ಉಡುಪಿ: ಕಳೆದ ಕೆಲವು ದಿನಗಳಿಂದ ಮಲ್ಪೆ ಪಡುಕರೆ ಕಡಲ ತೀರ ರಾತ್ರಿ ವೇಳೆ ನೀಲಿ ಬಣ್ಣದಿಂದ ರೇಡಿಯಂನಂತೆ ಹೊಳೆಯುತ್ತಿರುವುದು ಕಂಡುಬರುತ್ತಿದ್ದು, ಈ ನೀರ ಮಿಂಚುಳ್ಳಿ (bioluminescence)ಯ ಅದ್ಭುತ ದೃಶ್ಯಾವಳಿಗಳನ್ನು ಉಡುಪಿಯ ಖ್ಯಾತ ಛಾಯಾಗ್ರಾಹಕ ಫೋಕಸ್ ರಾಘು ಅವರು ತಮ್ಮ ಕ್ಯಾಮರಾದ ಮೂಲಕ ಸೆರೆ ಹಿಡಿದು ವಿನೂತನ ಸಾಧನೆ ಮಾಡಿದ್ದಾರೆ.
ಪೋಕಾಸ್ ರಾಘು ಅವರು ಅಂತರರಾಷ್ಟ್ರೀಯ ಛಾಯಾಚಿತ್ರಗ್ರಾಹಕರಾಗಿದ್ದು, ಅನೇಕ ಅಂತರರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ನಿಕೋನ್ ಸಂಸ್ಥೆ ಕರ್ನಾಟಕ ರಾಜ್ಯಕ್ಕೆ Nikon Influencer ಆಗಿ ನೇಮಕ ಮಾಡಿ ಹಳ್ಳಿ ಪ್ರತಿಭೆಯ ಪರಿಶ್ರಮಕ್ಕೆ ದೊಡ್ಡ ಗೌರವವನ್ನು ನೀಡಿದೆ. ಇವರು ಉಡುಪಿಯ ಖ್ಯಾತ ಛಾಯಾಗ್ರಾಹಕ ಗುರುದತ್ ಅವರ ಶಿಷ್ಯ.