ಉಡುಪಿ: ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ ದೇಶವು100 ಕೋಟಿ ಲಸಿಕೆ ನೀಡಿ ವಿಶ್ವದಲ್ಲೇ ಮಹತ್ತರ ಸಾಧನೆ ಮಾಡಿದ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಸತ್ಯಾನಂದ ನಾಯಕ್ ಅವರ ನೇತೃತ್ವದಲ್ಲಿ ಆತ್ರಾಡಿ ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿ ಸೇವೆ ಸಲ್ಲಿಸುತ್ತಿದ್ದ ಆರೋಗ್ಯ ಕಾರ್ಯಕರ್ತರಾದ ಯಮುನಾ ಸಿಸ್ಟರ್, ಆಶಾ ನಾಯ್ಕ್, ಜರೀನಾ, ಕಾಂತಿ ಪೂಜಾರಿ, ಸರೋಜಿನಿ ನಾಯ್ಕ್ ಅವರಿಗೆ ಶಾಲು ಹೊದಿಸಿ ಫಲ ಪುಷ್ಪವನ್ನು ಕೊಟ್ಟು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷೆ ರೂಪ ಶೆಟ್ಟಿ, ಉಪಾಧ್ಯಕ್ಷ ರತ್ನಾಕರ್ ಶೆಟ್ಟಿ, ಪಂಚಾಯತ್ ಸದಸ್ಯರಾದ ಗಂಗಾಧರ್ ಪ್ರಭು, ಪ್ರತಿಮಾ ನಾಯ್ಕ್, ಹರಿಣಿ ಶೆಟ್ಟಿ ಮತ್ತು ಬೂತ್ ಸಮಿತಿ ಅಧ್ಯಕ್ಷರು ವಸಂತ್ ಶೆಟ್ಟಿ ಚೆನ್ನಿಬೆಟ್ಟು, ಸತ್ಯನಾರಾಯಣ, ರಾಘವೇಂದ್ರ ಹೆಗ್ಡೆ,ಜಗದೀಶ್ ಕಾಂಚನ್, ಮುಖ್ಯ ಶಿಕ್ಷಕಿ ಲೀಲಾವತಿ ಮುಂತಾದವರು ಉಪಸ್ಥಿತರಿದ್ದರು.