ಕರಾವಳಿಯ ಕುಂದಾಪುರದ ಜನರ ಭಾಷಿ ಅಲ್ಲ ಬದ್ಕ್… ಈ ಹೊಯ್ಕ್ ಬರ್ಕ್ ಕುಂದಾಪ್ರ ಕನ್ನಡ….

ಕುಂದಾಪುರ: ಕನ್ನಡ ನಾಡು ಭಾಷೆ, ಕಲೆ, ಸಂಸ್ಕೃತಿ, ಶಿಲ್ಪ ಕಲೆಗಳ ಬೀಡು. ಕನ್ನಡ ನೆಲದ ವೈವಿಧ್ಯತೆಯನ್ನು ಕನ್ನಡದ ಭಾಷೆಯ (Language) ವಿವಿಧ ಪ್ರಕಾರಗಳ ಮೂಲಕವೂ ನೋಡಬಹುದು. ಉತ್ತರ ಕನ್ನಡ ಭಾಗದಲ್ಲಿ ಒಂದು ರೀತಿಯ ಕನ್ನಡ ಮಾತಾಡೋರು ಇದ್ರೆ, ದಕ್ಷಿಣ ಕನ್ನಡದಲ್ಲಿ ಇನ್ನೊಂದು ರೀತಿಯ ಕನ್ನಡ (Kannada) ಮಾತಾಡೋರನ್ನು ಕಾಣಬಹುದು. ಕಡಲತೀರ ಕುಂದಾಪುರದಲ್ಲಿ (Kundapra) ಕುಂದ ಕನ್ನಡದ (Kunda Kannada) ಸೊಬಗನ್ನು ಕಾಣಬಹುದು. ಹೀಗೆ ಬೇರೆ ಬೇರೆ ಭೌಗೋಳಿಕ ಪ್ರದೇಶದಲ್ಲಿ ಬೇರೆ ಬೇರೆ ಕನ್ನಡ ಮಾತಾನಾಡುವ ಜನರಿದ್ದಾರೆ. ಆಯಾ […]

ಲಕೋಟೆಯಲ್ಲಿದೆ ‘ಪ್ರಾಜೆಕ್ಟ್​ ಕೆ’ ಹೆಸರು: ಶೀರ್ಷಿಕೆ ಊಹಿಸಿದ ಸಿನಿಪ್ರೇಮಿಗಳು

ಪ್ರಭಾಸ್ ನಟನೆಯ ಅನೇಕ ಸಿನಿಮಾಗಳು ಬಿಗ್​ ಬಜೆಟ್​ನಲ್ಲೇ ತಯಾರಾದವುಗಳಾಗಿವೆ. ಆದರೆ ‘ಆದಿಪುರುಷ್​’ ಮಾತ್ರ ನಿರೀಕ್ಷಿತ ಮಟ್ಟದಲ್ಲಿ ಹಿಟ್​ ಆಗಲಿಲ್ಲ. ಇದೀಗ ಅವರ ಮುಂಬರುವ ‘ಪ್ರಾಜೆಕ್ಟ್​ ಕೆ’ ಸಿನಿಮಾದ ಮೇಲೆ ಸಿನಿಪ್ರೇಮಿಗಳ ದೃಷ್ಟಿ ಕೇಂದ್ರಿಕೃತವಾಗಿದೆ. ಟಾಲಿವುಡ್​ ಸ್ಟಾರ್​ ನಿರ್ದೇಶಕ ನಾಗ್​ ಅಶ್ವಿನ್​ ಅವರು ಈ ಚಿತ್ರಕ್ಕೆ ಆಯಕ್ಷನ್​ ಕಟ್​ ಹೇಳುತ್ತಿದ್ದಾರೆ. ಬಿಗ್​ ಬಜೆಟ್​ನಲ್ಲಿ ನಿರ್ಮಾಣವಾದ ‘ಆದಿಪುರುಷ್​’ ಸಿನಿಮಾದ ನಂತರ ಅಭಿಮಾನಿಗಳ ಗಮನ ಪ್ರಭಾಸ್​ ಅವರ ಮುಂಬರುವ ಪ್ರಾಜೆಕ್ಟ್​ಗಳತ್ತ ನೆಟ್ಟಿದೆ’ಪ್ರಾಜೆಕ್ಟ್​ ಕೆ’ ಹೆಸರಿನ ಪೂರ್ಣ ಅರ್ಥ ತಿಳಿದುಕೊಳ್ಳಲು ಸಿನಿಪ್ರೇಮಿಗಳು ಉತ್ಸುಕರಾಗಿದ್ದಾರೆ. […]

ಆರ್​​ಬಿಐ, ಯುಎಇಯ ಸೆಂಟ್ರಲ್ ಬ್ಯಾಂಕ್ ಒಪ್ಪಂದ :ಅರಬ್​ ರಾಷ್ಟ್ರದಲ್ಲಿ ರುಪೀ ಮೂಲಕ ವಹಿವಾಟಿಗೆ ಅವಕಾಶ

