ಕಾರ್ಕಳ: ಬಗೆಬಗೆ ಮೀನಿನ ಖಾದ್ಯ ಸವಿದ ತುಳುನಾಡಿಗರು

ಕಾರ್ಕಳ: ಜ. 26 ರಿಂದ 30 ರ ವರೆಗೆ ಕಾರ್ಕಳದ ಯರ್ಲಪಾಡಿಯಲ್ಲಿ ಪರಶುರಾಮ ಥೀಮ್ ಪಾರ್ಕ್ ನ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಲ್ಪೆ ಮೀನುಗಾರರ ಉತ್ಪಾದಕ ಕಂಪನಿಯು ಆಹಾರ ಮಳಿಗೆ ಮತ್ತು ಕಂಪನಿಯ ಉತ್ಪನ್ನಗಳ ಪ್ರದರ್ಶನ ಮಳಿಗೆ ಹಾಕಿದ್ದು, ಕಂಪನಿಯ ಮೀನುಗಾರ ಮಹಿಳೆಯರು, ಆಹಾರ ಮಳಿಗೆಯಲ್ಲಿ ವಿವಿಧ ಮೀನಿನ ಖಾದ್ಯಗಳು, ಶುಚಿ ರುಚಿಯಾದ ಅಡುಗೆಗಳನ್ನು ಮಾರಾಟಕ್ಕಿಟ್ಟಿದ್ದರು.
ಉತ್ಪನ್ನಗಳ ಪ್ರದರ್ಶನದ ಮಳಿಗೆಯಲ್ಲಿ ಕಂಪನಿಯ ಸದಸ್ಯರು ತಯಾರಿಸಿದ ಮೀನಿನ ಉಪ್ಪಿನಕಾಯಿ, ಚಟ್ನಿ ಪುಡಿ, ಒಣ ಮೀನು, ಮೀನಿನ ಚಕ್ಕುಲಿ, ಮೀನಿನ ಹಪ್ಪಳ ಮತ್ತು ಮೀನಿನ ಮಸಾಲ ಪೌಡರ್ ಗಳನ್ನು ಮಾರಾಟಕ್ಕಿಟ್ಟಿದ್ದರು.

ಈ ಸಂದರ್ಭದಲ್ಲಿ ಸಚಿವರು, ಅಧಿಕಾರಿಗಳು ಮತ್ತು ವಿಶೇಷ ಅತಿಥಿಗಳು ಮಳಿಗೆಗೆ ಭೇಟಿ ನೀಡಿದರು.
ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಸಚಿವ ಎಸ್. ಅಂಗಾರ ಅವರು ಮಲ್ಪೆ ಮೀನುಗಾರರ ಉತ್ಪಾದಕರ ಕಂಪನಿಯ ಮಳಿಗೆಗೆ ಭೇಟಿ ನೀಡಿ ಕಂಪನಿಯ ಮೌಲ್ಯವರ್ಧಿತ ಉತ್ಪನ್ನಗಳ ಬಗ್ಗೆ ಕಂಪನಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅವರೊಂದಿಗೆ ಮಾತುಕತೆ ನಡೆಸಿದರು.