ಪಡುಬಿದ್ರಿ: ನ.20 ರಂದು ಫಾರ್ಚ್ಯೂನ್ ಸೇಫ್ಟಿ ಗ್ಲಾಸ್ ಇದರ ನೂತನ ಘಟಕ “ಇನ್ಸುಲೇಟೆಡ್ ಗ್ಲಾಸ್” ಉದ್ಘಾಟನೆ

ಪಡುಬಿದ್ರಿ: ನಂದಿಕೂರು ಕೈಗಾರಿಕಾ ಪ್ರದೇಶದಲ್ಲಿರುವ ಶ್ರೀದೇವಿ ಗ್ಲಾಸ್ ಹೌಸ್ ಸಂಸ್ಥೆಯ ಫಾರ್ಚ್ಯೂನ್ ಸೇಫ್ಟಿ ಗ್ಲಾಸ್ ಇದರ ನೂತನ ಘಟಕ ” ಇನ್ಸುಲೇಟೆಡ್ ಗ್ಲಾಸ್” ಇದರ ಉದ್ಘಾಟನಾ ಕಾರ್ಯಕ್ರಮವು ನ.20 ರಂದು ಬೆಳಿಗ್ಗೆ 11.30 ಕ್ಕೆ ನಡೆಯಲಿದೆ.

ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದು, ಮಾಂಡವಿ ಬಿಲ್ಡರ್ ಮತ್ತು ಡೆವಲಪರ್ಸ್ ನ ಆಡಳಿತ ನಿರ್ದೇಶಕ ಡಾ. ಜೆರಿ ವಿನ್ಸೆಂಟ್ ಡಯಾಸ್ ಘಟಕವನ್ನು ಉದ್ಘಾಟಿಸಲಿದ್ದಾರೆ.

ನ್ಯಾಶನಲ್ ಕೌನ್ಸಿಲ್ ಸದಸ್ಯ ಕುಮಾರಚಂದ್ರ ಕಾರ್ಯಕ್ರಮದ ಆಧ್ಯಕ್ಷತೆಯನ್ನು ವಹಿಸಲಿದ್ದಾರೆ.

ಉಡುಪಿ ಎ.ಜೆ. ಅಸೋಸಿಯೇಟ್ಸ್‌ನ ಎಂ. ಗೋಪಾಲ ಭಟ್‌, ಆರ್ಕಿಟೆಕ್ಟ್ ಯೋಗೀಶ್ಚಂದ್ರಧರ, ಮಂಗಳೂರು ಕ್ರೆಡೈ ಅಧ್ಯಕ್ಷ ವಿನೋದ್‌ ಎ.ಆರ್‌.ಪಿಂಟೋ, ಮಂಗಳೂರು ಎಸಿಸಿಎ (ಐ) ಚೇರ್ ವೆುನ್‌ ಉಜ್ವಲ್‌ ಡಿ’ಸೋಜಾ, ಮಂಗಳೂರು ನಾರ್ದರ್ನ್ ಸ್ಕೈ ಪ್ರಾಪರ್ಟೀಸ್‌ ಪ್ರೈ.ಲಿ.ನ ನಿರ್ದೇಶಕಿ ಕ್ರಿತಿನ್‌ ಅಮೀನ್‌, ಉಡುಪಿ ಎಸಿಇ ಟೆಕ್ನೋ ಕ್ರಾಫ್ಟ್ನ ಆರ್ಕಿಟೆಕ್ಟ್ ರಮಣಿ ಹಂದೆ, ಉಡುಪಿ ಉಜ್ವಲ್‌ ಡೆವಲಪರ್ನ ಆಡಳಿತ ನಿರ್ದೇಶಕ ಪುರುಷೋತ್ತಮ ಪಿ. ಶೆಟ್ಟಿ, ಸೈಂಟ್‌ ಗೋಬಿನ್‌ ಗ್ಲಾಸ್‌ ಇಂಡಿಯಾ ಪ್ರೈ.ಲಿ.ನ ಪ್ರೊಜೆಕ್ಟ್ ಆಫ್ ಪ್ರೊಸೆಸ್ಸಿಂಗ್‌ನ ರೀಜನಲ್‌ ಮ್ಯಾನೇಜರ್‌ ಅಂತೋನಿ ಸಂತೋಷ್‌ ಇ.ಟಿ. ಉಪಸ್ಥಿತರಿರಲಿದ್ದಾರೆ.

