ಬೆಂಗಳೂರು: ಕರ್ನಾಟಕ ಸಂಗೀತ, ಉಭಯ ಗಾನ ವಿಶಾರದೆ, ಹಿಂದೂಸ್ತಾನಿ ಸಂಗೀತ, ಸುಗಮ ಸಂಗೀತ, ಸಂಗೀತ ಸಂಯೋಜಕಿ ಶಾಮಲಾ ಜಿ. ಭಾವೆ ಶುಕ್ರವಾರ ಬೆಳಿಗ್ಗೆ 6.30ಕ್ಕೆ ನಿಧನರಾದರು.
ಚಾಮರಾಜಪೇಟೆ ರುದ್ರಭೂಮಿಯಲ್ಲಿ ಗಾಯಕಿ ಶ್ಯಾಮಲಾ ಜಿ.ಭಾವೆ ಅಂತ್ಯ ಸಂಸ್ಕಾರದ ವಿಧಿವಿಧಾನಗಳು ನಡೆಯಲಿವೆ. ಲಾಕ್ಡೌನ್ ಹಿನ್ನೆಲೆ ಜನ ಸೇರುವುದಕ್ಕೆ ನಿರ್ಬಂಧವಿದೆ. ಅಭಿಮಾನಿಗಳು ಸಹಕರಿಸಬೇಕು ಎಂದು ಕುಟುಂಬದ ಸದಸ್ಯರು ಮನವಿ ಮಾಡಿದ್ದಾರೆ.