ಫೆ.17 ರಂದು ಮಣಿಪಾಲ ಕೌಶಲ್ಯಾಭಿವೃದ್ದಿ ಕೇಂದ್ರದ ವತಿಯಿಂದ ಉಚಿತ ಛಾಯಾಗ್ರಹಣ ಕಾರ್ಯಾಗಾರ

ಮಣಿಪಾಲ: ಮಣಿಪಾಲ ಕೌಶಲ್ಯಾಭಿವೃದ್ದಿ ಕೇಂದ್ರದ ವತಿಯಿಂದ ಛಾಯಾಗ್ರಹಣದಲ್ಲಿ ಆಸಕ್ತಿ ಇರುವ 12 ವರ್ಷ ಮೇಲ್ಪಟ್ಟವರಿಗೆ ಫೆ.17 ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ರ ವರೆಗೆ ಈಶ್ವರ ನಗರದ ಡಾ. ಟಿ.ಎಂ.ಎ. ಪೈ ಪಾಲಿಟೆಕ್ನಿಕ್ ಕ್ಯಾಂಪಸ್ ನಲ್ಲಿ ಪ್ರಖ್ಯಾತ ಛಾಯಾಗ್ರಾಹಕ ಆಸ್ಟ್ರೋ ಮೋಹನ್ ಅವರಿಂದ ಉಚಿತ ಛಾಯಾಗ್ರಹಣ ಹಾಗೂ ವೀಡಿಯೋಗ್ರಫಿ ಕಾರ್ಯಾಗಾರ ಜರುಗಲಿರುವುದು.

ಆಸಕ್ತರು ಈ ಕೂಡಲೇ ನೋಂದಣಿ ಮಾಡಲು ಪ್ರಕಟಣೆ ತಿಳಿಸಿದೆ.

ಸಂಪರ್ಕ: 8296615560, 9164062211