ಖ್ಯಾತ ಗಾಯಕ ಅರ್ಜಿತ್ ಸಿಂಗ್ ದಿಢೀರ್ ನಿವೃತ್ತಿ ಘೋಷಣೆ.

ಸುಮಧುರ ಕಂಠದಿಂದ ಅಪಾರ ಜನಮನ್ನಣೆ ಗಳಿಸಿರುವ ಅರ್ಜಿತ್ ಸಿಂಗ್ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ.

ಹಿನ್ನೆಲೆ ಗಾಯನದಿಂದ ನಿವೃತ್ತಿ ಘೋಷಿಸುವ ಮೂಲಕ ಅರ್ಜಿತ್ ಸಿಂಗ್ ಅಚ್ಚರಿ ಮೂಡಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಈ ಸುದ್ದಿ ಹಂಚಿಕೊಂಡಿದ್ದಾರೆ. ಕೇಳುಗರ ಪ್ರೀತಿಗೆ ಧನ್ಯವಾದ ತಿಳಿಸಿ, ತಮ್ಮ ಪಯಣಕ್ಕೆ ವಿದಾಯ ಹೇಳಿದ್ದಾರೆ. ಭಾರಿ ಬೇಡಿಕೆಯ ಗಾಯಕ ಅರ್ಜಿತ್ ಸಿಂಗ್ ಈ ನಿರ್ಧಾರ ಭಾರಿ ಸಂಚಲನ ಸೃಷ್ಟಿಸಿದೆ.

ಹಿನ್ನೆಲೆ ಗಾಯನದಿಂದ ದೂರ ಸರಿದರೂ, ಸಂಗೀತವನ್ನು ಬಿಡುವುದಿಲ್ಲ ಎಂದು ಅರ್ಜಿತ್ ಸ್ಪಷ್ಟಪಡಿಸಿದ್ದಾರೆ. ಸ್ವತಂತ್ರವಾಗಿ ಸಂಗೀತ ಸಂಯೋಜನೆ ಮತ್ತು ರಚನೆಯಲ್ಲಿ ತೊಡಗಿಸಿಕೊಳ್ಳುವುದಾಗಿ ಹೇಳಿದ್ದಾರೆ. ಸಿನಿಮಾ ಹಿನ್ನಲೆ ಗಾಯನಕ್ಕೆ ವಿದಾಯ ಹೇಳುತ್ತಿದ್ದೇನೆ ಎಂದು ಅರ್ಜಿತ್ ಸಿಂಗ್ ಹೇಳಿದ್ದಾರೆ.

ಅರ್ಜಿತ್ ಸಿಂಗ್ ಈಗಾಗಲೇ ಒಪ್ಪಿಕೊಂಡು ರೆಕಾರ್ಡಿಂಗ್ ಮಾಡಿರುವ, ಮಾಡಲು ಬಾಕಿ ಇರುವ ಕೆಲ ಹಾಡುಗಳು ಮಾತ್ರ ಬಿಡುಗಡೆಯಾಗಲಿದೆ. ಕೆಲ ಸಿನಿಮಾ ಶೀಘ್ರದಲ್ಲೇ ತೆರೆಗೆ ಬರಲಿದೆ. ಇದರಲ್ಲಿ ಅರ್ಜಿತ್ ಸಿಂಗ್ ಹಿನ್ನಲೆ ಗಾಯಕರಾಗಿದ್ದಾರೆ.

ಅರಿಜಿತ್ ಸಿಂಗ್ ನಿವೃತ್ತಿ ಘೋಷಣೆಯಿಂದ ಅಭಿಮಾನಿಗಳು ಆಘಾತಗೊಂಡಿದ್ದಾರೆ. ನಿವೃತ್ತಿ ಹಿಂಪಡೆಯಲು ಮನವಿ ಮಾಡಿದ್ದಾರೆ. ಇದೇ ವೇಳೆ ಹಲವರು ಬಾಲಿವುಡ್ ಇಂಡಸ್ಟ್ರಿ, ಖ್ಯಾತ ಗಾಯಕ ಅರ್ಜಿತ್ ಸಿಂಗ್ ಅವರನ್ನು ಸರಿಯಾಗಿ ಗೌರವಿಸಿಲ್ಲ ಎಂದು ಆರೋಪಿಸಿದ್ದಾರೆ.

ಫೇಮ್ ಗುರುಕುಲ್’ ಮೂಲಕ ವೃತ್ತಿ ಆರಂಭಿಸಿದ ಅರ್ಜಿತ್, ‘ತುಮ್ ಹಿ ಹೋ’, ‘ಕೇಸರಿಯಾ’ ದಂತಹ ಹಿಟ್ ಹಾಡುಗಳನ್ನು ನೀಡಿದ್ದಾರೆ. ಅವರಿಗೆ ಎರಡು ರಾಷ್ಟ್ರೀಯ ಪ್ರಶಸ್ತಿ ಮತ್ತು ಪದ್ಮಶ್ರೀ ಪ್ರಶಸ್ತಿ ಲಭಿಸಿದೆ.