ಅಜ್ಜರಕಾಡು: ಕ್ರೀಡಾಪಟುಗಳಿಂದ ಸ್ವಚ್ಛತಾ ಕಾರ್ಯಕ್ರಮ

ಉಡುಪಿ: ಸ್ವಚ್ಛತಾ ಅಭಿಯಾನದ ಅಂಗವಾಗಿ ಉಡುಪಿ ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆಯ ವತಿಯಿಂದ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕ್ರೀಡಾಪಟುಗಳು ಒಳಾಂಗಣ ಕ್ರೀಡಾಂಗಣ, ಹೊರಾಂಗಣ ಕ್ರೀಡಾಂಗಣ ಹಾಗೂ ಅಜ್ಜರಕಾಡು ಭುಜಂಗ್ ಪಾರ್ಕ್ ಸುತ್ತಮುತ್ತ ಶ್ರಮದಾನದ ಮೂಲಕ ಸ್ವಚ್ಛತೆ ಮಾಡಿದರು. ಈ ಸಂದರ್ಭದಲ್ಲಿ ಉಡುಪಿ ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕ ರೋಶನ್ ಕುಮಾರ್ ಶೆಟ್ಟಿ, ಅಥ್ಲೆಟಿಕ್ ತರಬೇತುದಾರರಾದ ಅನಂತ ರಾಮ್, ಶಾಲಿನಿ ಶೆಟ್ಟಿ, ಅಬ್ಬಾಸ್, […]

ಕಾಂಗ್ರೆಸ್ ಪಕ್ಷವನ್ನು ಫಿನಾಯಿಲ್ ಹಾಕಿ ತೊಳೆಯಬೇಕಿದೆ: ಸಚಿವ ಅಶ್ವಥ್ ನಾರಾಯಣ್

ಬೈಂದೂರು: ಕಾಂಗ್ರೆಸ್ ಪಕ್ಷವನ್ನು ಫಿನಾಯಿಲ್ ಹಾಕಿ ತೊಳೆಯಬೇಕಿದೆ. ಅವರು ನಮ್ಮ ದೇಶದಲ್ಲಿ ಬೇಡವಾದ ಸಂಸ್ಕೃತಿ, ಬೇಡವಾದ ವಿಚಾರ, ಬೇಡವಾದ ಆಡಳಿತ ಕೊಟ್ಟು, ದೇಶಕ್ಕೆ ಸಮಸ್ಯೆಯಾದ ಪಕ್ಷವಾಗಿದೆ. ಸಂಪೂರ್ಣವಾಗಿ ಕುಟುಂಬ ಆಧಾರಿತವಾಗಿ ಕೆಲಸ ಮಾಡುತ್ತಿರುವ ಪಕ್ಷದ ಎಂದರೆ, ಅದು ಕಾಂಗ್ರೆಸ್ ಪಕ್ಷ ಎಂದು ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ಟೀಕಿಸಿದರು. ಇಂದು ಬೈಂದೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ನಮ್ಮ ದೇಶಕ್ಕೆ ಪ್ರಸ್ತುತವಲ್ಲ. ಅದು ಜನರ ಪಕ್ಷನೂ ಅಲ್ಲ, ಅದು ಎಲ್ಲೋ ಫಾರಿನ್ ಪಾರ್ಟಿ, ಅದಕ್ಕಾಗಿ […]

ಜಿಲ್ಲೆಗೊಂದು ಸರಕಾರಿ ವೈದ್ಯಕೀಯ ಕಾಲೇಜು ನಿರ್ಮಾಣ ಮಾಡುವ ಯೋಚನೆ ಇದೆ: ಸಚಿವ ಡಾ. ಅಶ್ವಥ್ ನಾರಾಯಣ್

ಕುಂದಾಪುರ: ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಸರಕಾರಿ ವೈದ್ಯಕೀಯ ಕಾಲೇಜು ಮಾಡುವ ಯೋಚನೆ ಇದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ್ ಹೇಳಿದರು. ಶನಿವಾರ ಕೋಟೇಶ್ವರದಲ್ಲಿ ಮಾತನಾಡಿದ ಅವರು, ಭಾರತ ಸರಕಾರ ಮತ್ತು ರಾಜ್ಯ ಸರಕಾರಗಳ ಅನುದಾನದೊಂದಿಗೆ ಉಡುಪಿಯಲ್ಲಿ ಸರಕಾರಿ ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ಬೇಡಿಕೆ ಇದೆ. ಶೀಘ್ರದಲ್ಲಿ ನಿರ್ಣಯ ಕೈಗೊಳ್ಳುತ್ತೇವೆ ಎಂದರು ಕರ್ನಾಟಕ ರಾಜ್ಯದಲ್ಲಿ ಶೇ.85 ಮೊದಲ ಡೋಸ್ ಹಾಗೂ ಶೇ.45 ಎರಡನೇ ಡೋಸ್ ಕೋವಿಡ್ ಲಸಿಕೆ ನೀಡಲಾಗಿದೆ. ಎರಡನೇ ಡೋಸ್ ನಲ್ಲಿ ದೇಶದಲ್ಲೇ […]

