ಉಡುಪಿ: ಹೈಟೆಕ್ ಮೆಡಿಕೇರ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ಇನ್ನಷ್ಟು ಉತ್ತಮ ಹಾಗೂ ಸಮಗ್ರ ವೈದ್ಯಕೀಯ ಸೇವೆ ಒದಗಿಸುವ ನಿಟ್ಟಿನಲ್ಲಿ ಆಸ್ಪತ್ರೆಯ ಮಕ್ಕಳ ಹಾಗೂ ನವಜಾತ ಶಿಶುಗಳ ವಿಭಾಗವನ್ನು ಮತ್ತಷ್ಟು ವಿಸ್ತರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅನುಭವಿ ತಜ್ಞ ವೈದ್ಯರನ್ನು ಒಳಗೊಂಡ ಬಲಿಷ್ಠ ತಂಡವನ್ನು ಪರಿಚಯಿಸಲಾಗಿದೆ.
ನವಜಾತ ಶಿಶುಗಳು ಹಾಗೂ ಮಕ್ಕಳಿಗೆ ಗುಣಮಟ್ಟದ ಮತ್ತು ತ್ವರಿತ ಚಿಕಿತ್ಸಾ ಸೇವೆ ಒದಗಿಸುವ ಉದ್ದೇಶದಿಂದ ವಿಭಾಗದಲ್ಲಿ ತಜ್ಞ ವೈದ್ಯರ ತಂಡವನ್ನು ಬಲಪಡಿಸಲಾಗಿದೆ. ಮಕ್ಕಳ ಆರೋಗ್ಯಕ್ಕೆ ಸಂಬಂಧಿಸಿದ ವಿವಿಧ ಸಮಸ್ಯೆಗಳ ಜೊತೆಗೆ ನವಜಾತ ಶಿಶುಗಳ ವಿಶೇಷ ಆರೈಕೆಗೆ ಅಗತ್ಯವಿರುವ ವೈದ್ಯಕೀಯ ಸೇವೆಗಳನ್ನು ದಿನದ 24 ಗಂಟೆಯೂ ಒದಗಿಸಲಾಗುತ್ತದೆ.
ವಿಭಾಗದ ಹಿರಿಯ ಸಲಹೆಗಾರ ಮಕ್ಕಳ ತಜ್ಞ ವೈದ್ಯರಾಗಿ ಡಾ. ನಳಿನಿ ಭಾಸ್ಕರಾನಂದ್ (MD, DCH) ಸೇವೆ ಸಲ್ಲಿಸಲಿದ್ದಾರೆ. ಅದೇ ರೀತಿ ಡಾ. ಜನಾರ್ಧನ ಪ್ರಭು (MBBS, DCH, DNB) ಅವರು ನವಜಾತ ಶಿಶುಗಳ ಚಿಕಿತ್ಸೆಯಲ್ಲಿ ಫೆಲೋಶಿಪ್ ಪಡೆದಿದ್ದು, ಮಕ್ಕಳ ತಜ್ಞ ವೈದ್ಯರು ಹಾಗೂ ನವಜಾತ ಶಿಶು ತಜ್ಞ ವೈದ್ಯರಾಗಿ ಸೇವೆ ಸಲ್ಲಿಸಲಿದ್ದಾರೆ.
ಡಾ. ಶ್ರೀಪದ ಶೆಟ್ಟಿ ಕೆ. (MBBS, MD, DNB – Pediatrics) ಅವರು ಕೂಡ ನವಜಾತ ಶಿಶುಗಳ ಚಿಕಿತ್ಸೆಯಲ್ಲಿ ಫೆಲೋಶಿಪ್ ಪಡೆದಿದ್ದು, ವಿಭಾಗದ ತಜ್ಞ ವೈದ್ಯರ ತಂಡದ ಭಾಗವಾಗಿದ್ದಾರೆ.

ನವಜಾತ ಶಿಶುಗಳು ಹಾಗೂ ಮಕ್ಕಳಿಗೆ ಸುಧಾರಿತ ವೈದ್ಯಕೀಯ ಸೌಲಭ್ಯಗಳೊಂದಿಗೆ 24×7 ತಜ್ಞ ಆರೈಕೆ ಒದಗಿಸುವುದು ವಿಭಾಗದ ಪ್ರಮುಖ ಉದ್ದೇಶವಾಗಿದೆ. ಅನುಭವಿ ವೈದ್ಯರ ತಂಡದ ಮೂಲಕ ಮಕ್ಕಳಿಗೆ ಸಮಗ್ರ, ಸುರಕ್ಷಿತ ಹಾಗೂ ಗುಣಮಟ್ಟದ ಚಿಕಿತ್ಸಾ ಸೇವೆ ನೀಡಲು ಆಸ್ಪತ್ರೆ ಮುಂದಾಗಿದೆ. ಆಸ್ಪತ್ರೆ ನೀಡು ಅಚ್ಚುಕಟ್ಟಾದ ಸೇವೆಗಳಿಗಾಗಿ ನೀವೂ ಆಸ್ಪತ್ರೆಗೆ ಭೇಟಿ ನೀಡಿ ಅಪಾಯಿಂಟ್ಮೆಂಟ್ಗಾಗಿ:ಸಂಪರ್ಕಿಸಿ
74068 68214 | 63669 21154















