ಲೇಟ್ ಮತ್ತು ನನ್ನ ತುಟಿಗಳಿಗೆ ಪ್ರಾರ್ಥನೆ’ ಯಾರೂ ಹಸಿವಿನಿಂದ ಮಲಗಬೇಡಿ’ಮೊದಲಾದ ಘೋಷ ವಾಕ್ಯಗಳು ಈ ಸಂಸ್ಥೆಯದ್ದು.
ಗೌತಮ್ ಗಂಭೀರ್ ಟ್ರಾನ್ಸ್ಜೆಂಡರ್ ಹಕ್ಕುಗಳ ಬೆಂಬಲಿಗರಾಗಿದ್ದಾರೆ. ಟ್ರಾನ್ಸ್ಜೆಂಡರ್ ಸಮಸ್ಯೆಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು, ಅವರು ತಮ್ಮ ಮಾಧ್ಯಮದ ಜನಪ್ರಿಯತೆಯನ್ನು ಬಳಸುತ್ತಾರೆ. ಸಾಮಾಜಿಕ ಕೆಲಸಗಳಿಗೆ ಧ್ವನಿಯಾಗುವಂತೆ ಅವರು ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳಲ್ಲಿ ವಿನಂತಿಸಿಕೊಳ್ಳುತ್ತಿದ್ದರು.