ಕಾರ್ಕಳ: ದೇಶದ ನಾಗರಿಕನಾಗಿ ಸ್ವಯಂ ಪ್ರೇರಣೆಯಿಂದ ಜವಾಬ್ದಾರಿಗಳನ್ನು ವಹಿಸಿಕೊಂಡು ದೇಶದ ಏಳಿಗೆಗೆ ಕೈ ಜೋಡಿಸಬೇಕು. ದೇಶ ಅಂದ್ರೆ ನಾವು, ನಾವು ಅಂದ್ರೆ ದೇಶ ಎಂಬ ಭಾವ ಮೊಳಗಬೇಕು. ನಾನು ಭಾರತೀಯ ಎಂಬ ಹೆಮ್ಮೆ ಗರ್ವ, ಅಭಿಮಾನ ಇರಬೇಕೆಂದು ಕೊಚ್ಚಿಯ ಐ.ಎನ್.ಎಸ್. ಶಾರದಾ ಕಮಾಂಡರ್ ಅಶ್ವಿನ್.ಎಂ.ರಾವ್ ಅಭಿಪ್ರಾಯಪಟ್ಟರು.
ಅವರು ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ನಡೆದ 74 ನೇ ಗಣರಾಜ್ಯೋತ್ಸವದಲ್ಲಿ ಧ್ವಜಹಾರಿಸಿ ಮಾತನಾಡಿದರು.
ಶಿಸ್ತುಬದ್ಧ ವಿದ್ಯಾರ್ಥಿ ಜೀವನವು ಯಶಸ್ಸಿನೆಡೆಗೆ ಕೊಂಡೊಯ್ಯುತ್ತದೆ. ಜವಾಬ್ದಾರಿಯುತ ಮನಸ್ಥಿತಿಯು ಎಂತಹ ಪ್ರತಿಕೂಲ ಸ್ಥಿತಿಯನ್ನು ಸ್ವೀಕರಿಸಿಕೊಂಡು ಮುನ್ನುಗ್ಗಲು ಸಾಧ್ಯವಿದೆ ಎಂದು ನಿವೃತ್ತ ಶಿಕ್ಷಕ ಪಾಂಡುರಂಗ ರಾವ್ ವಿದ್ಯಾರ್ಥಿಗಳಿಗೆ ಕಿವಿಮಾತುಗಳನ್ನು ಹೇಳಿದರು.
ಕಾರ್ಯಕ್ರಮದಲ್ಲಿ ಅಜೆಕಾರ್ ಪದ್ಮಗೋಪಾಲ್ ಎಜ್ಯಕೇಶನ್ ಟ್ರಸ್ಟ್ನ ಅಧ್ಯಕ್ಷ ಡಾ.ಸುಧಾಕರ್ ಶೆಟ್ಟಿ, ಟ್ರಸ್ಟಿ ವಿದ್ಯಾವತಿ ಎಸ್ ಶೆಟ್ಟಿ, ಉಭಯ ಸಂಸ್ಥೆಗಳ ಪ್ರಾಂಶುಪಾಲರು, ಉಪಪ್ರಾಂಶುಪಾಲರುಗಳು ಉಪಸ್ಥಿತರಿದ್ದರು.