ಉಜಿರೆ: ಧರ್ಮಸ್ಥಳ ಸಮೀಪದ ಉಜಿರೆಯ ರುಡ್ ಸೆಟ್ ಸಂಸ್ಥೆಯಲ್ಲಿ ಸ್ವ ಉದ್ಯೋಗಾಕಾಂಕ್ಷಿಗಳಿಗಾಗಿ ಒಂದು ತಿಂಗಳ ಉಚಿತ ಫೋಟೋಗ್ರಫಿ ಮತ್ತು ವಿಡೀಯೋಗ್ರಫಿ ತರಬೇತಿ ನಡೆಸಲಾಗುವುದು.
ತರವೇತಿಯು ಆ.7 ರಿಂದ ಸೆ.5 ರವರೆಗೆ ನಡೆಯಲಿದ್ದು, 18 ರಿಂದ 45 ವರ್ಷಗಳವರು ಭಾಗವಹಿಸಬಹುದಾಗಿದ್ದು, ಊಟ ವಸತಿ ಸಮವಸ್ತ್ರ ಮತ್ತು ಟೂಲ್ ಕಿಟ್ ಅನ್ನು ಸಂಸ್ಥೆಯ ವತಿಯಿಂದ ನೀಡಲಾಗುವುದು.
ಹೆಚ್ಚಿನ ಮಾಹಿತಿಗೆ ಉಜಿರೆಯ ರುಡ್ ಸೆಟ್ ಸಂಸ್ಥೆಯನ್ನು ಸಂಪರ್ಕಿಸಬಹುದು.
 
								 
															





 
															 
															 
															











