ಉಡುಪಿ: ಕಳೆದ 24 ವರ್ಷಗಳಿಂದ ಕರಾವಳಿ ಭಾಗದಲ್ಲಿ ವಾಣಿಜ್ಯ ಶಿಕ್ಷಣಕ್ಕೆ ಪ್ರಸಿದ್ಧಿ ಪಡೆದಿರುವ ತ್ರಿಶಾ ಕ್ಲಾಸಸ್ ವತಿಯಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗಾಗಿ ಉಚಿತ ಆನ್ಲೈನ್ ಕ್ರ್ಯಾಶ್ ಕೋರ್ಸ್ ಆರಂಭವಾಗಲಿದೆ.
ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆಗಾಗಿ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗಾಗಿ ತ್ರಿಶಾ ಸಂಸ್ಥೆಯು ಈ ಕ್ರ್ಯಾಶ್ ಕೋರ್ಸನ್ನು ಆರಂಭಿಸುತ್ತಿದ್ದು ಅಕೌಂಟೆನ್ಸಿ, ಸ್ಟಾಟ್ಸ್, ಬೇಸಿಕ್ ಮ್ಯಾಥ್ಸ್ ಈ ಮೂರು ವಿಷಯಗಳನ್ನು ಒಳಗೊಂಡಿರುತ್ತದೆ. ಈ ಕ್ರ್ಯಾಶ್ ಕೋರ್ಸ್ ಅಕ್ಟೋಬರ್ ತಿಂಗಳಿನಿಂದ ಫೆಬ್ರವರಿ ತಿಂಗಳವರೆಗೆ, ಶನಿವಾರ ಸಂಜೆ 4:00 ರಿಂದ 7:00 ರವರೆಗೆ ಹಾಗೂ ಭಾನುವಾರ ಬೆಳಿಗ್ಗೆ 9:00 ರಿಂದ ಮಧ್ಯಾಹ್ನ 12:00 ರವರೆಗೆ ಆನ್ ಲೈನ್ ಮೂಲಕ ಉಚಿತವಾಗಿ ನಡೆಯಲಿದೆ.
ಸ್ಪಷ್ಟ ವಿಡಿಯೋ ಹಾಗೂ ಆಡಿಯೋಗಳ ಮೂಲಕ ಅನುಭವೀ ವಿಷಯ ತಜ್ಞರಿಂದ ಬೋಧಿಸಲ್ಪಡುವ ಈ ಕಾರ್ಯಾಗಾರದಲ್ಲಿ ಭಾಗವಹಿಸಲು ಉಚಿತ ನೋಂದಣಿಗಾಗಿ ಈ ಲಿಂಕ್ http://tinyurl.com/2ndPUCrashcourse ಅನ್ನು ಬಳಸಬಹುದು ಅಥವಾ ಉಡುಪಿಯ ಕೋರ್ಟ್ ಮುಂಭಾಗದಲ್ಲಿ ಇರುವ, ಅನಂತ್ ಟವರ್ಸ್ ನ 4 ನೇ ಮಹಡಿಯಲ್ಲಿ ತ್ರಿಶಾ ಕ್ಲಾಸಸ್ ಅನ್ನು ಸಂಪರ್ಕಿಸಬಹುದು.