ಉಡುಪಿ: ಮಸೀದಿಯಲ್ಲಿ ನಮಾಝ್ ಮಾಡುವ ವೇಳೆ ಹೃದಯಘಾತದಿಂದ ಕುಸಿದುಬಿದ್ದು ವ್ಯಕ್ತಿ ಮೃತ್ಯು

ಉಡುಪಿ: ಉಡುಪಿ ಸಿಟಿ ಬಸ್ ನಿಲ್ದಾಣ ಸಮೀಪದ ಅಂಜುಮಾನ್ ಮಸೀದಿಯಲ್ಲಿ ಶುಕ್ರವಾರದ ಜುಮಾ ನಮಾಝ್ ವೇಳೆ ವ್ಯಕ್ತಿಯೊಬ್ಬರು ಕುಳಿತಲ್ಲಿಯೇ ಕುಸಿದು ಬಿದ್ದು ಮೃತಪಟ್ಟ ಬಗ್ಗೆ ವರದಿಯಾಗಿದೆ. ಮೃತರನ್ನು ದೊಡ್ಡಣಗುಡ್ಡೆ ಕರಂಬಳ್ಳಿ ನಿವಾಸಿ ಮುಸ್ತಾಕ್(55) ಎಂದು ಗುರುತಿಸಲಾಗಿದೆ. ಇವರು ಮಧ್ಯಾಹ್ನ ಜುಮಾ ನಮಾಝ್‌ಗಾಗಿ ಮಸೀದಿಗೆ ಬಂದಿದ್ದು, ಅಲ್ಲಿ ಸುನ್ನತ್ ನಮಾಝ್ ಮಾಡಿ, ಬಳಿಕ ಖುತ್ಭಾ ಕೇಳಲು ಕುಳಿತಿದ್ದಾಗ ಹೃದಯಾಘಾತದಿಂದ ಅಲ್ಲೇ ಕುಸಿದು ಬಿದ್ದು ಸ್ಥಳದಲ್ಲಿಯೇ ಮೃತಪಟ್ಟರು.

ಮಣಿಪಾಲ: “ನಾರಿ ಶೃಂಗ” ಪೂರ್ವ ಪ್ರಾಥಮಿಕ ಬೋಧನಾ ಸಾಧನಗಳ ಪ್ರದರ್ಶನ

ಮಣಿಪಾಲ: ಶ್ರೀ ಶಾರದ ಟೀಚರ್ ಟ್ರೈನಿಂಗ್ ಇನ್ಸ್ಟಿಟ್ಯೂಟ್, ಮಣಿಪಾಲ ಈ ಸಂಸ್ಥೆಯ ವತಿಯಿಂದ ಪೂರ್ವಪ್ರಾಥಮಿಕ ಶಾಲಾ ಶಿಕ್ಷಕಿಯರಿಗೆ ಫೆ.10 ಶನಿವಾರ ಶ್ರೀ ಶಾರದ ಟೀಚರ್ ಟ್ರೈನಿಂಗ್ ಇನ್ಸ್ಟಿಟ್ಯೂಟ್, ಕ್ರಿಸ್ಟಲ್ ಬಿಜ್‍ಹಬ್, ಒಂದನೇ ಮಹಡಿ, ಡಿಸಿ ಕಛೇರಿ ಬಳಿ, ಮಣಿಪಾಲ, ಇಲ್ಲಿ ಬೆಳಗ್ಗೆ 10 ರಿಂದ ಮಧ್ಯಾಹ್ನ 2ರವರೆಗೆ “ನಾರಿ ಶೃಂಗ” ಎಂಬ ಶೀರ್ಷಿಕೆಯ ಆಡಿಯಲ್ಲಿ ಬೋಧನಾ ಸಾಧನಗಳ ಪ್ರದರ್ಶನವನ್ನು ಕೆ.ಎಂ.ಸಿಯ ಮಕ್ಕಳ ವಿಭಾಗದ ಪ್ರೊಫೆಸರ್ ಡಾ. ಪುಷ್ಪ ಕಿಣಿಯವರು ಉದ್ಘಾಟಿಸಲಿದ್ದಾರೆ. ಈ ಪ್ರದರ್ಶನವು ಕಲಿಕಾ ಕೌಶಲ್ಯ ಮತ್ತು […]

ಫೆ.10: ಮಿಷನ್ ಆಸ್ಪತ್ರೆಯ ಹೊಸ ಕ್ಯಾಂಪಸ್ ಲೋಂಬಾರ್ಡ್ ಕಾಲೇಜ್ ಆಫ್ ಪ್ಯಾರಾ ಮೆಡಿಕಲ್ ಆ್ಯಂಡ್ ಅಲೈಡ್ ಹೆಲ್ತ್ ಸೈಯನ್ಸ್ ಉದ್ಘಾಟನೆ