ಉದ್ಘಾಟನಾ ಕಾರ್ಯಕ್ರಮ ಪ್ರಯುಕ್ತ ಟಫೆನ್ಡ್ ಗ್ಲಾಸ್‌ ನ ಉತ್ಕೃಷ್ಟತೆಯನ್ನು ಪರೀಕ್ಷೆಗೊಳಪಡಿಸುವ ನಿಟ್ಟಿನಲ್ಲಿ ಕ್ರಿಕೆಟ್‌ ಹಾರ್ಡ್‌ ಬಾಲ್‌ ಗಳನ್ನು ಗ್ಲಾಸ್ ಗಳ ಮೇಲೆ ಎಸೆದು ಪರೀಕ್ಷಿಸಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ. ಲ್ಯಾಮಿನೇಟೆಡ್‌ ಗ್ಲಾಸ್‌ಗಳನ್ನು ಸಾಲಾಗಿ ನಿಲ್ಲಿಸಿ ಅವುಗಳಿಗೆ ಸುತ್ತಿಗೆ ಮೂಲಕ ಹೊಡೆಯಲೂ ಅವಕಾಶ ನೀಡಲಾಗುವುದು. ಸಂಸ್ಥೆಯಲ್ಲಿ ತಯಾರಿಸಲ್ಪಡುವ ಹೀಟ್‌ ಸ್ಟ್ರೆಂಥನ್ಡ್ ಗ್ಲಾಸ್‌, ಈವಾ ಲ್ಯಾಮಿನೇಟೆಡ್‌ ಗ್ಲಾಸ್‌, ಬೆಂಡ್‌ ಗ್ಲಾಸ್‌, ಸ್ಮಾರ್ಟ್‌ ಗ್ಲಾಸ್‌, ಲೇಕರ್ಡ್‌ ಗ್ಲಾಸ್‌, ಡಿಸೈನರ್‌ ಗ್ಲಾಸ್‌, ಕಲರ್‌ ಲ್ಯಾಮಿನೇಟೆಡ್‌ ಗ್ಲಾಸ್‌ ಇತ್ಯಾದಿ ಗ್ಲಾಸ್‌ಗಳ ಪ್ರದರ್ಶನ ಏರ್ಪಡಿಸಲಾಗುವುದು.

1990ರಲ್ಲಿ ಸ್ಥಾಪನೆಗೊಂಡ ಶ್ರೀ ದೇವಿ ಗ್ಲಾಸ್‌ ಹೌಸ್‌ ಸಂಸ್ಥೆಯು ನೂರಾರು ಮಂದಿಗೆ ಉದ್ಯೋಗಾವಕಾಶ ಕಲ್ಪಿಸುವ ಮೂಲಕ ಅಭಿವೃದ್ಧಿ ಹೊಂದುತ್ತಾ ಸಾಗಿ 2019ರಲ್ಲಿ ‘ಫಾರ್ಚೂನ್‌ ಸೇಫ್ಟಿ ಗ್ಲಾಸ್‌’ ಫ್ಯಾಕ್ಟರಿ ಆರಂಭಿಸಿ ಬೇಡಿಕೆಯಲ್ಲಿದೆ. ಕರ್ನಾಟಕ, ಗೋವಾ, ಕೇರಳ ರಾಜ್ಯಾದ್ಯಂತ ಮಾರುಕಟ್ಟೆಯಲ್ಲಿ ಲಭ್ಯವಿವೆ.

ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್‌: www.fortunesaftyglass.com ಸಂಪರ್ಕಿಸಲು ಮಾಲಕ ಸುರೇಶ್‌ ನಾಯ್ಕ್ ತಿಳಿಸಿದ್ದಾರೆ.