ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ; ಮಕ್ಕಳಿಗೆ ವಿಷ ಉಣಿಸಿ ತಂದೆ-ತಾಯಿ ನೇಣಿಗೆ ಶರಣು

ಮಂಗಳೂರು: ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣಾದ ಘಟನೆ ಮಂಗಳೂರಿನ ಮಂಗಳಾದೇವಿ ಬಳಿಯ ಮೋರ್ಗನ್ ಗೇಟ್ ಸಮೀಪ ಇಂದು ಬೆಳಕಿಗೆ ಬಂದಿದೆ.

ಮಕ್ಕಳಿಗೆ ಮೊದಲು ವಿಷ ಉಣಿಸಿ ಬಳಿಕ ತಂದೆ ತಾಯಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತರನ್ನು ಬಾಗಲಕೋಟೆ ಮೂಲದ ನಾಗೇಶ್ ಶೆರಗುಪ್ಪಿ (30), ವಿಜಯಲಕ್ಷ್ಮಿ (26), ಮಕ್ಕಳಾದ ಸ್ವಪ್ನ (4), ಸಮರ್ಥ್ (4) ಮೃತ ದುರ್ದೈವಿಗಳು.  ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಮಂಗಳೂರು ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.