ಬೆಂಗಳೂರು: ಡಾಲಿ ಧನಂಜಯ್ ನಿರ್ಮಾಣದ ಮೂರನೇ ಸಿನಿಮಾ ‘ಟಗರು ಪಲ್ಯ’ದ ಟ್ರೇಲರ್ ಬಿಡುಗಡೆ ಕಾರ್ಯಕ್ರಮವನ್ನು ಬೆಂಗಳೂರಿನ ಕಲಾವಿದರ ಸಂಘದಲ್ಲಿ ಹಮ್ಮಿಕೊಳ್ಳಲಾಗಿತ್ತು. ಡಾಲಿ ಧನಂಜಯ್ ನಿರ್ಮಾಣದ ‘ಟಗರು ಪಲ್ಯ’ ಚಿತ್ರದ ಟ್ರೇಲರ್ ಅನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಡುಗಡೆಗೊಳಿಸಿದರು.
ಡಾಲಿ ಧನಂಜಯ್ ನಿರ್ಮಾಣದ ‘ಟಗರು ಪಲ್ಯ’ ಚಿತ್ರದ ಟ್ರೇಲರ್ ಅನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಡುಗಡೆಗೊಳಿಸಿದರು.ಟ್ರೇಲರ್ ಬಿಡುಗಡೆಗೊಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿತ್ರತಂಡಕ್ಕೆ ಶುಭ ಹಾರೈಸಿದರು. ಹಿರಿಯ ನಟರಾದ ತಾರಾ, ರಂಗಾಯಣ ರಘು, ಅಮೃತಾ, ನಾಗಭೂಷಣ್ ಸೇರಿದಂತೆ ನೀನಾಸಂ ಸತೀಶ್ ಹಾಗೂ ನೆನಪಿರಲಿ ಪ್ರೇಮ್ ಭಾಗಿಯಾಗಿದ್ದರು.
ಡಾಲಿ ಪಿಕ್ಚರ್ಸ್ನಡಿ ಡಾಲಿ ಧನಂಜಯ್ ನಿರ್ಮಿಸುತ್ತಿರುವ ‘ಟಗರು ಪಲ್ಯ’ ಸಿನಿಮಾಗೆ ಉಮೇಶ್.ಕೆ ಕೃಪ ಆಯಕ್ಷನ್ ಕಟ್ ಹೇಳಿದ್ದಾರೆ. ಚಿತ್ರದಲ್ಲಿ ನಾಗಭೂಷಣ್, ಅಮೃತಾ ಪ್ರೇಮ್ ಜೊತೆಗೆ ರಂಗಾಯಣ ರಘು ತಾರಾ, ಶರತ್ ಲೋಹಿತಾಶ್ವ, ವೈಜನಾಥ್ ಬಿರಾದಾರ್, ವಾಸುಕಿ ವೈಭವ್ ಸೇರಿದಂತೆ ದೊಡ್ಡ ತಾರಾಬಳಗವಿದೆ. ಅಕ್ಟೋಬರ್ 27ಕ್ಕೆ ಸಿನಿಮಾ ಬಿಡುಗಡೆಯಾಗಲಿದೆ.ಡಾಲಿ ಧನಂಜಯ್ ನಿರ್ಮಾಣದ ಮೂರನೇ ಸಿನಿಮಾ ‘ಟಗರು ಪಲ್ಯ’ದ ಟ್ರೇಲರ್ ಬಿಡುಗಡೆ ಕಾರ್ಯಕ್ರಮವನ್ನು ಬೆಂಗಳೂರಿನ ಕಲಾವಿದರ ಸಂಘದಲ್ಲಿ ಹಮ್ಮಿಕೊಳ್ಳಲಾಗಿತ್ತು.












