ಉಡುಪಿ: ನರೇಂದ್ರ ಮೋದಿಯವರ ಜನುಮ ದಿನ ಪ್ರಯುಕ್ತ ಕಳೆದ 6 ವರ್ಷಗಳಿಂದ ಮೋದಿಯವರ ಬ್ಯಾನರ್ ನ್ನು ತನ್ನ ರಿಕ್ಷಾಕ್ಕೆ ಕಟ್ಟಿ ಬಾಡಿಗೆ ಮಾಡುತ್ತಿರುವ ಜನ ಸಂಘ ಮೂಲದ ಕಾರ್ಯಕರ್ತರು ಅತ್ರಾಡಿಯ ಗೋಪಾಲ ಕೃಷ್ಣ ಆಚಾರ್ಯ ಇವರು ಈ ಬಾರಿ ಮೋದಿಯವರ ಜನ್ಮದಿನ ಸೆಪ್ಟೆಂಬರ್ 17 ರಂದು ಬೆಳಗ್ಗಿನಿಂದ ರಾತ್ರಿಯವರೆಗೆ ಉಚಿತ ಆಟೋ ರಿಕ್ಷಾ ಸೇವೆಯನ್ನು ನೀಡಲು ನಿರ್ಧರಿಸಿದ್ದು, ಉಚಿತ ಆಟೋ ಕಾರ್ಯಕ್ರಮವನ್ನು ಬಿಜೆಪಿ ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಸತ್ಯಾನಂದ ನಾಯಕ್ ಇವರ ಉಪಸ್ಥಿತಿಯಲ್ಲಿ ಹಿರಿಯಡ್ಕದ ಮೋದಿ (ಸದಾನಂದ ನಾಯಕ್ ) ಇವರು ಬಿಜೆಪಿ ಧ್ವಜ ಹಾರಿಸಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಬೂತ್ ಸಮಿತಿ ಅಧ್ಯಕ್ಷರಾದ ವಸಂತ ಶೆಟ್ಟಿ ಚೆನ್ನಿಬೆಟ್ಟು, ಬಾಲಕೃಷ್ಣ ಹೆಗ್ಡೆ, ಹಿರಿಯರಾದ ಮುರಳೀಧರ ಹಾಲಂಬಿ, ಮಾಜಿ ಪಂಚಾಯತ್ ಅಧ್ಯಕ್ಷರಾದ ರತ್ನಾಕರ್ ಶೆಟ್ಟಿ, ಶ್ರೀಮತಿ ಪ್ರಮೀಳಾ ಶೆಟ್ಟಿಗಾರ್, ಮಾಜಿ ಸದಸ್ಯರಾದ ಗಂಗಾಧರ್ ಪ್ರಭು, ಶ್ರೀಮತಿ ಹರಿಣಿ ಶೆಟ್ಟಿ, ಅಯ್ಯಪ್ಪ ಸ್ವಾಮಿ ಮಂದಿರದ ಮೊಕ್ತೇಸರ ಹಾಗೂ ಪಕ್ಷದ ಪ್ರಮುಖ ಸಾಧು ಪೂಜಾರಿ, ಸಾಮಾಜಿಕ ಕಾರ್ಯಕರ್ತರಾದ ರಾಘವೇಂದ್ರ ಕರ್ವಾಲು. ಪಕ್ಷದ ಕಾರ್ಯಕರ್ತರಾದ ಹರೀಶ್ ಮೆಡಿಕಲ್, ಶ್ರೀಮತಿ ಸಂದ್ಯಾ ಕರಂಬೈಲ್, ದೇವೇಂದ್ರ ಎ ಕಾಮತ್, ದೇವೇಂದ್ರ ನಾಯಕ್, ಭೋಜ ಪೂಜಾರಿ, ಶ್ರೀಧರ್ ಶೆಟ್ಟಿಗಾರ್, ಸತೀಶ್ ನಾಯ್ಕ್, ವಿಶ್ವನಾಥ್ ಶೆಟ್ಟಿ, ರಾಘವೇಂದ್ರ ಶೆಟ್ಟಿಗಾರ್, ಸಂತೋಷ್ ಶೆಟ್ಟಿ ಪರೀಕ, ಆಟೋ ಚಾಲಕರಾದ ಮನೋಜ್ ಶೆಟ್ಟಿ, ಸರ್ವೋತ್ತಮ ಶೆಟ್ಟಿಗಾರ್, ಸುದರ್ಶನ್ ನಾಯ್ಕ್, ಮುಂತಾದವರು ಹಾಜರಿದ್ದರು.
