ಅತೀ ದೊಡ್ಡ ಎಲೆಕ್ಟ್ರಿಕಲ್ ಬ್ರಾಂಡ್ ಶೋರೂಮ್ “ಭಾರತ್ ರಿಟೇಲರ್ಸ್” ಇದೀಗ ಮಂಗಳೂರಿನಲ್ಲಿ ಆರಂಭ..!

ಮಂಗಳೂರು: ಒಂದೇ ಸೂರಿನಡಿ ಹ್ಯಾವೆಲ್ಸ್ ಮತ್ತು‌ ಜಿಎಮ್ ಮ್ಯಾಡುಲೆರ್ ಎಲೆಕ್ಟ್ರಿಕಲ್ ಪ್ರೊಡೆಕ್ಟ್ ನಂತಹ ವಿಶ್ವದ ಎಲ್ಲ ಬ್ರಾಂಡೆಡ್ ಉತ್ಪನ್ನಗಳ ಅತೀ ದೊಡ್ಡ ಎಲೆಕ್ಟ್ರಿಕಲ್ ಬ್ರಾಂಡ್ ಶೋರೂಮ್ “ಭಾರತ್ ರಿಟೇಲರ್ಸ್” ಇದೀಗ ಮಂಗಳೂರಿನಲ್ಲಿ ಆರಂಭಗೊಂಡಿದೆ. ಸಿ.ವಿ. ನಾಯಕ್ ಹಾಲ್ ಎದುರು, ಬಂಟ್ಸ್ ಹಾಸ್ಟೆಲ್ ರೋಡ್, ಕೊಡಿಯಲ್ ಬೈಲ್, ಮಂಗಳೂರು ಇಲ್ಲಿ ನೂತನ ಭಾರತ್ ಎಲೆಕ್ಟ್ರಿಕಲ್ ಶೋರೂಮ್ ಶುಭಾರಂಭಗೊಂಡಿದೆ. ವಿಶ್ವದ ಅತ್ಯುತ್ತಮ ಬ್ರಾಂಡೆಡ್ ಎಲೆಕ್ಟ್ರಿಕಲ್ ಉಪಕರಣಗಳ ಸಂಗ್ರಹ ಇರುವ ಅತೀ ದೊಡ್ಡ ಎಲೆಕ್ಟ್ರಿಕಲ್ ಶೋರೂಮ್ ಇದಾಗಿದೆ. ಒಂದೇ ಸೂರಿನಡಿ ಹಾವೆಲ್ಸ್ […]

ಒಳ್ಳೆಯ ಗುಣಮಟ್ಟದ ಶಿಕ್ಷಣ ನೀಡಲು ಬದ್ಧ: ಸಚಿವ ಅಶ್ವಥ್ ನಾರಾಯಣ

ಉಡುಪಿ: ರಾಜ್ಯ ಉನ್ನತ ಶಿಕ್ಷಣ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ವಿದ್ಯುನ್ಮಾನ ಐಟಿ & ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ ಅಶ್ವಥ್ ನಾರಾಯಣ ಸಿ.ಎನ್ ಅವರು ಶನಿವಾರ ಬೈಂದೂರಿನಲ್ಲಿ ಸರ್ಕಾರಿ ಐಟಿಐ ಕಾಲೇಜು ಆವರಣದಲ್ಲಿ ಟಾಟಾ ಸಂಸ್ಥೆಯ ಸಹಯೋಗದೊಂದಿಗೆ ಐಟಿಐಗಳನ್ನು ಅಂತರಾಷ್ಟೀಯ ಮಟ್ಟಕ್ಕೆ ಉನ್ನತಿಕರಿಸುತ್ತಿರುವ ಕಾಮಗಾರಿ ಪರಿಶೀಲನೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿ ವಿಶ್ವ ದರ್ಜೆಯ ಐಟಿಐ ಸಂಸ್ಥೆ ಬೈಂದೂರಿನಲ್ಲಿ ನಿರ್ಮಾಣಗೊಳ್ಳುತ್ತಿರುವುದು ಹೆಮ್ಮೆಯ ಸಂಗತಿ. ಈ ಐಟಿಐ ಇಂಡ್ರಸ್ಟೀಸ್ […]