ಮಣಿಪಾಲ MSDC ಯಿಂದ ಉಚಿತ ರೊಬೋಟಿಕ್ಸ್ ಕಾರ್ಯಾಗಾರ, ಆಸಕ್ತರು ಮಿಸ್ ಮಾಡ್ಕೊಬೇಡಿ

ಮಣಿಪಾಲ: ರೊಬೋಟಿಕ್ಸ್ ಹಾಗೂ ಆಟೊಮೇಷನ್ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು ಮತ್ತು ತಂತ್ರಜ್ಞಾನ ಪ್ರಿಯರಿಗಾಗಿ ಮಣಿಪಾಲ ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್ (MSDC) ವತಿಯಿಂದ ಉಚಿತ ರೊಬೋಟಿಕ್ಸ್ ವರ್ಕ್‌ಶಾಪ್ ಆಯೋಜಿಸಲಾಗಿದೆ.

ಆಗಸ್ಟ್ 8 ಮತ್ತು 9ರಂದು ನಡೆಯಲಿರುವ ಈ ಕಾರ್ಯಾಗಾರವು ಪ್ರತಿದಿನ ಬೆಳಿಗ್ಗೆ 10ರಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆಯಲಿದೆ. ಮಣಿಪಾಲದ MSDC ಕಟ್ಟಡ, ಡಾ. ಟಿ.ಎಂ.ಎ. ಪೈ ಕ್ಯಾಂಪಸ್, ಈಶ್ವರನಗರದಲ್ಲಿ ಕಾರ್ಯಕ್ರಮ ನಡೆಯಲಿದೆ.

ಕಾರ್ಯಾಗಾರದಲ್ಲಿ ರೊಬೋಟಿಕ್ಸ್ ಮೂಲಭೂತ ಅಂಶಗಳು, ಅಡ್ವಾನ್ಸ್ಡ್ ಕಂಟ್ರೋಲ್ ಮತ್ತು ಪ್ರೋಗ್ರಾಮಿಂಗ್, ಹಾಗೂ ರೊಬೋಟ್ ವಿನ್ಯಾಸ, ನಿರ್ಮಾಣ ಮತ್ತು ನವೀನತೆ ಕುರಿತಂತೆ ತರಬೇತಿ ನೀಡಲಾಗುತ್ತದೆ. ಭಾಗವಹಿಸುವವರು ರೊಬೋಟಿಕ್ಸ್ ತಂತ್ರಜ್ಞಾನವನ್ನು ಪ್ರಾಯೋಗಿಕವಾಗಿ ಅರಿಯುವ ಅವಕಾಶ ಪಡೆಯಲಿದ್ದಾರೆ.

ಈ ಉಚಿತ ಕಾರ್ಯಾಗಾರವು ಎಲ್ಲಾ ವಿದ್ಯಾರ್ಥಿಗಳು ಹಾಗೂ ಟೆಕ್ ಉತ್ಸಾಹಿಗಳಿಗೆ ಮುಕ್ತವಾಗಿದ್ದು, ಸೀಮಿತ  ಸೀಟುಗಳುಮಾತ್ರ ಲಭ್ಯವಿವೆ. ಆಸಕ್ತರು ಮುಂಗಡ ನೋಂದಣಿ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ 9666704142 ಸಂಖ್ಯೆಯನ್ನು ಸಂಪರ್ಕಿಸಬಹುದು.