ಕುಂದಾಪುರ: ವ್ಯಕ್ತಿಯ ಶವವನ್ನು ಮನೆಯ ಅಂಗಳದಲ್ಲೇ ಶವ ಸಂಸ್ಕಾರ ಮಾಡಿದ ಘಟನೆ ಬೈಂದೂರು ತಾಲೂಕಿನ ಜಡ್ಕಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಗುಂಡನ ಹೋಳೆ, ಉದಯ ನಗರದ ಮೂದೂರಿನಲ್ಲಿ ನಡೆದಿದೆ.
ಮುದೂರಿನ ಕೈಲಾಸನ್ ಅವರು ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದು ಮೆ. ೧೧ ರಂದು ಸಾವನಪ್ಪಿದ್ದಾರೆ.
ಕಡು ಬಡತನದಲ್ಲಿ ಜೀವನ ನಿರ್ವಹಿಸುತ್ತಿರುವ ಇವರಿಗೆ ಶವಸಂಸ್ಕಾರ ನಡೆಸಲು ಈ ಭಾಗದಲ್ಲಿ ಹಿಂದೂ ರುದ್ರಭೂಮಿ ಇಲ್ಲದೇ ತನ್ನ ಮನೆಯ ಅಂಗಳದಲ್ಲಿ ಶವವನ್ನು ಸುಟ್ಟು ಅಂತ್ಯ ಸಂಸ್ಕಾರ ನಡೆಸಿದ್ದಾರೆ.
ಸಾರ್ವಜನಿಕರ ಆಕ್ರೋಶ:
ಹಿಂದೂ ರುದ್ರ ಭೂಮಿ ಇಲ್ಲದೇ ಈ ಭಾಗದ ಹಿಂದೂ ಕುಟುಂಬಗಳಿಗೆ ಶವ ಸಂಸ್ಕಾರ ನಡೆಸಲು ಸಮಸ್ಯೆಯಾಗುತ್ತಿದ್ದು, ಹಿಂದೂ ರುದ್ರಭೂಮಿಗಾಗಿ ಬೇಡಿಕೆ ಇಟ್ಟಿದ್ದಾರೆ.