ಕರಾವಳಿಯಲ್ಲಿ ಇದೇ ಮೊಟ್ಟಬಾರಿಗೆ ಜೂನಿಯರ್ ಪ್ರತಿಭೆಗಳಿಗೊಂದು ಸುವರ್ಣಾವಕಾಶ ಕೊಡುವ ನಿಟ್ಟಿನಲ್ಲಿ ಡ್ರೀಮ್ ಕ್ಯಾಚುರ್ಸ್ ಇವೆಂಟ್ಸ್ ಪ್ರಸ್ತುತ ಪಡಿಸುವ ಮಂಗಳೂರುಸ್ ಗಾಟ್ ಟ್ಯಾಲೆಂಟ್ ಸೀಸನ್ 1 ಕಾರ್ಯಕ್ರಮ ಡಿ. 29ರಂದು ಬೆಳಗ್ಗೆ 10ರಿಂದ ಮಂಗಳೂರಿನ ಭಾರತ್ ಮಾಲ್ (ಟೆರೇಸ್ ಫ್ಲೋರ್ ) ನಲ್ಲಿ ನಡೆಯಲಿದೆ .
ಮ್ಯೂಸಿಷಿಯನ್,ಡ್ಯಾನ್ಸರ್ಸ್,ಸಿಂಗರ್ಸ್,ರಾಪ್ಪೆರ್ಸ್,ಆಕ್ಟರ್ಸ್, ಆಂಕರ್ಸ್, ಆರ್ಟಿಸ್ಟ್ ಆರ್ಟಿಸ್ಟ್,ಕಾಮೆಡಿಯನ್ಸ್,ಇತ್ಯಾದಿ ಪ್ರತಿಭೆಗಳಿಗೆ ಇಲ್ಲಿ ತಮ್ಮ ಪ್ರತಿಭಾ ಪ್ರದರ್ಶನಕ್ಕೊಂದು ಅದ್ಧೂರಿ ಅವಕಾಶವಿದೆ.
ಭಾಗವಹಿಸಿ ಭರ್ಜರಿ ಬಹುಮಾನ ಗೆಲ್ಲಿ:
ಎಳೆ ಪ್ರತಿಭೆಗಳನ್ನು ಗುರುತಿಸುವುದು ಮತ್ತು ಅವರಿಗೊಂದು ಸೂಕ್ತ ವೇದಿಕೆ ಕಲ್ಪಿಸುವ ಹಾಗು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಬರೀ ಕರಾವಳಿ ಪ್ರತಿಭೆಗಳು ಮಾತ್ರವಲ್ಲ, ಯಾವ ಊರಿನ ಪ್ರತಿಭೆಗಳು ಬೇಕಾದರೂ ಇಲ್ಲಿ ಭಾಗವಹಿಸಬಹುದು. ಈಗಾಗಲೇ ರಾಜ್ಯ, ಹೊರರಾಜ್ಯದವರು ಕೂಡ ಹೆಸರು ನೋಂದಾಯಿಸಿದ್ದಾರೆ. ವಿಜೇತರಿಗೆ ನಗದು ಹಾಗೂ ಇತ್ಯಾದಿ ಅದ್ದೂರಿ ಬಹುಮಾನಗಳು ಕಾದಿವೆ. ಸ್ಪರ್ಧೆಯಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಡಿ.24 ಕೊನೆಯ ದಿನವಾಗಿದೆ. 4-9 ಹಾಗೂ 10-15 ವರ್ಷ ವಯಸ್ಸಿನವರಿಗೆ ಭಾಗವಹಿಸಿಲು ಮುಕ್ತ ಅವಕಾಶವಿದೆ.
ನೋಂದಣಿ ಮತ್ತು ವಿಚಾರಣೆಗಾಗಿ ಸಂಪರ್ಕಿಸಿ:
ಪೃಥ್ವಿ ಗಣೇಶ್ ಕಾಮತ್ ,ಮ್ಯಾನೇಜಿಂಗ್ ಡೈರೆಕ್ಟರ್, ಡ್ರೀಮ್ ಕ್ಯಾಚುರ್ಸ್ ಇವೆಂಟ್ಸ್ mob:8884410414