ಚಿಪ್ಸಿ ಐಟಿ ಸರ್ವೀಸಸ್ ಪ್ರೈ. ಲಿ ನಲ್ಲಿ ನವರಾತ್ರಿ ಸಂಭ್ರಮ 

ಉಡುಪಿ: ಎಲ್ಲಾ ಹಬ್ಬಗಳನ್ನು ಅತ್ಯಂತ ವಿಜೃಂಭಣೆಯಿಂದ ಮತ್ತು ಉತ್ಸಾಹದಿಂದ ಆಚರಿಸುವುದನ್ನು ನಂಬಿರುವ ಚಿಪ್ಸಿ ಸಂಸ್ಥೆಯ ಎಲ್ಲಾ ಉದ್ಯಮಿಗಳು ಆಯಾ ದಿನದ ವಸ್ತ್ರ ಸಂಹಿತೆ ಬಣ್ಣಗಳನ್ನು ಅನುಸರಿಸುತ್ತಿದ್ದಾರೆ ಮತ್ತು ಹಬ್ಬವನ್ನು ಸಾಂಪ್ರಾಯಿಕವಾಗಿ ಆಚರಿಸುತ್ತಿದ್ದಾರೆ. ಚಿಪ್ಸಿ ಐಟಿ ಸರ್ವೀಸಸ್ ಪ್ರೈ. ಲಿ ಉಡುಪಿಯ ಪ್ರಮುಖ ಸಾಫ್ಟ್‌ವೇರ್ ಕಂಪನಿಯಾಗಿದ್ದು ಇದು ವೆಬ್ ಅಪ್ಲಿಕೇಶನ್, ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿ, ಕ್ಲೌಡ್ ಸೇವೆಗಳು, ಡಿಜಿಟಲ್ ಮಾರ್ಕೆಟಿಂಗ್ ಮತ್ತು ಇನ್ನೂ ಅನೇಕ ಸಾಫ್ಟ್‌ವೇರ್ ಸೇವೆಗಳನ್ನು ನೀಡುತ್ತಿದೆ. ಹೆಚ್ಚಿನ ವಿವರಗಳಿಗಾಗಿ +91-9962213970 ಅನ್ನು ಸಂಪರ್ಕಿಸಿ.

ಫುಟ್ಬಾಲ್ ಪಂದ್ಯಾಟ: ಶ್ರೀ ವೆಂಕಟರಮಣ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ರಾಜ್ಯಮಟ್ಟಕ್ಕೆ ಆಯ್ಕೆ

ಕುಂದಾಪುರ: ಉಡುಪಿ ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆ ಹಾಗೂ ಗ್ರೀನ್ ವ್ಯಾಲಿ ಪದವಿ ಪೂರ್ವ ಕಾಲೇಜು ಶಿರೂರು ಇದರ ಜಂಟಿ ಆಶ್ರಯದಲ್ಲಿ ಜರುಗಿದ ಫುಟ್ಬಾಲ್ ಪಂದ್ಯಾಟದಲ್ಲಿ ಶ್ರೀ ವೆಂಕಟರಮಣ ಪದವಿಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ಪ್ರಥಮ ಪಿಯುಸಿ ವಿದ್ಯಾರ್ಥಿ ಶ್ರವಣ್ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ರಾಜ್ಯ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ವೃಂದದವರು ಹಾಗೂ ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.

ವಿಶ್ವ ಕೌಶಲ್ಯ ಸ್ಪರ್ಧೆ: ನೋಂದಾವಣೆಗೆ ನವೆಂಬರ್ 15 ಕೊನೆಯ ದಿನ

ಉಡುಪಿ: ಫ್ರಾನ್ಸಿನ ಲಿಯೋನ್‌ನಲ್ಲಿ ವಿಶ್ವ ಕೌಶಲ್ಯ ಸ್ಪರ್ಧೆ ನಡೆಯಲಿರುವ ಹಿನ್ನೆಲೆ ಇಂಡಿಯಾ ಸ್ಕಿಲ್ ಕಾಂಪಿಟೇಷನ್ ಕರ್ನಾಟಕ ಸ್ಪರ್ಧೆಗೆ ಪೂರ್ವಭಾವಿಯಾಗಿ ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮವು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಡಿ ಅರ್ಹ ಅಭ್ಯರ್ಥಿಗಳನ್ನು ವಿವಿಧ ಹಂತಗಳಲ್ಲಿ ಆಯ್ಕೆ ಮಾಡುವ ಸಲುವಾಗಿ ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಅರ್ಹತಾ ಸುತ್ತುಗಳ ಆಯ್ಕೆ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಅರ್ಹತಾ ಸುತ್ತುಗಳಲ್ಲಿ ವಿಜೇತರಾದ ಸ್ಪರ್ಧಿಗಳು ವಿಶ್ವ ಕೌಶಲ್ಯ ಸ್ಪರ್ಧೆಗೆ ಆಯ್ಕೆಯಾಗಲಿದ್ದು, ಸ್ಪರ್ಧೆಯಲ್ಲಿ 2002 ಜನವರಿ 1 ರ ನಂತರ ಜನಿಸಿದ 17 […]

