ಗಾಂಧೀಜಿಯವರ ಚಿಂತನೆಗಳು ಪ್ರಸ್ತುತ ಸಮಾಜಕ್ಕೆ ದಾರಿದೀಪ- ಪ್ರೊ.ರಾಮಚಂದ್ರ ಭಟ್

ಮಂಗಳೂರು: ಗಾಂಧೀಜಿಯವರು ತಮ್ಮ ಬದುಕಿನಲ್ಲಿ ಸರಳತೆ ಮತ್ತು ಅಹಿಂಸೆಯ ಚಿಂತನೆಗಳಿಗೆ ಹೆಚ್ಚಿನ ಮಹತ್ವವನ್ನುಕೊಟ್ಟಿದ್ದಾರೆ ಹಾಗಾಗೀ ಇಂದಿನ ಸಮಾಜಕ್ಕೆಇರ್ವರ ವ್ಯಕ್ತಿತ್ವಅತೀ ಅಗತ್ಯ ಎಂದು ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ರಾಮಚಂದ್ರ ಭಟ್ ಹೇಳಿದರು.

ಅವರು ಮಂಗಳೂರು ಎಕ್ಸ್‌ಪರ್ಟ್ ಪದವಿ ಪೂರ್ವಕಾಲೇಜಿನ ಸಭಾಂಗಣದಲ್ಲಿ ನಡೆದ ಗಾಂಧಿ ಜಯಂತಿ ಸಮಾರಂಭದಲ್ಲಿ ಮಾತನಾಡಿದರು.

ಗಾಂಧೀಜಿಯವರು ದೇಶ ವಿದೇಶಗಳಲ್ಲಿ ಹಲವರಿಗೆ ಆದರ್ಶಪ್ರಾಯರಾಗಿದ್ದು ಅವರ ವ್ಯಕ್ತಿತ್ವ ಅನನ್ಯವಾಗಿದೆ. ಅವರ ಚಿಂತನೆಗಳು ಇಂದು ಎಲ್ಲಡೆ ಹರಡಿದೆ.ತಮ್ಮ ಬದುಕಿನಲ್ಲಿ ದೇಶ ಸೇವೆಗಾಗಿ ಸರಳತೆಯ ಬದುಕನ್ನು ಸಮರ್ಪಿಸಿದರು.ಹಾಗೇ ಇಂದಿನ ಯುವ ಜನಾಂಗ ಕೂಡ ಗಾಂಧೀಜಿಯವರ ಚಿಂತನೆಗಳನ್ನು ಮೈಗೂಡಿಸಿಕೊಂಡು ದೇಶ ಸೇವೆಯಲ್ಲಿ ಪಾಲ್ಗೊಳಬೇಕು ಎಂದವರು ಹೇಳಿದರು.

ವೇದಿಕೆಯಲ್ಲಿ ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥ  ಮನೋಜ್ ಶ್ಯಾನುಭೋಗ್ ಕೆ, ಕನ್ನಡ ವಿಭಾಗದ ಮುಖ್ಯಸ್ಥರಾದ ಕರುಣಾಕರ ಬಳ್ಕೂರು, ಸಾಂಸ್ಕೃತಿಕ ಕಾರ್ಯಕ್ರಮದ ಸಂಯೋಜಕಿ  ಶ್ವೇತಾಕುಮಾರಿ, ಕಾರ್ಯಕ್ರಮ ಸಂಯೋಜಕರಾದ ದೀಪಕ್ ಪೋತ್ನಿಸ್‌ ಇನ್ನಿತರರು ಉಪಸ್ಥಿತರಿದ್ಧರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಗಾಂಧಿಜಯಂತಿ ಕಾರ್ಯಕ್ರಮದ ಪ್ರಯುಕ್ತ ಸ್ವಚ್ಛ ಭಾರತ ಅಭಿಯಾನದಲ್ಲಿ ಎಕ್ಸ್‌ಪರ್ಟ್ ಪದವಿ ಪೂರ್ವಕಾಲೇಜಿನ ವಿದ್ಯಾರ್ಥಿಗಳಿಂದ ಐತಿಹಾಸಿಕ ಸ್ಥಳ ಸುಲ್ತಾನ್ ಬತ್ತೇರಿ ಮತ್ತು ತಣ್ಣೀರಬಾವಿ ಬೀಚ್ ಸುತ್ತಮುತ್ತ ಪರಿಸರ ಸ್ವಚ್ಛತಾಕಾರ್ಯಕ್ರಮ ನಡೆಯಿತು.