ಕಾರ್ಕಳ: ಸಿ.ಎ ಅರ್ಹತಾ ಪರೀಕ್ಷೆಯಲ್ಲಿ ಕ್ರಿಯೇಟಿವ್‌ ಪಿಯು ಕಾಲೇಜಿನ ವಿದ್ಯಾರ್ಥಿಗಳ ಸಾಧನೆ

ಕಾರ್ಕಳ: ಇನ್ಸ್ಟಿಟ್ಯೂಟ್‌ ಆಫ್‌ ಚಾರ್ಟೆರ್ಡ್ ಅಕೌಂಟೆಂಟ್‌ ಆಫ್‌ CEಇಂಡಿಯಾ ಸಂಸ್ಥೆಯವರು ನಡೆಸಿದ ಸಿಎ (CA FOUNDATION) ಮೊದಲ ಹಂತದ ಅರ್ಹತಾ ಪರೀಕ್ಷೆಯಲ್ಲಿ ಕ್ರಿಯೇಟಿವ್‌ ಪಿಯು ಕಾಲೇಜಿನ ವಿದ್ಯಾರ್ಥಿಗಳಾದ ಶ್ರೀವತ್ಸ ಪಿ ಹಾಗೂ ಶ್ರಾವ್ಯ ಹೆಚ್‌. ಆರ್‌ ಇವರು ಸಿ.ಎ ಫೌಂಡೇಶನ್‌ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಸಿ.ಎ ಇಂಟರ್ ಮೀಡಿಯೆಟ್ ಹಂತಕ್ಕೆ ಅರ್ಹತೆ ಗಳಿಸಿದ್ದಾರೆ. ಕ್ರಿಯೇಟಿವ್‌ ಶಿಕ್ಷಣ ಪ್ರತಿಷ್ಠಾನದ ಅಂಗಸಂಸ್ಥೆಯಾದ ಹೆಚ್.ಕೆ.ಎಸ್‌ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಲಕ್ಷ್ಮೀ ಸಿ. ವಿ, ಸುಪ್ರಸಿದ್ಧ್ ಕಾಂತ್, ವರುಣ್‌ ಬಿ. ಆರ್‌ […]

ಉಡುಪಿ: ಜನ ಸಾಮಾನ್ಯರಿಗೆ ಉತ್ತಮ ಆರೋಗ್ಯ ಸೇವೆಗಳನ್ನು ಒದಗಿಸಿ ಜಿಲ್ಲೆ ರಾಜ್ಯಕ್ಕೆ ಮಾದರಿಯಾಗಬೇಕು – ಸಚಿವ ದಿನೇಶ್ ಗುಂಡೂರಾವ್

ಉಡುಪಿ: ಜನ ಸಾಮಾನ್ಯರಿಗೆ ಜಿಲ್ಲೆಯ ಆರೋಗ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಉತ್ತಮ ಆರೋಗ್ಯ ಸೇವೆಗಳನ್ನು ಒದಗಿಸುವುದರೊಂದಿಗೆ ಹೆಚ್ಚಿನ ಪ್ರಗತಿ ಸಾಧಿಸಿ ಬೇರೆ ಜಿಲ್ಲೆಗೆ ಮಾದರಿಯಾಗಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್ ಅವರು ತಿಳಿಸಿದರು. ಅವರು ಇಂದು ನಗರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳ ಕಛೇರಿಯಲ್ಲಿ ಆರೋಗ್ಯ ಇಲಾಖೆಯ ಪ್ರಗತಿ ಪರಿಶೀಲನ ನಡೆಸಿ ಮಾತನಾಡುತ್ತಿದ್ದರು. ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೇವೆಗಳನ್ನು ಒದಗಿಸಬೇಕೇಂಬುದೇ ಸರ್ಕಾರದ ಆಶಯವಾಗಿದ್ದು, ಆರೋಗ್ಯ ಸುಧಾರಣೆಗೆ ಅನೇಕ […]

ಉಡುಪಿ: ಮಿಷನ್ ಆಸ್ಪತ್ರೆಯ ಹೊಸ ಕ್ಯಾಂಪಸ್ “ಲೋಂಬಾರ್ಡ್ ಕಾಲೇಜ್ ಆಫ್ ಪ್ಯಾರಾ ಮೆಡಿಕಲ್ ಆ್ಯಂಡ್ ಅಲೈಡ್ ಹೆಲ್ತ್ ಸೈಯನ್ಸ್” ಉದ್ಘಾಟನೆ

