ಅಜೆಕಾರು : ಸದಾ ಸಮಾಜಮುಖಿ ಕೆಲಸದಲ್ಲಿ ಮುಂಚೂಣಿ ಯಲ್ಲಿರುವ ಉಡುಪಿಯ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಸಂಸ್ಥೆ ಆರೋಗ್ಯ, ಶೈಕ್ಷಣಿಕ, ಬಡಹೆಣ್ಣುಮಕ್ಕಳ ಮದುವೆ, ಬಡವರಿಗೆ ಮನೆ.. ಸಮಾಜದಲ್ಲಿ ನೊಂದವರಿಗೆ ಸಹಾಯ ಹಸ್ತವನ್ನು ನೀಡುತಿದ್ದು, ಕೋವಿಡ್ ನ ಈ ಸಂಕಷ್ಟದ ಸಮಯದಲ್ಲೂ ಅಧಿಕ ಪಡಿತರ ಸಾಮಗ್ರಿ ಬಡ ಜನರಿಗೆ ಜಿಲ್ಲೆಯಾದ್ಯಂತ ವಿತರಿಸುತಿದ್ದು ಅಜೆಕಾರಿನ ಒಟ್ಟು 40 ಕ್ಕೂ ಹೆಚ್ಚು ಆಶಾ ಕಾರ್ಯಕರ್ತೆ ಹಾಗೂ ಇತರ ಬಡ ಜನರಿಗೆ ಪಡಿತರ ಕಿಟ್ ವಿತರಣೆ ಕಾರ್ಯಕ್ರಮ ನಡೆಯಿತು.
ಅಜೆಕಾರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಿಟ್ ವಿತರಿಸಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ,
ವಿಶ್ವವೇ ಕೊರೊನಾ ವೈರಸ್ ನಿಂದ ತತ್ತರಿಸಿರುವ ಸಂದರ್ಭದಲ್ಲಿ. ಆಶಾ ಕಾರ್ಯಕರ್ತೆಯರು, ತಮ್ಮ ತಮ್ಮ ವ್ಯಾಪ್ತಿಯ ಪ್ರತಿ ಮನೆಗಳಿಗೂ ಭೇಟಿ ನೀಡಿ, ಮಾಹಿತಿ ಸಂಗ್ರಹಿಸಿ ಕೊರೊನಾ ನಿರ್ಮೂಲನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಅವರ ಇಂತಹ ಕಾರ್ಯ ಅಭಿನಂದನಾರ್ಹವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಮಲಬಾರ್ ಗೋಲ್ಡ್ ಮುಖ್ಯಸ್ಥ ರಾಘವೇಂದ್ರ ನಾಯಕ್, ಸಂಸ್ಥೆಯ ನಿತ್ಯಾನಂದ ನಾಯಕ್, ಸುಜಿತ್ ನಾಯಕ್, ಆರೋಗ್ಯಾಧಿಕಾರಿ ಅನುಷಾ ಶೆಟ್ಟಿ, ಹಾಗೂ ಆಶಾ ಕಾರ್ಯಕರ್ತೆ ಯರು ಭಾಗವಹಿಸಿದ್ದರು.