ಕಲಾವಿದರಿಗೆ ಇಲ್ಲಿದೆ ಗುಡ್ ನ್ಯೂಸ್, ನಿಮ್ಮ ಚಿತ್ರಕಲಾ ಪ್ರದರ್ಶನಕ್ಕೆ ಇಲ್ಲಿದೆ ವೇದಿಕೆ, ಕಲಾಕೃಷಿ ಚಿತ್ರಕಲಾ ಪ್ರದರ್ಶನಕ್ಕೆ ಕಲಾವಿದರಿಂದ ಚಿತ್ರಗಳ ಆಹ್ವಾನ

ಕಾರ್ಕಳ: ಕೃಷಿ ಬದುಕು, ಕೃಷಿ ಸಂಸ್ಕೃತಿ ಹಾಗೂ ಕೃಷಿಕರ ಜೀವನಶೈಲಿಯನ್ನು ಚಿತ್ರಕಲೆಯ ಮೂಲಕ ಪರಿಚಯಿಸುವ ಉದ್ದೇಶದಿಂದ ಕಾರ್ಕಳದ ಮಾನಸ ಆರ್ಟ್ ಫೌಂಡೇಶನ್ ವತಿ ಯಿಂದ ‘ಕಲಾಕೃಷಿ – ನಮ್ಮ ಬದುಕಿನ ಬಣ್ಣ’ ಎಂಬ ವಿಶೇಷ ಚಿತ್ರಕಲಾ ಪ್ರದರ್ಶನ ಮತ್ತು ಮಾರಾಟ ಕಾರ್ಯಕ್ರಮವನ್ನು ಆಯೋಜಿಸಿದೆ. ಕಾರ್ಕಳ ತಾಲೂಕಿನ ಬಾರಾಡಿಯ ಶೃಂಗ ಶ್ಯಾಮಲಾ ಎಸ್ಟೇಟ್‌ನಲ್ಲಿ ಈ ಪ್ರದರ್ಶನವು ಡಿ.13ರಂದು ನಡೆಯಲಿದೆ. ಬೆಳಿಗ್ಗೆ 9.30ರಿಂದ ಸಂಜೆ 5 ಗಂಟೆಯವರೆಗೆ ಪ್ರದರ್ಶನ ಏರ್ಪಡಿಸಲಾಗಿದೆ.

ಈ ಕಾರ್ಯಕ್ರಮದಲ್ಲಿ ಕೃಷಿ ಬದುಕು, ಕೃಷಿ ಕಸುಬು ಹಾಗೂ ಕೃಷಿಗೆ ಸಂಬಂಧಿಸಿದ ವಿಷಯಗಳನ್ನಾಧರಿಸಿದ ಕ್ಯಾನ್ವಾಸ್ ಚಿತ್ರಗಳನ್ನು ರಚಿಸುವ ಕಲಾವಿದರಿಂದ ಚಿತ್ರಗಳನ್ನು ಆಹ್ವಾನಿಸಲಾಗಿದೆ.ಕಲಾವಿದರ ಕ್ರಿಯಾಶೀಲತೆಗೆ ಇಲ್ಲಿ ವಿಶೇಷ ವೇದಿಕೆ ನೀಡಲಾಗಿದೆ. ಪ್ರದರ್ಶನದಲ್ಲಿ ಭಾಗವಹಿಸಲು ಇಚ್ಛಿಸುವ ಕಲಾವಿದರು ಹೆಚ್ಚಿನ ಮಾಹಿತಿಗಾಗಿ 9980358653 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಸಂಘಟಕರು ತಿಳಿಸಿದ್ದಾರೆ.