ನೀಲಾವರ ಗೋಶಾಲೆಯಲ್ಲಿ ಗೋಕುಲಾಷ್ಟಮಿ

ಉಡುಪಿ: ನೀಲಾವರ ಗೋಶಾಲೆಯಲ್ಲಿ ಇರುವ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಅಲ್ಲಿನ ಕಾಲೀಯ ಕೃಷ್ಣ ಸನ್ನಿಧಿಯಲ್ಲಿ ಗೋಕುಲಾಷ್ಟಮಿಯನ್ನು ಸರಳವಾಗಿ ಆಚರಿಸಿರು.

ಗುರುವಾರ ಬೆಳಗ್ಗಿನಿಂದ ರಾತ್ರಿ ಪರ್ಯಂತ ಶ್ರೀರಾಮ‌ – ಶ್ರೀ ಕಾಲೀಯ ಕೃಷ್ಣರಿಗೆ ವಿಶೇಷ ಅಭಿಷೇಕ‌, ಲಕ್ಷತುಲಸೀ ಅರ್ಚನೆ , ಪಾರಾಯಣ ಭಜನೆ ಪೂಜೆಗಳನ್ನು ನೆರವೇರಿಸಿದ ಶ್ರೀಗಳು, ರಾತ್ರಿ ಚಂದ್ರೋದಯಕಾಲದಲ್ಲಿ ಮತ್ತೆ ಶ್ರೀ ಕೃಷ್ಣ ನಿಗೆ ಮಹಾಪೂಜೆ ನೆರವೇರಿಸಿ ಸಮಸ್ತ ಲೋಕದ ಒಳಿತಿಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಬಳಿಕ ಶ್ರೀ ಕೃಷ್ಣಾರ್ಘ್ಯ, ತುಲಸೀ ಸನ್ನಿಧಾನದಲ್ಲಿ ಚಂದ್ರನಿಗೆ ಅರ್ಘ್ಯ ಸಲ್ಲಿಸಿದರು. ಶ್ರೀಗಳ ಶಿಷ್ಯರು, ಗೋಶಾಲೆ ಸಿಬಂದಿವರ್ಗದವರು ಉಪಸ್ಥಿತರಿದ್ದರು . ಸಾಯಂಕಾಲ ರಾಕೇಶ್ ರೈ ಅಡ್ಕ ಮತ್ತು ತಂಡದ ಕಲಾವಿದರು ನರಕಾಸುರ ಮೋಕ್ಷ ಎಂಬ ತೆಂಕು ತಿಟ್ಟು ಯಕ್ಷಗಾನ ಪ್ರದರ್ಶನ ನೀಡಿದರು .