ಉಡುಪಿ: ಲೋಂಬಾರ್ಡ್ ಮೆಮೋರಿಯಲ್ (ಮಿಷನ್) ಆಸ್ಪತ್ರೆಯ ಹೊಸ ಕ್ಯಾಂಪಸ್ “ಲೋಂಬಾರ್ಡ್ ಕಾಲೇಜ್ ಆಫ್ ಪ್ಯಾರಾ ಮೆಡಿಕಲ್ ಆ್ಯಂಡ್ ಅಲೈಡ್ ಹೆಲ್ತ್ ಸೈಯನ್ಸ್” ಫೆ.10 ರಂದು ಸಂಜೆ 4 ಗಂಟೆಗೆ ಉದ್ಘಾಟನೆಗೊಳ್ಳಲಿದೆ. ನೂತನ ಸಂಸ್ಥೆಯನ್ನು ರೆ.ಫಾ.ಹೇಮಚಂದ್ರ ಕುಮಾರ್ ಬಿಷಪ್ ಅವರು ಉದ್ಘಾಟಿಸಲಿದ್ದಾರೆ. ಲೊಂಬಾರ್ಡೋ ಮೆಮೋರಿಯಲ್ ಆಸ್ಪತ್ರೆಯ ನಿರ್ದೇಶಕ ಡಾ.ಸುನಿಲ್ ಜತ್ತನ್ನ ಅಧ್ಯಕ್ಷತೆ ವಹಿಸಲಿದ್ದಾರೆ. ಉಡುಪಿ ಶಾಸಕ ಯಶ್ ಪಾಲ್ ಸುವರ್ಣ, ಮಾಜಿ ಶಾಸಕ ವಿನಯ್ ಕುಮಾರ್ ಸೊರಕೆ, ಜಿಲ್ಲಾ ಸರ್ಜನ್ ಡಾ.ವೀಣಾ ಕುಮಾರಿ ಎಂ, ಕಿನ್ನಿಮುಲ್ಕಿ ವಾರ್ಡ್‍ನ ಕೌನ್ಸಿಲರ್ […]

ಶ್ರೀ ಶಾರದ ಟೀಚರ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ ನಾರಿ ಶೃಂಗ: ಪೂರ್ವ ಪ್ರಾಥಮಿಕ ಬೋಧನಾ ಸಾಧನಗಳ ಪ್ರದರ್ಶನ

ಮಣಿಪಾಲ: ಶ್ರೀ ಶಾರದ ಟೀಚರ್ ಟ್ರೈನಿಂಗ್ ಇನ್ಸ್ಟಿಟ್ಯೂಟ್, ಮಣಿಪಾಲ ಈ ಸಂಸ್ಥೆಯ ವತಿಯಿಂದ ಪೂರ್ವ ಪ್ರಾಥಮಿಕ ಶಾಲಾ ಶಿಕ್ಷಕಿಯರಿಗೆ ಫೆ. 10 ಶನಿವಾರ ಶ್ರೀ ಶಾರದ ಟೀಚರ್ ಟ್ರೈನಿಂಗ್ ಇನ್ಸ್ಟಿಟ್ಯೂಟ್, ಕ್ರಿಸ್ಟಲ್ ಬಿಜ್‌ಹಬ್, ಒಂದನೇ ಮಹಡಿ, ಡಿಸಿ ಕಛೇರಿ ಬಳಿ, ಮಣಿಪಾಲ, ಇಲ್ಲಿ ಬೆಳಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ “ನಾರಿ ಶೃಂಗ” ಎಂಬ ಶೀರ್ಷಿಕೆ ಅಡಿಯಲ್ಲಿ ಬೋಧನಾ ಸಾಧನಗಳ ಪ್ರದರ್ಶನವನ್ನು ಕೆ.ಎಂ.ಸಿಯ ಮಕ್ಕಳ ವಿಭಾಗದ ಪ್ರೊಫೆಸರ್ ಡಾ. ಪುಷ್ಪ ಕಿಣಿಯವರು ಉದ್ಘಾಟಿಸಲಿದ್ದಾರೆ. ಈ ಪ್ರದರ್ಶನವು […]

ಮುಂಡ್ಕಿನಜೆಡ್ಡು: ಶ್ರೀ ಗೋಪಾಲಕೃಷ್ಣ ಮಂದಿರದಲ್ಲಿ ಸಪ್ತಜಾಮ ಅಖಂಡ ಭಜನಾ ಮಹೋತ್ಸವ

ಮುಂಡ್ಕಿನಜೆಡ್ಡು: ಶ್ರೀ ಗೋಪಾಲಕೃಷ್ಣ ಮಂದಿರದಲ್ಲಿ ಫೆ. 4 ರಿಂದ 11 ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರಗುತ್ತಿವೆ. ಫೆ.10 ಬೆಳಿಗ್ಗೆ 9 ರಿಂದ ಸಪ್ತಜಾಮ ಅಖಂಡ ಭಜನೆ ಪ್ರಾರಂಭ ಮಧ್ಯಾಹ್ನ 12.30 ಸಾರ್ವಜನಿಕ ಅನ್ನಸಂತರ್ಪಣೆ ಫೆ.11 ಬೆಳಿಗ್ಗೆ 6 ಗಂಟೆಗೆ ಸಪ್ತಜಾಮ ಭಜನೆ ಮುಕ್ತಾಯ, ಮಹಾಪೂಜೆ, ಮಂಗಳ ಹಾಗೂ ಪ್ರಸಾದ ವಿತರಣೆ.