ಮೆದುಳಿನ ಕ್ಯಾನ್ಸರ್ ನಿಂದ ಬಳಲುತ್ತಿರುವ ಬಾಲಕಿಯ ಚಿಕಿತ್ಸೆಗೆ ಆರ್ಥಿಕ ನೆರವು ಯಾಚನೆ

ಉಡುಪಿ: ಮಾರಕ ಮೆದುಳಿನ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿರುವ ಪಡುಬಿದ್ರಿ ಗುಡ್ಡೆಚ್ಚಿಯ ನಿವಾಸಿ ಸುನಂದ ಆಚಾರ್ಯ ಅವರ ಮಗಳಾದ 8 ವರ್ಷದ ತ್ರಿಶಾ ಆಚಾರ್ಯ ಅವರ ಚಿಕಿತ್ಸೆಗೆ ಆರ್ಥಿಕ‌ ನೆರವಿಗಾಗಿ ಸಹಾಯಹಸ್ತ ಚಾಚಿದ್ದಾರೆ.

ಅತ್ಯಂತ ಕಡುಬಡತನದಲ್ಲಿ ಜೀವನ ಸಾಗಿಸುತ್ತಿರುವ ಈ ಕುಟುಂಬಕ್ಕೆ ವಿಧಿ ನೀಡಿದ ಪರೀಕ್ಷೆ ಎದುರಿಸಲಾರದೆ ಒದ್ದಾಡುತ್ತಿದ್ದಾರೆ. ತ್ರಿಶಾ ಆಚಾರ್ಯ ಅವರು ಸದ್ಯ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆಗೆ ದೊಡ್ಡ ಮೊತ್ತದ ಅವಶ್ಯಕತೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ.

ಕಡುಬಡತನದಲ್ಲಿ ಇರುವ ಕುಟುಂಬಕ್ಕೆ ದೊಡ್ಡ ಮೊತ್ತವನ್ನು ಮಗುವಿನ ಚಿಕಿತ್ಸೆಗೆ ಹೊಂದಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ದಾನಿಗಳಿಂದ ಆರ್ಥಿಕ ಸಹಾಯ ಯಾಚಿಸಿದ್ದಾರೆ‌. ಆರ್ಥಿಕ ನೆರವು ನೀಡಬಯಸುವ ದಾನಿಗಳು ಈ ಕೆಳಗಿನ ಖಾತೆಗೆ ದೇಣಿಗೆ ನೀಡಬಹುದು.
1) Name : Jagadeesh
Udupi padubidri
A/C No: 6102500100655301
IFSC code: KARB0000610

Phone pay no;
9900361850

2) Name: Thrisha
Udupi Padubidri
A/c no: 01382310000638
IFSC code: SYNB0000138