ಮುಖದಲ್ಲಿ ಮೊಡವೆ ಆಗಿದೆಂಬ ಕಾರಣಕ್ಕೆ ಆತ್ಮಹತ್ಯೆಗೆ ಶರಣಾದ ಬಾಲಕಿ

ಪುತ್ತೂರು: ಮುಖದಲ್ಲಿ ಮೊಡವೆ ಆಗಿದೆಂಬ ಕಾರಣಕ್ಕೆ ಬಾಲಕಿಯೊಬ್ಬಳು ಮನೆಯ ಸಮೀಪದ ಗೇರು ತೋಟದಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಭವಿಸಿದೆ.

ಕೆಯ್ಯೂರಿನ ದಿವ್ಯಾ ಆತ್ಮಹತ್ಯೆ ಮಾಡಿಕೊಂಡ ಬಾಲಕಿ. ದಿವ್ಯಾ ಮುಖದಲ್ಲಿ ಮೊಡವೆ ಆಗಿದ್ದು, ಇದರಿಂದ ಸಾಕಷ್ಟು ಮನನೊಂದಿದ್ದಳು. ಈ ಕಾರಣಕ್ಕಾಗಿ ದಿವ್ಯಾ ಎಲ್ಲಿಗೂ ಹೋಗುತ್ತಿರಲಿಲ್ಲ. ಸಂಬಂಧಿಕರ ಮನೆಗೂ ಹೋಗುತ್ತಿರಲಿಲ್ಲ ಎನ್ನಲಾಗಿದೆ.

ಶಾಲೆ ಕೂಡ ಆರಂಭ ಆಗಿದ್ದರಿಂದ ಮೊಡವೆಯ ಮುಖವನ್ನು ಹಿಡಿದುಕೊಂಡು ಹೇಗೆ ಶಾಲೆಗೆ ಹೋಗಲಿ ಎಂಬ ಚಿಂತೆಯೂ ಆಕೆಯನ್ನು ಕಾಡಿತ್ತು. ಇದರಿಂದ ಸಾಕಷ್ಟು ಕುಗ್ಗಿ ಹೋಗಿದ್ದಳು ಎಂದು ತಿಳಿದುಬಂದಿದೆ.

ಶುಕ್ರವಾರ ಶಾಲೆಗೆ ಹೋಗೋದಾಗಿ ಮನೆಯಲ್ಲಿ ಹೇಳಿ ಹೋಗಿದ್ದ ವಿದ್ಯಾರ್ಥಿನಿ ದಿವ್ಯಾ ಆತ್ಮಹತ್ಯೆ ಮಾಡಿಕೊಂಡಿದ್ದಳು.