ಕ್ರಿಸ್ ಗೈಲ್ ಅಬ್ಬರದ ಬ್ಯಾಟಿಂಗ್ ಹೊರತಾಗಿಯೂ ಗೆದ್ದು ಬೀಗಿದ ಇಂಗ್ಲೆಂಡ್ 

ಬೆಂಗಳೂರು: ಕ್ರಿಕೆಟ್ ದೈತ್ಯ ಕ್ರಿಸ್ ಗೇಲ್ ಅವರ 135 ರನ್ ಗಳ ಅಬ್ಬರದ ಬ್ಯಾಟಿಂಗ್ ಹೊರತಾಗಿಯೂ ಪ್ರವಾಸಿ ಇಂಗ್ಲೆಂಡ್ ತಂಡ ಭರ್ಜರಿ ಜಯಗಳಿಸಿದೆ. 
ವೆಸ್ಟಿಂಡೀಸ್ ಪ್ರವಾಸದ ಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ವಿಂಡೀಸ್ 50 ಒವರ್ ಗೆ 360 ರನ್ ಗಳ ಬ್ರಹತ್ ಟಾರ್ಗೆಟ್‌ ಇಂಗ್ಲೆಂಡ್ ಗೆ ನೀಡಿತು. ಈ ಗುರಿ ಬೆನ್ನತ್ತಿದ ಇಂಗ್ಲೆಂಡ್ 48.4 ಒವರ್ ನಲ್ಲಿ 364 ರನ್ ಗಳಿಸುವ ‌ಮೂಲಕ ವಿಂಡೀಸ್ ತವರು ನೆಲದಲ್ಲೇ ಶಾಕ್ ನೀಡಿತು.
 
ಗೈಲ್ ಸುನಾಮಿ: 
ವಿಂಡೀಸ್ ಆರಂಭಿಕರಾಗಿ ಕಣಕ್ಕಿಳಿದ ಗೈಲ್ ಪ್ರಾರಂಭದಲ್ಲಿ ನಿಧಾನ ಗತಿಯ ಆಟವಾಡಿದರೂ ಅರ್ಧ ಶತಕದ ಬಳಿಕ ಅಬ್ಬರಿಸಿದರು. ಇಂಗ್ಲೆಂಡ್ ಬೌಲರ್ ಗಳನ್ನು ಮನಸೋಇಚ್ಚೆ ದಂಡಿಸಿದ ಗೈಲ್ 12 ಸಿಕ್ಸ್ ಸಹಿತ 3 ಬೌಂಡರಿ ಭಾರಿಸಿದರು. ವಿಂಡೀಸ್ ಪರ ಶಾಯಿ ಹೋಪ್ , ಡೆರನ್ ಬ್ರಾವೋ ಉತ್ತಮ‌ ಬ್ಯಾಟಿಂಗ್ ನೆರವಿನಿಂದ 360 ರನ್ ಗಳ‌ಬೃಹತ್ ಮೊತ್ತದ ಗುರಿ ನೀಡಿದರು.
ಗುರಿ ಬೆನ್ನತ್ತಿದ ಇಂಗ್ಲೆಂಡ್ ಆರಂಭದಿಂದಲೇ ಅಬ್ಬರಿಸಿತು. ಆರಂಭಿಕ ಜೇಸನ್ ರಾಯ್ ಕೇವಲ 85 ಎಸೆತಗಳಲ್ಲಿ 123 ರನ್ ಗಳಿಸಿದರು. ಅವರ ಆಕರ್ಷಕ ಬ್ಯಾಟಿಂಗ್ ನಲ್ಲಿ 15 ಬೌಂಡರಿ ಸಹಿತ 3 ಸಿಕ್ಸರ್ ಒಳಗೊಂಡಿತ್ತು.  ಅವರಿಗೆ ಸಾಥ್ ನೀಡಿದ ಜೋ ರೂಟ್ ಕೂಡ 102 ರನ್ ಗಳಿಸಿದರು. ಅವರಿಬ್ಬರ ಶತಕ ದ ನೆರವಿನಿಂದ ಇಂಗ್ಲೆಂಡ್ ಅಮೋಘ ಜಯಗಳಿಸುವಂತಾಯಿತು.