ಭಾಷಣಕಾರ್ತಿ ಚೈತ್ರಾ ಕುಂದಾಪುರ ಪ್ರಕರಣಕ್ಕೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ: ಬಸವರಾಜ ಬೊಮ್ಮಾಯಿ

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬೈಂದೂರು ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಗೋವಿಂದ ಬಾಬು ಪೂಜಾರಿಗೆ ಟಿಕೆಟ್ ಕೊಡಿಸುವುದಾಗಿ ಆಮಿಷವೊಡ್ಡಿ 5 ಕೋಟಿ ರುಪಾಯಿ ವಂಚಿಸಿರುವ ಆರೋಪದ ಮೇರೆಗೆ ಪ್ರಚೋದನಾಕಾರಿ ಭಾಷಣಕಾರ್ತಿ ಚೈತ್ರಾಳನ್ನು ಮಂಗಳವಾರ ರಾತ್ರಿ ವಶಕ್ಕೆ ಪಡೆದಿದ್ದಾರೆ. ಈ ಪ್ರಕರಣದ ಬಗ್ಗೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದು, ಚೈತ್ರಾ ಕುಂದಾಪುರ ಕೇಸ್ ನ ವ್ಯವಹಾರಕ್ಕೂ ಬಿಜೆಪಿಗೂ ಸಂಬಂಧವಿಲ್ಲ. ಈ ಪ್ರಕರಣದಲ್ಲಿ ಸಮಗ್ರ ತನಿಖೆ ಆಗಬೇಕು, ಯಾರೇ ಇದ್ದರೂ ಕಠಿಣ ಶಿಕ್ಷೆ ಆಗಲಿ. ಸ್ವಾಮೀಜಿ ಅಲ್ಲ, ಯಾರೇ […]

ರಾಷ್ಟ್ರೀಯ ನ್ಯಾಯಾಂಗ ದತ್ತಾಂಶ ಗ್ರಿಡ್ ವೇದಿಕೆಯೊಂದಿಗೆ ಸುಪ್ರೀಂಕೋರ್ಟ್ ಏಕೀಕರಣ: ಜ. ಡಿವೈ ಚಂದ್ರಚೂಡ್

ನವದೆಹಲಿ: ಸುಪ್ರೀಂ ಕೋರ್ಟ್ ಶೀಘ್ರದಲ್ಲೇ ರಾಷ್ಟ್ರೀಯ ನ್ಯಾಯಾಂಗ ದತ್ತಾಂಶ ಗ್ರಿಡ್ (ಎನ್‌ಜೆಡಿಜಿ) ವೇದಿಕೆಯೊಂದಿಗೆ ಏಕೀಕರಣಗೊಳ್ಳಲಿದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿವೈ ಚಂದ್ರಚೂಡ್ ಗುರುವಾರ ಪ್ರಕಟಿಸಿದ್ದಾರೆ. ಇದು ತಾಲೂಕಿನಿಂದ ರಾಷ್ಟ್ರಮಟ್ಟದವರೆಗೆ ವಿವಿಧ ಹಂತಗಳ ನ್ಯಾಯಾಲಯಗಳು ಪ್ರಕರಣಗಳನ್ನು ಪ್ರಕ್ರಿಯೆಗೊಳಿಸುವ ಮತ್ತು ಪರಿಹರಿಸುವ ಹಾಗೂ ಪ್ರಕರಣಗಳ ಬ್ಯಾಕ್‌ಲಾಗ್‌ಗೆ ಸಂಬಂಧಿಸಿದ ಡೇಟಾದ ಆನ್‌ಲೈನ್ ಭಂಡಾರವಾಗಿ ಕಾರ್ಯನಿರ್ವಹಿಸುತ್ತದೆ. “ಒಂದು ಸಣ್ಣ ಘೋಷಣೆ. ಇದೊಂದು ಐತಿಹಾಸಿಕ ದಿನ. ಇದು ಒಂದು ವಿಶಿಷ್ಟವಾದ ಮತ್ತು ತಿಳಿವಳಿಕೆ ನೀಡುವ ವೇದಿಕೆಯಾಗಿದ್ದು, ಇದನ್ನು ಎನ್‌ಐಸಿ ಮತ್ತು ಸುಪ್ರೀಂ […]

