ಮಣಿಪಾಲ: ಮಣಿಪಾಲದ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಮುನಿಯಾಲು ಆಯುರ್ವೇದ ಕಾಲೇಜು ಮತ್ತುಆಸ್ಪತ್ರೆಯ ಬಾಲರೋಗ ಮತ್ತು ಪ್ರಸೂತಿ ತಂತ್ರ ಸ್ತ್ರೀ ರೋಗ ವಿಭಾಗದ ವತಿಯಿಂದ ಮೇ 23 ರಿಂದ 28 ರವರೆಗೆ ಪೂರ್ವಾಹ್ನ9.00 ರಿಂದ ಅಪರಾಹ್ನ4.00 ಘಂಟೆಯವರೆಗೆ ಮಕ್ಕಳ ಮತ್ತು ಸ್ತ್ರೀ ರೋಗಗಳ ಉಚಿತ ತಪಾಸಣೆ, ಹಾಗೂ ಮಾಹಿತಿ ಶಿಬಿರ ನಡೆಯಲಿರುವುದು. ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆಯಬೇಕೆಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.