ಜಪಾನೀಸ್ ಭಾಷಾ ಕಲಿಕೆಗೆ ಮಣಿಪಾಲದ MSDC ಯಲ್ಲಿದೆ ಭರ್ಜರಿ ಅವಕಾಶ

ಮಣಿಪಾಲ: ವಿದೇಶಿ ಭಾಷೆಗಳ ಅಧ್ಯಯನಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಮಣಿಪಾಲ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ (MSDC) ಜಪಾನೀಸ್ ಭಾಷೆಯ N5 ಮಟ್ಟದ ಕೋರ್ಸ್ಗೆ ವಿಶೇಷ ಎರ್ಲಿ ಬರ್ಡ್ ಆಫರ್ ಘೋಷಿಸಿದೆ.

ಈ ಆಫರ್ನಡಿ ಆಯ್ದ ವರ್ಗದ ಅಭ್ಯರ್ಥಿಗಳಿಗೆ ಕೋರ್ಸ್ ಶುಲ್ಕದಲ್ಲಿ ಶೇ.50ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಸಾಮಾನ್ಯವಾಗಿ ₹20,000 ಇರುವ ಕೋರ್ಸ್ ಶುಲ್ಕವು ರಿಯಾಯಿತಿಯೊಂದಿಗೆ ₹10,000ಕ್ಕೆ ಲಭ್ಯವಾಗಲಿದೆ.

MSDC ಸಿಬ್ಬಂದಿ, ಡಾ. ಟಿ.ಎಂ.ಎ. ಪೈ ಪಾಲಿಟೆಕ್ನಿಕ್ ಸಿಬ್ಬಂದಿ, MAHE ಸಿಬ್ಬಂದಿ, ಡಾ. ಟಿ.ಎಂ.ಎ. ಪೈ ಫೌಂಡೇಶನ್ ಶಾಲೆಗಳ ವಿದ್ಯಾರ್ಥಿಗಳು ಹಾಗೂ ಅಕಾಡೆಮಿ ಆಫ್ ಜನರಲ್ ಎಜುಕೇಷನ್ನ ವಿದ್ಯಾರ್ಥಿಗಳು ಈ ಸೌಲಭ್ಯ ಪಡೆಯಲು ಅರ್ಹರಾಗಿದ್ದಾರೆ.

ಇತರ ಎಲ್ಲಾ ಅಭ್ಯರ್ಥಿಗಳಿಗೆ ಶೇ.25ರಷ್ಟು ರಿಯಾಯಿತಿ ನೀಡಲಾಗಿದ್ದು, ಅವರು ₹15,000 ಶುಲ್ಕ ಪಾವತಿಸಿ ಕೋರ್ಸ್ಗೆ ಸೇರ್ಪಡೆಯಾಗಬಹುದು.

ಈ ವಿಶೇಷ ರಿಯಾಯಿತಿ ಆಗಸ್ಟ್ 15, 2026ರವರೆಗೆ ಮಾತ್ರ ಮಾನ್ಯವಾಗಿರುತ್ತದೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ 81231 65069 ಅಥವಾ 73497 80582 ಸಂಖ್ಯೆಗೆ ಸಂಪರ್ಕಿಸಿ ನೋಂದಾಯಿಸಿಕೊಳ್ಳಬಹುದು.