ಮಂಗಳೂರು: ಸಮಾಜ ಮತ್ತು ಕಥೊಲಿಕ್ ಸಭೆಗಾಗಿ ನಿಸ್ವಾರ್ಥ ಸೇವೆ ನೀಡಿದ ಕಮ್ಯೂನಿಟಿ ಎಂಪವರ್‌ಮೆಂಟ್ ಟ್ರಸ್ಟಿನ ಸ್ಥಾಪಕ ಟ್ರಸ್ಟಿ, ಫಾದರ್ ಮ್ಯಾಥ್ಯು ವಾಸ್ ಇವರ ಸ್ಮರಣಾರ್ಥವಾಗಿ ಕಮ್ಯುನಿಟಿ ಎಂಪವರ್‌ಮೆಂಟ್ ಟ್ರಸ್ಟ್ (ರಿ) ಮಂಗಳೂರು, ಕ್ರಿಶ್ಚಿಯನ್ ಸ್ಪೋರ್ಟ್ಸ್ ಅಸೋಶಿಯೇಶನ್ ಮಂಗಳೂರು, ಕಥೊಲಿಕ್ ಸಭಾ ಮಂಗಳೂರು ಪ್ರದೇಶ (ರಿ) ಮತ್ತುಕಥೊಲಿಕ್ ಸಭಾ,ಉಡುಪಿ ಪ್ರದೇಶ (ರಿ) ಇವರ ಸಹಯೋಗದಲ್ಲಿಇಂಟರ್ ಪ್ಯಾರಿಶ್ ಫುಟ್‌ಬಾಲ್ (ಪುರುಷರಿಗೆ) ಮತ್ತು ತ್ರೋಬಾಲ್ (ಮಹಿಳೆಯರಿಗೆ) ಟೂರ್ನಮೆಂಟ್ ಅನ್ನು ಅ. 22 ಭಾನುವಾರದಂದು ಸಂತ ಅಲೋಶಿಯಸ್ ಪಿಯು ಕಾಲೇಜಿನ ಮೈದಾನದಲ್ಲಿಆಯೋಜಿಸಲಾಗಿದೆ ಎಂದು ಫಾದರ್ ಮ್ಯಾಥ್ಯೂ ವಾಸ್ ಮೆಮೋರಿಯಲ್ ಇಂಟರ್ ಪ್ಯಾರಿಶ್‌ಟೂರ್ನಮೆಂಟ್ ನ ಸಂಚಾಲಕ ಅನಿಲ್ ಲೋಬೊ ಹೇಳಿದರು.
ಸೆ.14 ರಂದು ನಗರದ ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪದಕಗಳನ್ನು ಗೆದ್ದ ಕಥೊಲಿಕ್ ಸಮುದಾಯದ ಕ್ರೀಡಾಳುಗಳನ್ನು ಸನ್ಮಾನಿಸಲು ಯೋಜಿಸಲಾಗಿದೆ ಎಂದರು.
01.10.2022 ರಿಂದ 30.09.2023 ರವರೆಗೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಪದಕಗಳನ್ನು ಗೆದ್ದ ಕ್ರೀಡಾಳುಗಳ ಹೆಸರನ್ನು ಅಕ್ಟೋಬರ್ 15, 2023 ರೊಳಗೆ ಕಮ್ಯೂನಿಟಿ ಎಂಪವರ್ ಮೆಂಟ್ ಟ್ರಸ್ಟ್, ಮಿಲಾಗ್ರಿಸ್, ಮಂಗಳೂರು ಇಲ್ಲಿಗೆ ತಲುಪಿಸಬಹುದು ಅಥವಾ ದೂರವಾಣಿ/ವಾಟ್ಸ್ಆ್ಯಪ್ ಸಂಖ್ಯೆ : 9448379689, 9844502279 ಮೂಲಕವೂ ತಿಳಿಸಬಹುದಾಗಿದೆ.
ಟೂರ್ನಮೆಂಟಿನ ವಿವರ ಮತ್ತು ನಿಬಂಧನೆಗಳನ್ನು ಮಂಗಳೂರು ಮತ್ತು ಉಡುಪಿ ಧರ್ಮಪ್ರಾಂತ್ಯದ ಚರ್ಚ್ಗಳಿಗೆ ಕಳುಹಿಸಲಾಗಿದೆ. ಟೂರ್ನಮೆಂಟನಲ್ಲಿ ಭಾಗವಹಿಸುವ ಪಂಗಡಗಳು 15.10. 2023 ರೊಳಗೆ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕು.
ಪ್ರತಿವಿಜೇತ ಪಂಗಡಗಳಿಗೆ ರೂ.25000 (ಪ್ರಥಮ), ರೂ.15000 (ದ್ವಿತೀಯ), ರೂ.7500 (ತೃತೀಯ) ಬಹುಮಾನಗಳಿದ್ದು ಪ್ರಶಸ್ತಿ ಫಲಕವನ್ನು ನೀಡಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟಿನ ಮ್ಯಾನೆಜಿಂಗ್ ಟ್ರಸ್ಟಿ ಸೆಲೆಸ್ಟಿನ್ ಡಿಸೋಜ, ಕ್ಯಾಥೊಲಿಕ್ ಸಭಾ, ಮಂಗಳೂರು ಪ್ರದೇಶ ಅಧ್ಯಕ್ಷ ಆಲ್ವಿನ್ ಡಿ’ಸೋಜ, ಕ್ಯಾಥೊಲಿಕ್ ಸಭಾ, ಉಡುಪಿ ಪ್ರದೇಶ ಅಧ್ಯಕ್ಷ ಸಂತೋಷ್ ಕರ್ನೆಲಿಯೊ, ಕ್ರಿಶ್ಚಿಯನ್ ಸ್ಪೋರ್ಟ್ಸ್ ಅಸೋಸಿಯೇಶನ್ ನ ಕೋಶಾಧಿಕಾರಿ ಮೆಲ್ವಿನ್ ಪೆರಿಸ್ ಉಪಸ್ಥಿತರಿದ್ದರು.