ಪರ್ಕಳ: ಶ್ರೀ ದುರ್ಗಾಪರಮೇಶ್ವರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯು ಸ್ವಂತ ಕಟ್ಟಡವನ್ನು ನಿರ್ಮಿಸುವ ಯೋಜನೆ ಹೊಂದಿ ಪರ್ಕಳ ಮುಖ್ಯರಸ್ತೆಯ ಪಕ್ಕದಲ್ಲಿ ಸ್ಥಳ ಖರೀದಿಸಿದ್ದು, ಡಿ. 16 ರಂದು ಶ್ರೀ ಸಂಸ್ಥಾನ ಗೌಡಪಾದಾಚಾರ್ಯ ಮಠ ಕವಳೇ ಗೋವಾ ಇದರ 77 ನೇ ಯತಿಗಳಾದ ಶ್ರೀಮತ್ ಶಿವಾನಂದ ಸರಸ್ವತಿ ಸ್ವಾಮಿ ಮಹಾರಾಜ್ ರವರು ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸಿ, ಸೊಸೈಟಿಯು ಅಭಿವೃದ್ದಿ ಹೊಂದಿ 6 ಶಾಖೆಗಳಲ್ಲಿ ರೂ. 115 ಕೋಟಿಗೂ ಮಿಕ್ಕಿ ದುಡಿಯುವ ಬಂಡವಾಳ, ರೂ 98 ಕೋಟಿ ಠೇವಣಿ ಹೊಂದಿದ್ದು ಗ್ರಾಹಕರ, ಸದಸ್ಯರ ನಂಬಿಕೆಗೆ ಪಾತ್ರವಾಗಿದೆ ಎಂದರು. ಸಂಸ್ಥೆಯಲ್ಲಿ ಶ್ರದ್ಧೆ ಮತ್ತು ನಿಷ್ಠೆಯಿಂದ ಕಾರ್ಯನಿರ್ವಹಿಸುತ್ತಿರುವ ಆಡಳಿತ ಮಂಡಳಿ, ಸಿಬ್ಬಂದಿ ವರ್ಗದವರ ಕಾರ್ಯಕ್ಕೆ ಶುಭಾಶೀರ್ವಾದ ನೀಡಿದರು.
ಸೊಸೈಟಿಯು ಅಭಿವೃದ್ದಿ ಹೊಂದಿ 6 ಶಾಖೆಗಳಲ್ಲಿ ರೂ. 115 ಕೋಟಿಗೂ ಮಿಕ್ಕಿ ದುಡಿಯುವ ಬಂಡವಾಳ, ರೂ 98 ಕೋಟಿ ಠೇವಣಿ ಹೊಂದಿದ್ದು ಗ್ರಾಹಕರ, ಸದಸ್ಯರ ನಂಬಿಕೆಗೆ ಪಾತ್ರವಾಗಿದೆ.
ಸಂಸ್ಥೆಯ ಅಧ್ಯಕ್ಷ ಅಶೋಕ್ ಕಾಮತ್ ಸ್ವಾಗತಿಸಿ ಪ್ರಸ್ತಾವನೆಗೈದರು, ಶ್ರೀ ನರಸಿಂಹ ದೇವಸ್ಥಾನ ನರಸಿಂಗೆ, ಶ್ರೀ ಆದಿಶಕ್ತಿ ಮಹಾಲಕ್ಷ್ಮಿ ದೇವಸ್ಥಾನ ಎಣ್ಣೆಹೊಳೆ, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಬಂಟಕಲ್ಲು, ಶ್ರೀ ರಾಮ ಮಂದಿರ ಕೊಡಂಗೆ, ರಾಜಾಪುರ ಸಾರಸ್ವತ ಸೊಸೈಟಿ ಕಾರ್ಕಳ, ಕೆನರಾ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿ ಉಡುಪಿ, ನಿರ್ಮಾಣ್ ಸೊಸೈಟಿ ಉಡುಪಿ ಹಾಗೂ ವಿವಿಧ ಸಂಘ ಸಂಸ್ಥೆಯ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿತ್ಯಾನಂದ ನರಸಿಂಗೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.