ಬ್ರಹ್ಮಾವರ: ದೇಶಾದ್ಯಂತ ಮನೆ ಮಾತಾಗಿರುವ ರಾಯಲ್ ಓಕ್ ಮಾಲೀಕತ್ವದ ಹೆಸರಾಂತ ಪೀಠೋಪಕರಣಗಳ ಮಳಿಗೆ ಬರ್ಲಿನ್ ಓಕ್ ನ ನೂತನ ಶಾಖೆಯು ಬ್ರಹ್ಮಾವರದಲ್ಲಿ ಗುರುವಾರದಂದು ಶುಭಾರಂಭಗೊಂಡಿತು.
ಮಾಂಡವಿ ರಿಯಲ್ ಎಸ್ಟೇಟ್ ಡೆವೆಲಪರ್ಸ್ ನ ವ್ಯವಸ್ಥಾಪಕ ನಿರ್ದೇಶಕ ಡಾ. ಜೆರ್ರಿ ವಿನ್ಸೆಂಟ್ ಡಯಾಸ್ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿ, ಈ ಹಿಂದೆ ಬರ್ಲಿನ್ ಓಕ್ ಪೀಠೋಪಕರಣಗಳು ಮಹಾನಗರಗಳಾದ ಮುಂಬೈ ಬೆಂಗಳೂರು ಕೊಲ್ಕತ್ತಾ ಹೈದರಾಬಾದ್ ಮುಂತಾದ ಕಡೆ ಮಾತ್ರ ದೊರೆಯುತ್ತಿತ್ತು. ಇದೀಗ ಬ್ರಹ್ಮಾವರದಲ್ಲಿ ಸಂಸ್ಥೆಯ ಶಾಖೆ ಶುಭಾರಂಭಗೊಂಡಿರುವುದು ಉಡುಪಿ ಜನತೆಗೆ ಉತ್ಕೃಷ್ಟ ಗುಣಮಟ್ಟದ ಪೀಠೋಪಕರಣ ದೊರೆಯುವಂತಾಗಿದೆ ಎಂದ ಅವರು ಸಂಸ್ಥೆಯು ಸೇವಾ ವ್ಯಾಪ್ತಿಯನ್ನು ಹೆಚ್ಚಿಸಿ ಅಭಿವೃದ್ಧಿ ಹೊಂದಲಿ ಎಂದು ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ದೀಪ ಬೆಳಗಿ ಶುಭಹಾರೈಸಿದರು.
ಸಂತ ಮೇರಿಸ್ ಆರ್ಥೋಡಾಕ್ಸ್ ಚರ್ಚಿನ ಫಾ. ಎಂ ಸಿ ಮಥಾಯ್ ಆಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ಎ ಜೆ ಅಸೋಸಿಯೇಟ್ ಮಾಲಕ ಎಂ ಗೋಪಾಲ್ ಭಟ್, ಬ್ರಹ್ಮಾವರದ ಬಿ ವಿ ಎಸ್ ಎಸ್ ಬ್ಯಾಂಕ್ ನ ನಿರ್ದೇಶಕ ರಾಜೇಶ್ ಶೆಟ್ಟಿ ಬಿರ್ತಿ, ದಕ್ಷಿಣ ಕನ್ನಡ ಜಿಲ್ಲೆ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಸುಪ್ರಸಾದ್ ಶೆಟ್ಟಿ, ವಾರಂಬಳ್ಳಿ ಪಂಚಾಯತ್ ಅಧ್ಯಕ್ಷೆ ಗುಲಾಬಿ ಬಂಗೇರ ಬರ್ಲಿನ್ ಓಕ್ ಬೆಂಗಳೂರು ಶಾಖೆಯ ಮುಖ್ಯಸ್ಥ ತಮ್ಮಯ್ಯ ಕೋಟೆರಾ ಹಾಗೂ ಉಡುಪಿ ಶಾಖೆಯ ಫ್ರಾಂಚೈಸಿ ಡೆವೆಲಪರ್ ರಿತೇಶ್ ಸಾಲಿಯಾನ್, ಉಡುಪಿ ಮಾರಾಟ ವಿಭಾಗದ ಮುಖ್ಯಸ್ಥ ಡೆರಿಕ್ ಡಿಸಿಲ್ವ, ಗ್ರೇಟಾ ಡಿಸಿಲ್ವ ಉಪಸ್ಥಿತರಿದ್ದರು.
ಬರ್ಲಿನ್ ಓಕ್ ಸಂಸ್ಥೆಯ ಕಿರು ಪರಿಚಯ:
೨೦೧೬ ರಲ್ಲಿ ಸ್ಥಾಪನೆಯಾದ ಸಂಸ್ಥೆಯು ಕಳೆದ ಆರು ವರ್ಷಗಳಿಂದ ಉನ್ನತ ಗುಣಮಟ್ಟದ ಪೀಠೋಪಕರಣಗಳನ್ನು ಗ್ರಾಹಕರಿಗೆ ನೀಡುತ್ತಾ ಬಂದಿದ್ದು ವಿಶ್ವಾಸಾರ್ಹತೆಯನ್ನು ಬೆಳೆಸಿಕೊಂಡು ಬಂದಿದೆ. ಪ್ರಸ್ತುತ ಬೆಂಗಳೂರಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಸಂಸ್ಥೆಯ ಶಾಖೆಗಳು ಹೈದರಾಬಾದ್, ದೆಹಲಿ, ಮುಂಬೈ ಮತ್ತು ಕೊಲ್ಕೊತ್ತಾದಲ್ಲಿ ಕಾರ್ಯನಿರ್ವಹಿಸುತ್ತಿವೆ. ಬ್ರಹ್ಮಾವರದ ಶಾಖೆಯು ೮೦೦ ಚದರ ಮೀಟರ್ ವಿಸ್ತಾರದಲ್ಲಿ ಹಬ್ಬಿಕೊಂಡಿದ್ದು, ನಾಲ್ಕಂತಸ್ತಿನ ವಿಶಾಲ ಮಳಿಗೆಯಲ್ಲಿ ಸೋಫಾ ಸೆಟ್, ಬೆಡ್ ಸೆಟ್, ಡೈನಿಂಗ್ ಸೆಟ್ , ಆಫೀಸ್ ಟೇಬಲ್, ಕುರ್ಚಿ, ಮೇಜುಗಳು ಮುಂತಾದ ಹತ್ತು ಹಲವು ರೀತಿಯ ಪೀಠೋಪಕರಣಗಳನ್ನು ಹೊಂದಿದೆ. ಗ್ರಾಹಕ ಸ್ನೇಹಿ ಪರಿಸರವು ಸಂಸ್ಥೆಯನ್ನು ಪೀಠೋಪಕರಣ ಕೊಳ್ಳುವಿಕೆಯ ನೆಚ್ಚಿನ ತಾಣವನ್ನಾಗಿಸಿದೆ.