ಗಡಿಯಾಚೆಗಿನ ವಹಿವಾಟುಗಳಿಗೆ ಆ ದೇಶದ ಕರೆನ್ಸಿಯ ಬಳಕೆ ಉತ್ತೇಜಿಸಲು ಮತ್ತು ಪಾವತಿ, ಸಂದೇಶ ವ್ಯವಸ್ಥೆಯನ್ನು ಪರಸ್ಪರ ಲಿಂಕ್​ ಮಾಡುವ 2 ತಿಳಿವಳಿಕೆ ಒಪ್ಪಂದಗಳಿಗೆ ಸಹಿ ಹಾಕಿವೆ.ದುಬೈ, ಯುಎಇ: ಜಾಗತೀಕರಣದ ಪ್ರಭಾವದಿಂದಾಗಿ ಕರೆನ್ಸಿಗಳು ಆಯಾ ದೇಶಗಳಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲೂ ಬಹುಮುಖ್ಯವಾಗಿದೆ.ಹೀಗಾಗಿ ಗಡಿಯಾಚೆ ಸ್ಥಳೀಯ ಕರೆನ್ಸಿ ಬೆಳೆಸುವ ನಿಟ್ಟಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್​(ಆರ್​​ಬಿಐ) ಮತ್ತು ಯುಎಇಯ ಸೆಂಟ್ರಲ್ ಬ್ಯಾಂಕ್(CBUAE) ದ್ವಿಪಕ್ಷೀಯ ಒಪ್ಪಂದ ಮಾಡಿಕೊಂಡಿವೆ. ಭಾರತ ಮತ್ತು ಯುಎಇ ಮಧ್ಯೆ ಸ್ಥಳೀಯ ಕರೆನ್ಸಿಗಳ ಮೂಲಕ ವಹಿವಾಟಿಗೆ ಒಪ್ಪಂದ ಮಾಡಿಕೊಂಡಿವೆ. ಯುಪಿಐ ಬಳಕೆಗೆ […]

ಅಶ್ವಿನ್​ – ಜಡ್ಡು ಸ್ಪಿನ್​ ದಾಳಿ ಹೊಗಳಿದ ನಾಯಕ ರೋಹಿತ್

ಡೊಮಿನಿಕಾ(ವೆಸ್ಟ್​ ಇಂಡೀಸ್​): ಪದಾರ್ಪಣಾ ಪಂದ್ಯದಲ್ಲಿಯೇ ಶತಕ ಸಾಧನೆ ಮಾಡಿದ ಯಶಸ್ವಿ ಜೈಸ್ವಾಲ್​, ಹಿರಿಯ ಆಟಗಾರ ಆರ್​ ಅಶ್ವಿನ್​ ಅವರ ಸ್ಪಿನ್​ಮಾಂತ್ರಿಕತೆಗೆ ತರಗೆಲೆಯಂತೆ ಉದುರಿದ ವಿಂಡೀಸ್​ ಬ್ಯಾಟಿಂಗ್​ ಪಡೆ ಯಾವುದೇ ಹಂತದಲ್ಲಿ ಪ್ರತಿರೋಧ ಒಡ್ಡದೇ ಸೋಲೊಪ್ಪಿಕೊಂಡಿತು.ಯುವ ಪಡೆಯೊಂದಿಗೆ ವೆಸ್ಟ್​ ಇಂಡೀಸ್​ ಪ್ರವಾಸ ಕೈಗೊಂಡಿರುವ ಭಾರತ ಕ್ರಿಕೆಟ್​ ತಂಡ ಮೊದಲ ಟೆಸ್ಟ್​ನಲ್ಲಿ ಕೆರೆಬಿಯನ್ನರ ವಿರುದ್ಧ ಇನಿಂಗ್ಸ್​ ಮತ್ತು 141 ರನ್​ ವಿಕ್ರಮ ಸಾಧಿಸಿದೆ.ಚೊಚ್ಚಲ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ಯಶಸ್ವಿ ಜೈಸ್ವಾಲ್ ಪಂದ್ಯಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು. ಸ್ಪಿನ್​ ದ್ವಯರಾದ ಅಶ್ವಿನ್​- […]

ಯುಎಇ ಅಧ್ಯಕ್ಷ ನಹ್ಯಾನ್ ಜೊತೆ ದ್ವಿಪಕ್ಷಿಯ ಮಾತುಕತೆ ನಡೆಸಿದ ಪ್ರಧಾನಿ ಮೋದಿ; ವ್ಯಾಪಾರ ಒಪ್ಪಂದಗಳಿಗೆ ಒಪ್ಪಿಗೆ

ಅಬುಧಾಬಿ (ಯುಎಇ):ಯುಎಇ ಮತ್ತು ಭಾರತ ನಡುವೆ ಆಯಾ ಕರೆನ್ಸಿ ಮೂಲಕ ವಹಿವಾಟು, ವ್ಯಾಪಾರ, ಹೂಡಿಕೆ, ಇಂಧನ, ಆಹಾರ ಭದ್ರತೆ, ವಿಜ್ಞಾನ ಮತ್ತು ತಂತ್ರಜ್ಞಾನ, ಶಿಕ್ಷಣ, ಹಣಕಾಸು, ರಕ್ಷಣೆ, ಭದ್ರತೆ ಸೇರಿದಂತೆ ಹಲವು ವಿಷಯಗಳಿಗೆ ಸಂಬಂಧಿಸಿದ ಒಪ್ಪಂದಗಳು ನಡೆದಿವೆ. ಪ್ರಧಾನಿ ನರೇಂದ್ರ ಮೋದಿ ಅವರು ಯುನೈಟೆಡ್​​ ಅರಬ್​ ಎಮಿರೇಟ್ಸ್​(ಯುಎಇ)ಗೆ ಭೇಟಿ ನೀಡಿದ್ದು, ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಆತ್ಮೀಯವಾಗಿ ಸ್ವಾಗತ ಕೋರಿದರು.ಬಳಿಕ ಉಭಯ ನಾಯಕರು ದ್ವಿಪಕ್ಷೀಯ ಸಂಬಂಧ ವೃದ್ಧಿ ಕುರಿತು ವಿಸ್ತೃತ ಚರ್ಚೆ […]