ಉಡುಪಿ: ಅರಬ್ ಕಂಟ್ರಿಯಲ್ಲಿ ಸಾಕಷ್ಟು ಜನಮನ್ನಣೆ ಪಡೆದಿರುವ “ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್ಸ್” ಇದೀಗ ಉಡುಪಿಯ ಬ್ರಹ್ಮಾವರದಲ್ಲಿ ಆರಂಭವಾಗಲಿದ್ದು, ಆ ಮೂಲಕ ಭಾರತದಲ್ಲಿ ತನ್ನ ಮೊದಲ ಶಾಖೆಯನ್ನು ಹೊಂದಲಿದೆ.
ಆಧುನಿಕ ಸೌಲಭ್ಯ, ಸುಸಜ್ಜಿತ ಸೌಕರ್ಯಗಳಿಂದ ಕೂಡಿರುವ ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್ಸ್, ಉತ್ಕೃಷ್ಟ ಗುಣಮಟ್ಟದ ವೆರೈಟಿ ಫುಡ್ ಗಳಿಂದ ದುಬೈನಲ್ಲಿ ಸಾಕಷ್ಟು ಫೇಮಸ್ ಆಗಿದೆ. ಇದೀಗ ಕರಾವಳಿಯ ಜನತೆ ತನ್ನ ಸ್ವಾದಿಷ್ಟಕರ ಫುಡ್ ಐಟಂಗಳನ್ನು ಉಣಬಡಿಸಲು ಸಜ್ಜಾಗಿದೆ.
ಇಂದಿನಿಂದ (ಅ.28) ಉಡುಪಿಯ ಬ್ರಹ್ಮಾವರದ ಫಾರ್ಚೂನ್ ಪ್ಲಾಝಾ ಹೋಟೆಲ್ ನಲ್ಲಿ ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್ಸ್ ನವರ ಫ್ರೆಡ್ಡೀಸ್ ರೆಸ್ಟ್ರೋ ಕೆಫೆ, ಸ್ಪೋಟ್ಸ್ ಬಾರ್ ಶುಭಾರಂಭಗೊಳ್ಳಲಿದೆ. ನೂತನ ಶಾಖೆಯ ಉದ್ಘಾಟನಾ ಸಮಾರಂಭದಲ್ಲಿ ನಟ, ನಿರ್ದೇಶಕ, ನಿರ್ಮಾಪಕ ರಿಷಭ್ ಶೆಟ್ಟಿ, ಬಿಗ್ ಬಾಸ್ ಸೀಸನ್ 7 ರ ವಿನ್ನರ್ ಹಾಗೂ ನಟ ಶೈನ್ ಶೆಟ್ಟಿ, ನಟ ಪ್ರಮೋದ್ ಶೆಟ್ಟಿ ಭಾಗವಹಿಸಿ ಶುಭಹಾರೈಸಿದರು.
ರೆಸ್ಟ್ರೋ ಕೆಫೆ ಆಧುನಿಕ ಸೌಲಭ್ಯಗಳೊಂದಿಗೆ ಸುಸಜ್ಜಿತವಾದ ವ್ಯವಸ್ಥೆಯನ್ನು ಹೊಂದಿದೆ. ಅತ್ಯುತ್ತಮವಾದ ಒಳಾಂಗಣ ವಿನ್ಯಾಸ, ಕರಾವಳಿ ವಿಶೇಷ ಖಾದ್ಯಗಳು, ಫ್ರೆಡ್ಡೀಸ್ ಕ್ರೀಡಾ ಪ್ರೇಮಿಗಳಿಗೆ ಬಿಗ್ ಸ್ಕ್ರೀನ್ ಮೂಲಕ ಐಸಿಸಿ ಟಿ-20 ವರ್ಲ್ಡ್ ಕಪ್ ಗಳನ್ನು ಲೈವ್ನಲ್ಲಿ ವೀಕ್ಷಣೆ ಮಾಡಬಹುದಾದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ದುಬೈನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್ಸ್ ಕಂಪನಿಯು ತನ್ನ ಮೊದಲ ಹೋಟೆಲ್ ಅನ್ನು 2001ರಲ್ಲಿ ಸ್ಥಾಪಕ ಅಧ್ಯಕ್ಷರಾದ ಯಶಸ್ವಿ ಉದ್ಯಮಿ ಪ್ರವೀಣ್ ಶೆಟ್ಟಿಯವರ ಡೈನಾಮಿಕ್ ನಾಯಕತ್ವದಲ್ಲಿ ಪ್ರಾರಂಭಗೊಂಡಿತು. ಬಳಿಕ ತನ್ನ ಶಾಖೆಗಳನ್ನು ವಿಸ್ತರಿಸಿಕೊಂಡು ಇಂದು ಫಾರ್ಚ್ಯೂನ್ ಗ್ರೂಪ್ ಅಭೂತಪೂರ್ವವಾಗಿ ಬೆಳೆದುನಿಂತಿದೆ. ಅರಬ್ ದೇಶದಲ್ಲಿ ಭಾರೀ ಜನಮನ್ನಣೆ ಗಳಿಸಿರುವ ಕಂಪೆನಿಯು ಇದೀಗ ಪ್ರವೀಣ್ ಶೆಟ್ಟಿಯವರ ಕನಸಿನಂತೆ ಅವರ ತಾಯಿನಾಡಿನಲ್ಲೂ ಆರಂಭಿಸಿರುವುದು ಕರಾವಳಿ ಜನತೆಗೆ ಮತ್ತಷ್ಟು ಖುಷಿ ನೀಡಿದೆ. ಫಾರ್ಚ್ಯೂನ್ ಗ್ರೂಪ್ಸ್ ದುಬೈ, ಯುಎಇ (ಯುನೈಟೆಡ್ ಅರಬ್ ಎಮಿರೇಟ್ಸ್), ಟಿಬಿಲಿಸಿ (ಜಾರ್ಜಿಯಾ) ಮತ್ತು ಕರ್ನಾಟಕ (ಭಾರತ)ದಲ್ಲಿ ಹೋಟೆಲ್ಗಳನ್ನು ಹೊಂದಿದೆ.
ಬಾರ್ ದುಬೈಯ ಫಾರ್ಚೂನ್ ಏಟ್ರಿಯಮ್ ಹೋಟೆಲ್ (4ಸ್ಟಾರ್), ದುಬೈನ ಫಾರ್ಚೂನ್ ಪಾರ್ಕ್ ಹೋಟೆಲ್, ದುಬೈ ಇನ್ವೆಸ್ಟ್ಮೆಂಟ್ಸ್ ಪಾರ್ಕ್ (4 ಸ್ಟಾರ್), ಫಾರ್ಚೂನ್ ಕರಾಮಾ ಹೋಟೆಲ್, ದುಬೈ (3 ಸ್ಟಾರ್), ದುಬೈ ಗ್ರ್ಯಾಂಡ್ ಹೋಟೆಲ್ ಬೈ ಫಾರ್ಚೂನ್, ಅಲ್ ಕುಸೈಸ್, ದುಬೈ (4 ಸ್ಟಾರ್), ಫಾರ್ಚೂನ್ ಪ್ಲಾಜಾ ಹೋಟೆಲ್, ಅಲ್ ಕುಸೈಸ್, ದುಬೈ – 3 ಸ್ಟಾರ್ ಫಾರ್ಚೂನ್ ಹೋಟೆಲ್ ಡೇರಾ, ದುಬೈ(3 ಸ್ಟಾರ್), ಫಾರ್ಚೂನ್ ಪ್ಯಾಲೇಸ್ ಹೋಟೆಲ್, ಟಿಬಿಲಿಸಿ (4 ಸ್ಟಾರ್), ಉಡುಪಿಯ ಬ್ರಹ್ಮಾವರದ ಫಾರ್ಚೂನ್ ಪ್ಲಾಜಾ ಹೋಟೆಲ್ (4 ಸ್ಟಾರ್), ಕುಂದಾಪುರದ ವಕ್ವಾಡಿಯ ಫಾರ್ಚೂನ್ ವಿಲೇಜ್ ಹೋಟೆಲ್ (3 ಸ್ಟಾರ್).