ಉಡುಪಿ: ಕೇಂದ್ರ ಅಂಚೆ ಕಚೇರಿಯಲ್ಲಿ ಸಂಜೆ 5.30 ರಿಂದ ರಾತ್ರಿ 8.30 ರ ವರೆಗೆ ತ್ವರಿತ ಅಂಚೆ ಸೇವೆ

ಉಡುಪಿ: ಭಾರತೀಯ ಅಂಚೆ ಇಲಾಖೆಯ ಅರ್.ಎಂ.ಎಸ್ ಕ್ಯೂ ವಿಭಾಗದ ಅಧೀನದಲ್ಲಿರುವ ಉಡುಪಿ ಸಾರ್ಟಿಂಗ್ ಕಚೇರಿಯು ಉಡುಪಿ ಹೆಡ್ ಪೋಸ್ಟ್ ಆಫೀಸಿನ ಆವರಣದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಈ ಕೌಂಟರಿನಲ್ಲಿ ಪ್ರಸಕ್ತ ತ್ವರಿತ ಅಂಚೆ ಸೇವೆಯು ಸಂಜೆ 7 ರಿಂದ ರಾತ್ರಿ 8.30 ರ ವರೆಗೆ ಹಾಗೂ ನೋಂದಾಯಿತ ಅಂಚೆ ಸೇವೆಯು ಸಂಜೆ 5.30 ರಿಂದ 6.30 ರ ವರೆಗೆ ಮಾತ್ರ ಲಭ್ಯವಿತ್ತು.

ಅಂಚೆ ಗ್ರಾಹಕರ ಅನುಕೂಲಕ್ಕಾಗಿ ಸಂಜೆ 5.30 ರಿಂದ ರಾತ್ರಿ 8.30 ರ ವರೆಗೆ ತ್ವರಿತ ಅಂಚೆ ಸೇವೆಯ ಜೊತೆಗೆ ನೋಂದಾಯಿತ ಅಂಚೆ ಸೇವೆ ಹಾಗೂ ತ್ವರಿತ ಪಾರ್ಸೆಲ್ ಸೇವೆಯನ್ನು ಆರಂಭಿಸಲಾಗಿದ್ದು, ಅಂಚೆ ಚೀಟಿಗಳು ಕೂಡ ಲಭ್ಯವಿರುತ್ತದೆ. ಈ ಎಲ್ಲಾ ಸೇವೆಗಳ ಶುಲ್ಕವನ್ನು ಗ್ರಾಹಕರು ಡಿಜಿಟಲ್ ಪಾವತಿ ಅಥವಾ ಕ್ಯೂಆರ್ ಕೋಡ್ ಮೂಲಕವೂ ಪಾವತಿಸಬಹುದು.