ಗಿರಿಜಾ ಹೆಲ್ತ್ ಕೇರ್ಸ್ ವತಿಯಿಂದ ಉಪ ಔಷಧ ನಿಯಂತ್ರಕರ ಬೀಳ್ಕೊಡುಗೆ

ಉಡುಪಿ: ಉಪ ಔಷಧ ನಿಯಂತ್ರಕರಾಗಿ ಉಡುಪಿಯಲ್ಲಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ನಾಗರಾಜ್ ಕೆ. ವಿ ಅವರನ್ನು ಅವರ ನಿಸ್ವಾರ್ಥ ಸೇವೆ ಹಾಗೂ ಕೋವಿಡ್ ಸಮಯದಲ್ಲಿ ಅಗತ್ಯ ಔಷಧ ಪೂರೈಕೆ ಮಾಡಲು ಹಗಲು ರಾತ್ರಿ ಅವರು ಪಟ್ಟ ಶ್ರಮಕ್ಕಾಗಿ ಗಿರಿಜಾ ಹೆಲ್ತ್ ಕೇರ್ ಮತ್ತು ಸರ್ಜಿಕಲ್ ವತಿಯಿಂದ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಹಿಂದೆ ಮಂಗಳೂರಿನಲ್ಲಿ ಕಾರ್ಯನಿರ್ವಹಿಸಿ ಜಿಲ್ಲೆಗೆ ನೂತನವಾಗಿ ಉಪ ಔಷಧ ನಿಯಂತ್ರಕರಾಗಿ ಆಗಮಿಸಿದ ಶಂಕರ್ ನಾಯ್ಕ್ ಅವರನ್ನು ಸ್ವಾಗತಿಸಿ ಗೌರವಿಸಲಯಿತು.

ಈ ಸಂದರ್ಭದಲ್ಲಿ ಗಿರಿಜಾ ಗ್ರೂಪ್ ಆಫ್ ಕಾನ್ಸರ್ನ್ಸ್ ನ ಸಿಎಂಡಿ ರವೀಂದ್ರ ಶೆಟ್ಟಿ, ಮತ್ತು ಗಿರಿಜಾ ಹೆಲ್ತ್ ಕೇರ್ ಮತ್ತು ಸರ್ಜಿಕಲ್ ನ ಪಾಲುದಾರ ಹರೀಶ್ ಕುಮಾರ್ ಔಷಧ ನಿಯಂತ್ರಣ ಕಚೇರಿಯ ಸಹಾಯಕ ಅಧಿಕಾರಿ ನಿರಂಜನ್ ಉಪಸ್ಥಿತರಿದ್ದರು.