ಉಡುಪಿ: ಬ್ರಹ್ಮಗಿರಿ ಲಯನ್ಸ್ ಕ್ಲಬ್ ವತಿಯಿಂದ ಇಂಜಿನಿಯರ್ ದಿನಾಚರಣೆ ಪ್ರಯುಕ್ತ ಪಾಡಿಗಾರು ಲಕ್ಷ್ಮೀ ನಾರಾಯಣ ಉಪಾಧ್ಯರನ್ನು ಗುರುವಾರದಂದು ಕಿದಿಯೂರು ಹೋಟೆಲ್ ನಲ್ಲಿ ಗೌರವಿಸಲಾಯಿತು. ಸುಮಾರು 39 ವರ್ಷಕ್ಕೂ ಹೆಚ್ಚಿನ ಕಾಲ ಸಿವಿಲ್ ಇಂಜಿನಿಯರ್ ವೃತ್ತಿಯಲ್ಲಿ ಸುಮಾರು 500 ಕ್ಕೂ ಹೆಚ್ಚು ಮನೆ ಹಾಗೂ ಕಟ್ಟಡಗಳನ್ನು ನಿರ್ಮಿಸಿದ ಇವರ ಸೇವೆ ಪರಿಗಣಿಸಿ ಶಾಲು ಹೊದಿಸಿ, ಪ್ರಶಸ್ತಿ ನೀಡಿ ಗೌರವಿಸಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಬ್ರಹ್ಮಗಿರಿ ಅಧ್ಯಕ್ಷ ಉಮೇಶ್ ನಾಯಕ್, ಕಿದಿಯೂರು ಹೋಟೆಲ್ ಮಾಲಕ ಭುವನೇಂದ್ರ ಕಿದಿಯೂರು , ಯುವರಾಜ್ ಮಸ್ಕತ್ , ಲಯನ್ಸ್ ಜಿಲ್ಲಾ ಸಮನ್ವಯ ಅಧಿಕಾರಿ ವಾದಿರಾಜ್ ರಾವ್, ಕಾರ್ಯದರ್ಶಿ ಗೀತಾ ವಿ ರಾವ್, ದೇವದಾಸ ಕಾಮತ್, ವಿಲಾಸ ಕುಮಾರ್ ಉಪಸ್ಥಿತರಿದ್ದರು.












