ಬೆಳ್ತಂಗಡಿ: ಮಂಗಳವಾರ ಸಂಜೆ ತಾಲೂಕಿನಾದ್ಯಂತ ಭಾರೀ ಸಿಡಿಲು ಮಿಂಚಿನಿಂದೊಡಗೂಡಿದ ಮಳೆಯಾಗಿದ್ದು, 1800 ಅಡಿ ಎತ್ತರದ ಗಡಾಯಿಕಲ್ಲಿಗೆ ಸಿಡಿಲು ಬಡಿದು ಬೆಂಕಿ ಕಾಣಿಸಿಕೊಂಡಿದೆ.
ಕಳೆದೆರಡು ದಿನಗಳಿಂದ ಶಿಬಾಜೆ ಮತ್ತು ಅಳದಂಗಡಿ ಸುತ್ತಮುತ್ತ ಆಲಿಕಲ್ಲು ಮಳೆಯಾಗಿದೆ.
ಗಾಳಿ ಮಳೆ ಸಿಡಿಲಿನ ಆರ್ಭಟಕ್ಕೆ ಗಡಾಯಿಕಲ್ಲಿನಲ್ಲಿ ಕೆಲ ಕಾಲ ಬೆಂಕಿ ಕಾಣಿಸಿಕೊಂಡಿದ್ದು, ಇದನ್ನು ಸ್ಥಳೀಯರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಮಳೆಗಾಲದಲ್ಲಿ ಈ ಪ್ರದೇಶದಲ್ಲಿ ಗುಡುಗು ಮಿಂಚು ಸಾಮಾನ್ಯವಾಗಿದೆ ಎಂದು ಇಲ್ಲಿನ ಸ್ಥಳೀಯರು ಹೇಳುತ್ತಾರೆ.