ಉಡುಪಿ: ಮಿಷನ್ ಆಸ್ಪತ್ರೆಯ ಇತಿಹಾಸದಲ್ಲಿ ಲೋಂಬಾರ್ಡ್ ಕಾಲೇಜ್ ಆಫ್ ಪ್ಯಾರಾ ಮೆಡಿಕಲ್ ಆ್ಯಂಡ್ ಅಲೈಡ್ ಹೆಲ್ತ್ ಸೈಯನ್ಸ್ ಕಾಲೇಜಿನ ಸ್ಥಾಪನೆ ಪ್ರಮುಖ ಮೈಲಿಗಲ್ಲಾಗಿದೆ. ಇದು ಮಿಷನ್ ಆಸ್ಪತ್ರೆಯ ನಾಲ್ಕನೇ ಕ್ಯಾಂಪಸ್ ಆಗಿದ್ದು, ದೇಶ ವಿದೇಶದಲ್ಲಿ ಮಾನ್ಯತೆ ಪಡೆದಿರುವ ನರ್ಸಿಂಗ್ ಮತ್ತು ಪ್ಯಾರಾ ಮೆಡಿಕಲ್ ತರಬೇತಿಗೆ ಮೀಸಲಾಗಿದೆ ಎಂದು ಎಲ್.ಎಂ.ಎಚ್ ನ ನಿರ್ದೇಶಕ ಸುಶೀಲ್ ಜತ್ತನ್ನ ಹೇಳಿದರು. ಶುಕ್ರವಾರದಂದು ಲೋಂಬಾರ್ಡ್ ಮೆಮೋರಿಯಲ್ (ಮಿಷನ್) ಆಸ್ಪತ್ರೆಯ ಹೊಸ ಕ್ಯಾಂಪಸ್ “ ಲೋಂಬಾರ್ಡ್ ಕಾಲೇಜ್ ಆಫ್ ಪ್ಯಾರಾ ಮೆಡಿಕಲ್ ಆ್ಯಂಡ್ ಅಲೈಡ್ […]

ಕುಂದಾಪುರ: ಶ್ರೀ ವೆಂಕಟರಮಣ ಕಾಲೇಜಿನ 8 ಪ್ರಾಕ್ತನ ವಿದ್ಯಾರ್ಥಿಗಳು ಸಿ ಎ ಫೌಂಡೇಶನ್ ಪರೀಕ್ಷೆಯಲ್ಲಿ ತೇರ್ಗಡೆ.

ಕುಂದಾಪುರ: 2023 ಡಿಸೆಂಬರ್ ನಲ್ಲಿ ನಡೆದ ಸಿ ಎ ಫೌಂಡೇಶನ್ ಪರೀಕ್ಷೆಯಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ಪ್ರಾಕ್ತನ ವಿದ್ಯಾರ್ಥಿಗಳಾದ ಪ್ರಣತಿ ಪಿ .ಗೋಟಾ , ನೇಹಾ ಎಸ್. ರಾವ್, ಜಯರಾಮ್ ಪೈ, ಅಶ್ವಥ್ ಕೆ, ಐಶ್ವರ್ಯ, ತೇಜಸ್ವಿನಿ, ತುಷಾರ್ ಪೂಜಾರಿ, ಸುಶ್ರುತ್ ಕುಮಾರ್ ತೇರ್ಗಡೆ ಹೊಂದಿರುತ್ತಾರೆ. ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.

ಫೆಬ್ರವರಿ 11: ಶ್ರೀಕ್ಷೇತ್ರ ಕುದ್ರೋಳಿ ಶ್ರೀ ಭಗವತೀ ದೇವಸ್ಥಾನದಲ್ಲಿ ‘ಚಂದ್ರಹಾಸ’ ಮತ್ತು ‘ಶ್ರೀನಿವಾಸ ಕಲ್ಯಾಣ’ ಕಾಲಮಿತಿ ಯಕ್ಷಗಾನ ಪ್ರದರ್ಶನ

ಮಂಗಳೂರು: ಬಳ್ಕೂರು ಯಕ್ಷ ಕುಸುಮ ಪ್ರತಿಷ್ಠಾನ ಮತ್ತು ರಂಗಸ್ಥಳ ಮಂಗಳೂರು (ರಿ) ಇವರ ಆಶ್ರಯದಲ್ಲಿ ಶ್ರೀಕ್ಷೇತ್ರ ಕುದ್ರೋಳಿ ಭಗವತೀ ದೇವಸ್ಥಾನದ ಪ್ರೋತ್ಸಾಹದೊಂದಿಗೆ ಮಂಗಳೂರಿನಲ್ಲಿ ದ್ವಿತೀಯ ಬಾರಿಗೆ ಇದೇ ಬರುವ ಫೆಬ್ರವರಿ 11 ಭಾನುವಾರ ದಂದು ಸಂಜೆ 4.30 ರಿಂದ ರಾತ್ರಿ 10 ರವರೆಗೆ ಬಡಗು ತಿಟ್ಟಿನ ಪ್ರಸಿದ್ಧ ಯಕ್ಷಗಾನ ಮೇಳವಾಗಿರುವ ಶ್ರೀಕ್ಷೇತ್ರ ಹಟ್ಟಿಯಂಗಡಿ ಮೇಳ, ಇವರಿಂದ ಕಾಲಮಿತಿ ಯಕ್ಷಗಾನ ಪ್ರದರ್ಶನವಾಗಿ ‘ಚಂದ್ರಹಾಸ’ ಮತ್ತು ‘ಶ್ರೀನಿವಾಸ ಕಲ್ಯಾಣ’ ಎಂಬ ಕಥಾನಕ ಪ್ರದರ್ಶನವು ಕೊಡಿಯಾಲ್ ಬೈಲ್ ಕುದ್ರೋಳಿ ಶ್ರೀ ಭಗವತೀ […]