ಚೀನಾದಿಂದ ಸೋಲಾರ್ ಮಾಡ್ಯೂಲ್ ಆಮದಿನಲ್ಲಿ 76 ಪ್ರತಿಶತ ಕುಸಿತ: ಸ್ವಾವಲಂಬನೆಯತ್ತ ಭಾರತದ ಚಿತ್ತ

ನವದೆಹಲಿ: ಜಾಗತಿಕ ಟ್ರೆಂಡ್‌ಗಳ ಹೊರತಾಗಿಯೂ, 2023 ರ ಮೊದಲಾರ್ಧದಲ್ಲಿ ಚೀನಾದಿಂದ ಸೋಲಾರ್ ಮಾಡ್ಯೂಲ್ ಆಮದಿನಲ್ಲಿ ಗಣನೀಯ ಪ್ರಮಾಣದ 76 ಪ್ರತಿಶತದಷ್ಟು ಕುಸಿತವನ್ನು ಭಾರತ ದಾಖಲಿಸಿದೆ. ಇದು ಸೌರ ಉತ್ಪಾದನೆಯಲ್ಲಿ ಸ್ವಾವಲಂಬನೆಯತ್ತ ನವದೆಹಲಿಯ ದೃಢವಾದ ಬದಲಾವಣೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೊಸ ವರದಿಯು ಗುರುವಾರ ತಿಳಿಸಿದೆ. ವರ್ಷದಿಂದ ವರ್ಷಕ್ಕೆ, ಚೀನಾದಿಂದ ಭಾರತದ ಸೌರ ಮಾಡ್ಯೂಲ್ ಆಮದುಗಳು 2022 ರ ಮೊದಲಾರ್ಧದಲ್ಲಿ 9.8 GW ನಿಂದ 2023 ರ ಅನುಗುಣವಾದ ಅವಧಿಯಲ್ಲಿ 2.3 GW ಗೆ ಕುಸಿದಿದೆ ಎಂದು ಜಾಗತಿಕ ಶಕ್ತಿ […]

ಮಂಗಳೂರು: ಗಣೇಶ ಚತುರ್ಥಿ ಹಿನ್ನೆಲೆ ಸೆ.19 ರಂದು ರಜೆ ಘೋಷಿಸಲು ಉಸ್ತುವಾರಿ ಸಚಿವರ ಸೂಚನೆ

ಮಂಗಳೂರು: ಗಣೇಶ ಹಬ್ಬದ ಆಚರಣೆಯ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯಲ್ಲಿ ಸರ್ಕಾರಿ ರಜೆಯನ್ನು ಸೆಪ್ಟೆಂಬರ್18 ರ ಬದಲು ಸೆಪ್ಟೆಂಬರ್ 19 ರಂದು ನೀಡಲು ಸೂಕ್ತ ಕ್ರಮ ಕೈಗೊಳ್ಳುವಂತೆ ದ.ಕ. ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್ ಅವರು ರಾಜ್ಯ ಮುಖ್ಯ ಕಾರ್ಯದರ್ಶಿಗೆ ಬುಧವಾರ ಸೂಚನೆ ನೀಡಿದ್ದಾರೆ. ವಿಧಾನ ಪರಿಷತ್ ಸದಸ್ಯ, ಶಾಸಕ ಕೆ.ಪ್ರತಾಪ್ ಸಿಂಹ್ ನಾಯಕ್ ಈ ಬಗ್ಗೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಹಬ್ಬವನ್ನು ಆಚರಿಸಲು ಸೆ.18 ರ ಸೋಮವಾರ ಸರ್ಕಾರಿ ರಜೆ ಎಂದು ಘೋಷಿಸಲಾಗಿದ್ದು, ಇದೀಗ ಅದನ್ನು ಮಾರ್ಪಡಿಸಿ […]