ವಾಲಿಬಾಲ್ ಪಂದ್ಯಾಟದಲ್ಲಿ ಎಕ್ಸಲೆಂಟ್ ಕಾಲೇಜಿನ ಅನುಜ್ ಕುಮಾರ್ ರಾಜ್ಯ ಮಟ್ಟಕ್ಕೆ ಆಯ್ಕೆ

ಕುಂದಾಪುರ: ಪದವಿ ಪೂರ್ವ ಶಿಕ್ಷಣ ಇಲಾಖೆ ಮತ್ತು ಪೂರ್ಣಪ್ರಜ್ಞಾ ಕಾಲೇಜು ಉಡುಪಿ ಇವರ ಜಂಟಿ ಆಶ್ರಯದಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಕುಂದಾಪುರದ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಯಾದ ಅನುಜ್ ಕುಮಾರ್ ಜೆ.ಎಸ್ ಇವರು ಕುಂದಾಪುರ ತಾಲ್ಲೂಕು ತಂಡವನ್ನು ಜಿಲ್ಲಾ ಮಟ್ಟದಲ್ಲಿ ಪ್ರತಿನಿಧಿಸಿ ದ್ವಿತೀಯ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಇವರನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ವೃಂದದವರು ಮತ್ತು ಶಿಕ್ಷಕೇತರರು ಅಭಿನಂದಿಸಿದ್ದಾರೆ.

ತ್ರಿಶಾ ಕ್ಲಾಸಸ್ ನಲ್ಲಿ ದ್ವಿತೀಯ ಪಿಯುಸಿ ವಾಣಿಜ್ಯ ವಿದ್ಯಾರ್ಥಿಗಳಿಗೆ ಉಚಿತ ಆನ್ ಲೈನ್ ಕ್ರ್ಯಾಶ್ ಕೋರ್ಸ್ ಆರಂಭ

ಉಡುಪಿ: ಕಳೆದ 24 ವರ್ಷಗಳಿಂದ ಕರಾವಳಿ ಭಾಗದಲ್ಲಿ ವಾಣಿಜ್ಯ ಶಿಕ್ಷಣಕ್ಕೆ ಪ್ರಸಿದ್ಧಿ ಪಡೆದಿರುವ ತ್ರಿಶಾ ಕ್ಲಾಸಸ್ ವತಿಯಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗಾಗಿ ಉಚಿತ ಆನ್ಲೈನ್ ಕ್ರ್ಯಾಶ್ ಕೋರ್ಸ್ ಆರಂಭವಾಗಲಿದೆ. ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆಗಾಗಿ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗಾಗಿ ತ್ರಿಶಾ ಸಂಸ್ಥೆಯು ಈ ಕ್ರ್ಯಾಶ್ ಕೋರ್ಸನ್ನು ಆರಂಭಿಸುತ್ತಿದ್ದು ಅಕೌಂಟೆನ್ಸಿ, ಸ್ಟಾಟ್ಸ್, ಬೇಸಿಕ್ ಮ್ಯಾಥ್ಸ್ ಈ ಮೂರು ವಿಷಯಗಳನ್ನು ಒಳಗೊಂಡಿರುತ್ತದೆ. ಈ ಕ್ರ್ಯಾಶ್ ಕೋರ್ಸ್ ಅಕ್ಟೋಬರ್ ತಿಂಗಳಿನಿಂದ ಫೆಬ್ರವರಿ ತಿಂಗಳವರೆಗೆ, ಶನಿವಾರ ಸಂಜೆ 4:00 ರಿಂದ 7:00 ರವರೆಗೆ […]