ಏರುಗತಿಯಲ್ಲಿ ಬೆಳ್ಳುಳ್ಳಿ ದರ: ಕೆಜಿಗೆ 400 ರೂ; ಫೆಬ್ರವರಿ ಅತ್ಯಂಕ್ಕೆ ಇಳಿಕೆ ಸಾಧ್ಯತೆ

ಬೆಂಗಳೂರು: ಕಳೆದ ಒಂದು ತಿಂಗಳಿನಿಂದ ಬೆಳ್ಳುಳ್ಳಿ ದರ ಏರಿಕೆ ಕಂಡಿದ್ದು ಇಳಿಕೆಯಾಗುವ ಲಕ್ಷಣ ಸದ್ಯಕ್ಕಿಲ್ಲ. ಕೆಲ ದಿನಗಳಿಂದ ಕೆಜಿಗೆ 300 ರೂ.ವರೆಗೆ ಇದ್ದ ಬೆಳ್ಳುಳ್ಳಿ ದರ ಈ ವಾರ ಮತ್ತೆ ಏರಿಕ ಕಂಡಿದೆ. ಬೆಂಗಳೂರು ಸಹಿತ ಬಹುತೇಕ ಕಡೆ ಕೆಜಿಗೆ 400 ರೂ. ಗೆ ಮಾರಾಟವಾಗಿದೆ. ಉತ್ತಮ ಗುಣಮಟ್ಟದ ನಾಟಿ ಬೆಳ್ಳುಳ್ಳಿ ದರ 450 ರೂ.ದಿಂದ 500 ರೂ.ವರೆಗೂ ಮಾರಾಟವಾಗುತ್ತಿದೆ. ಮಾರುಕಟ್ಟೆಗೆ ಬರುವ ಬೆಳ್ಳುಳ್ಳಿ ಪ್ರಮಾಣ ಕಡಿಮೆಯಾಗಿರುವುದು ದರ ಏರಿಕೆಯಾಗಲು ಕಾರಣ ಎನ್ನಲಾಗಿದೆ. ಫೆಬ್ರವರಿಯಲ್ಲಿ ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಬೆಳ್ಳುಳ್ಳಿ ಇಳುವರಿ ಬರುವ ನಿರೀಕ್ಷೆಯಿದ್ದು, ಬಳಿಕ ದರ ಇಳಿಕೆಯಾಗಬಹುದು ಎನ್ನಲಾಗಿದೆ.

ಬೆಂಗಳೂರು, ಚಿಂತಾಮಣಿ, ತುಮಕೂರು ಸೇರಿದಂತೆ ಬಹುತೇಕ ಮಾರುಕಟ್ಟೆಗಳಲ್ಲಿ ಉತ್ತಮ ದರ್ಜೆಯ ಬೆಳ್ಳುಳ್ಳಿ ದರ 400 ರೂ.ವರೆಗೆ ಇದೆ. ಉತ್ತರ ಕರ್ನಾಟಕದಲ್ಲಿ ಹುಬ್ಬಳ್ಳಿ, ವಿಜಯಪುರ, ಬಾಗಲಕೋಟೆ, ಬೆಳಗಾವಿ ಸಹಿತ ಹಲವು ಕಡೆಗಳಲ್ಲೂ ದರ ಇಳಿಕೆಯಾಗದೇ ಕೆಜಿಗೆ 400 ರೂವರೆಗೆ ಮಾರಾಟ ಮಾಡಲಾಗುತ್ತಿದೆ.