ಫೆ.6ರಂದು ‘ಗಿರಿಜಾ ಹೆಲ್ತ್ ಕೇರ್ & ಸರ್ಜಿಕಲ್ಸ್’ ನೂತನ ಸ್ಥಳಾಂತರಿತ ಶೋ ರೂಮ್ ನ ಉದ್ಘಾಟನೆ

ಉಡುಪಿ: ಕರಾವಳಿಯಾದ್ಯಂತ ಹೆಲ್ತ್ ಕೇರ್ ಹಾಗೂ ಸರ್ಜಿಕಲ್ಸ್ ಪರಿಕರಗಳಿಗೆ ಹೆಸರುವಾಸಿಯಾರುವ ಗಿರಿಜಾ ಹೆಲ್ತ್ ಕೇರ್ ಹಾಗೂ ಸರ್ಜಿಕಲ್ ಸಂಸ್ಥೆಯ ಉಡುಪಿ ಶಾಖೆಯು ಇದೇ ಬರುವ ಫೆ.6ರ ಭಾನುವಾರದಂದು ಉಡುಪಿ ಕಲ್ಪನಾ ರಸ್ತೆಯ ಮಿತ್ರ ಆಸ್ಪತ್ರೆಯ ಬಳಿಯ ಶ್ರೀ ಗುರು ನಿತ್ಯಾನಂದ ಬಿಲ್ಡಿಂಗ್‌ ಗೆ ಸ್ಥಳಾಂತರಗೊಳ್ಳಲಿದೆ.

ಫೆ.6ರಂದು ಸಂಜೆ 5ಗಂಟೆಗೆ ನಡೆಯುವ ನೂತನ ಸ್ಥಳಾಂತರಿದ ಶೋರೂಮ್ ನ ಉದ್ಘಾಟನಾ ಸಮಾರಂಭದಲ್ಲಿ‌ ಗಿರಿಜಾ ಗ್ರೂಪ್ ಆಫ್ ಕನ್ಸರ್ನ್ಸ್ ನ ರವೀಂದ್ರ ಕೆ ಶೆಟ್ಟಿ, ಸುರೇಖಾ ರವೀಂದ್ರ ಶೆಟ್ಟಿ ಹಾಗೂ ಹರೀಶ್ ಕುಮಾರ್ ಯು. ಭಾಗವಹಿಸುವರು.

ವಿಶೇಷ ಸೌಲಭ್ಯಗಳು:

ನಮ್ಮಲ್ಲಿ ಅತ್ಯಾಧುನಿಕ ತಂತ್ರಜ್ಞಾನ ನುರಿತ ತಜ್ಞರ ತಂಡದಿಂದ ರಕ್ತ, ಮೂತ್ರ, ಥೈರಾಯ್ಡ್, ಡಯಾಬಿಟಿಸ್ ಹಾಗೂ ವಿವಿಧ ಪರೀಕ್ಷೆಗಳನ್ನು ಕ್ಲಪ್ತ ಸಮಯದಲ್ಲಿ ಮಾಡಿಕೊಡಲಾಗುವುದು. ಎಲ್ಲ ತರದ ಔಷಧಗಳು ಮೆಡಿಕೇರ್ ಮೆಡಿಕಲ್ಸ್ ನಲ್ಲಿ ಲಭ್ಯವಿದೆ. ರಕ್ತದ ಮಾದರಿಯನ್ನು ನಿಮ್ಮ ಮನೆಯಿಂದಲೇ ಸಂಗ್ರಹಿಸುವುದರ ಜತೆಗೆ ಔಷಧಗಳನ್ನು ಮನೆಗೆ ತಲುಪಿಸುವ ವಿಶೇಷ ಸೌಲಭ್ಯ ನಮ್ಮಲ್ಲಿ ಲಭ್ಯವಿದೆ.

ಹೆಚ್ಚಿನ ಮಾಹಿತಿಗೆ ಸಂಸ್ಥೆಯ ಮೊಬೈಲ್ ಸಂಖ್ಯೆ 96861 25904, 99720 44485 ಸಂಪರ್ಕಿಸಬಹುದು.