ಮಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬಿಡುಗಡೆಗೊಳಿಸಿದ ರಾಜ್ಯ ಮಟ್ಟದ ಆರ್ಕಿಟೆಕ್ಚರ್ ವಿಭಾಗದಲ್ಲಿ ಮಂಗಳೂರಿನ ಎಕ್ಸ್ ಪರ್ಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಬಿ. ಆದಿತ್ಯ ಹೊಳ್ಳ ಅವರು 4ನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ.
ಆರ್ಯ ಜಾದವ್ (48), ನಿತ್ಯಾಶ್ರೀ ಎಚ್.ಎಲ್. (101), ಮೇಘನಾ ಹನುಮಂತ್ ನಾಯ್ಕ್ (156), ಸಂಜನಾ ರಾಜೇಂದ್ರಕುಮಾರ್ ಅಂಗಡಿ (218), ಪ್ರಾರ್ಥನ್ ಎಂ.ಬೇವೂರು (263), ಚಿರಂತ್ ಎಸ್. (300), ಗಗನ್ ದೀಪ್ ಡಿ.ಎಂ. (391), ಅಕ್ಷತಾ ಎಚ್. ಮಸದಾರ್ (396), ಸಿಂಚನಾ ಕೆ. (458), ಅತೀಶ್ ಕೆ.ಆರ್. (478), ಚೈತನ್ಯ ಪಿ.ಎನ್. (515), ಮೌನಿಕಾ ಎನ್. (522), ಎಂ.ಪಿ. ಯೋಗಶ್ರೀ (898)ನೇ ರ‍್ಯಾಂಕ್ ಪಡೆದು ಅರ್ಹತೆ ಪಡೆದ ಎಕ್ಸ್ ಪರ್ಟ್ ದ್ಯಾರ್ಥಿಗಳಾಗಿದ್ದಾರೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಜೆಇಇ ಮೈನ್ ದ್ವಿತೀಯ ಪತ್ರಿಕೆ ಹಾಗೂ ನಾಟಾ ಪರೀಕ್ಷೆಯ ಒಟ್ಟು ಅಂಕಗಳನ್ನು ಪರಿಗಣಿಸಿ ಪಟ್ಟಿಯನ್ನು ಸಿದ್ಧಪಡಿಸುತ್ತದೆ.
ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಆರ್ಕಿಟೆಕ್ಚರ್ ವಿಭಾಗವು ಬಹಳಷ್ಟು ಪ್ರಾಮುಖ್ಯತೆಯನ್ನು ಪಡೆಯುತ್ತಿದ್ದು, ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ಉತ್ತಮ ಅವಕಾಶಗಳು ಒದಗಲಿರುವ ಹಿನ್ನೆಲೆಯಲ್ಲಿ ಈ ಕೋರ್ಸಿಗೆ ಪ್ರಾಮುಖ್ಯತೆ ಬಂದಿದೆ. ಈ ಕೋರ್ಸಿನ ಪ್ರವೇಶಕ್ಕೆ ಜೆಇಇ ಮೈನ್ ದ್ವಿತೀಯ ಪತ್ರಿಕೆ ಮತ್ತು ನಾಟಾ ಪರೀಕ್ಷೆಯ ಫಲಿತಾಂಶವೇ ಮಾನದಂಡವಾಗಿದೆ.
ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್ ಅಭಿನಂದನೆ ಸಲ್ಲಿಸಿದ್ದಾರೆ.












