ಖಾಸಗಿ ಕಂಪನಿಗಳ ಉದ್ಯೋಗಿಗಳಿಗೆ ರಜನಿಕಾಂತ್​ ಜೈಲರ್‌ ಸಿನಿಮಾ ನೋಡಲು ರಜೆ

ಭಾರತ ಮಾತ್ರವಲ್ಲ, ವಿಶ್ವದ ನಾನಾ ಕಡೆಗಳಲ್ಲಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿರುವ ನಟ ಯಾರೆಂಬ ಪ್ರಶ್ನೆಗೆ ಬಹುತೇಕ ಸಿನಿರಸಿಕರ ಬಾಯಲ್ಲಿ ಮೊದಲು ಬರುವ ಉತ್ತರವೇ ರಜನಿಕಾಂತ್​. ಹೀಗಿರುವಾಗ ಅವರ ಹೊಸ ಸಿನಿಮಾಗಳ ಬಗ್ಗೆ ಫ್ಯಾನ್ಸ್​ ಕ್ರೇಜ್​ ಹೇಗಿರಬಹುದು ಎಂಬುದನ್ನು ನೀವೇ ಒಮ್ಮೆ ಊಹಿಸಿ. ತಮ್ಮ ಮೆಚ್ಚಿನ ನಟನ ಹೊಚ್ಚ ಹೊಸ ಸಿನಿಮಾ ವೀಕ್ಷಿಸಲು ಇದೀಗ ಕಟ್ಟಾ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ.ರಜನಿಕಾಂತ್​. ಈ ಹೆಸರು ಕೇಳುತ್ತಿದ್ದಂತೆ ವಿಶಿಷ್ಟ ಮ್ಯಾನರಿಸಂ ಹೊಂದಿರುವ ವ್ಯಕ್ತಿಯೊಬ್ಬರು ಥಟ್ಟನೆ ನೆನಪಾಗುತ್ತಾರೆ.ಜೈಲರ್​ ಸಿನಿಮಾ ವೀಕ್ಷಿಸಲು ಚೆನ್ನೈ, ಮಧುರೈ ಮತ್ತು ಬೆಂಗಳೂರಿನ ಕೆಲವು ಖಾಸಗಿ ಕಂಪನಿಗಳು ಆಗಸ್ಟ್ 10ರಂದು ರಜೆ ಘೋಷಿಸಿವೆ.

ರಜೆ ಘೋಷಿಸಿದ ಖಾಸಗಿ ಕಂಪನಿಗಳು: ತಲೈವಾ ನಟನೆಯ ಸಿನಿಮಾಗಾಗಿ ಅಭಿಮಾನಿಗಳು ಅದೆಷ್ಟು ಉತ್ಸುಕರಾಗಿದ್ದಾರೆಂದರೆ, ಚೆನ್ನೈ, ಮಧುರೈ ಮತ್ತು ಬೆಂಗಳೂರಿನ ಕೆಲವು ಖಾಸಗಿ ಕಂಪನಿಗಳು ಆಗಸ್ಟ್ 10ರಂದು ರಜೆಯನ್ನೇ ಘೋಷಿಸಿವೆ. ತಲೈವಾ ಸಿನಿಮಾ ಲೋಕದಲ್ಲಿ ವಿಹರಿಸಿ ಬರಲು ಉದ್ಯೋಗಿಗಳಿಗೆ ರಜೆ ನೀಡಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಜೈಲರ್​ ಎಂಬ ಪದ ಟ್ರೆಂಡಿಂಗ್​ನಲ್ಲಿದೆ.ಆಗಸ್ಟ್ 10ರಂದು ಜೈಲರ್​ ಬಿಡುಗಡೆ: ತಲೈವಾ ರಜನಿಕಾಂತ್ ನಟನೆಯ ಮುಂದಿನ ಬಹುನಿರೀಕ್ಷಿತ ಸಿನಿಮಾದ ಹೆಸರೇ ಜೈಲರ್​. ನೆಲ್ಸನ್​ ದಿಲೀಪ್​ಕುಮಾರ್​ ನಿರ್ದೇಶನದ ಸಿನಿಮಾದ ಮೇಲೆ ಅಭಿಮಾನಿಗಳ ನಿರೀಕ್ಷೆ ಬೆಟ್ಟದಷ್ಟಿದೆ. ​ಇನ್ನೆರಡೇ ದಿನಗಳಲ್ಲಿ ಚಿತ್ರ ತೆರೆಕಾಣಲು ಸಜ್ಜಾಗಿದೆ. ಆಗಸ್ಟ್ 10ರಂದು ಚಿತ್ರಮಂದಿರಗಳಲ್ಲಿ ಜೈಲರ್​ ಅದ್ಧೂರಿಯಾಗಿ ತೆರೆಗಪ್ಪಳಿಸಲಿದ್ದು, ತಮಿಳುನಾಡಿನ ಅನೇಕ ಖಾಸಗಿ ಕಂಪನಿಗಳು ಉದ್ಯೋಗಿಗಳಿಗೆ ರಜೆಯನ್ನೇ ಘೋಷಿಸಿವೆ!. ಎರಡು ವರ್ಷಗಳ ಬ್ರೇಕ್​ ಬಳಿಕ ರಜನಿಕಾಂತ್​​ ಜೈಲರ್​ ಮೂಲಕ ಅಬ್ಬರಿಸಲು ಬರುತ್ತಿದ್ದು, ಅಭಿಮಾನಿಗಳು ಉತ್ಸುಕರಾಗಿದ್ದಾರೆ.

ಶಿವ ರಾಜ್​ಕುಮಾರ್​, ಪ್ರಿಯಾಂಕಾ ಮೋಹನ್​​, ತಮನ್ನಾ ಭಾಟಿಯಾ, ರಮ್ಯಾ ಕೃಷ್ಣನ್​​, ಯೋಗಿ ಬಾಬು, ವಸಂತ್​ ರವಿ, ವಿನಾಯಕ್​ ಸೇರಿದಂತೆ ಹಲವು ಸ್ಟಾರ್​ ನಟರು ಅಭಿನಯಿಸಿರುವ ಸಿನಿಮಾದಲ್ಲಿ ಮಲಯಾಳಂ ನಟ ಮೋಹನ್​ ಲಾಲ್​ ಅತಿಥಿ ಪಾತ್ರ ನಿರ್ವಹಿಸಿದ್ದಾರೆ. ಶಿವ ರಾಜ್​ಕುಮಾರ್ ನಟನೆಯ ತಮಿಳಿನ ಚೊಚ್ಚಲ ಚಿತ್ರವಿದು. ಇದಾದ ಬಳಿಕ ಕ್ಯಾಪ್ಟನ್​ ಮಿಲ್ಲರ್ ಎಂಬ ಮತ್ತೊಂದು ತಮಿಳು ಚಿತ್ರ ತೆರೆಕಾಣಲಿದೆ.ಹೆಚ್​ಆರ್​ ಡಿಪಾರ್ಟ್​ಮೆಂಟ್​ಗಳ ಮೇಲಿನ ರಜಾ ವಿನಂತಿಗಳ ಹೊರೆ ತಪ್ಪಿಸುವ ನಿಟ್ಟಿನಲ್ಲಿ ಹಲವು ಕಂಪನಿಗಳು ಈಗಾಗಲೇ ಆಗಸ್ಟ್ 10ಕ್ಕೆ ರಜೆ ನೀಡಿವೆ. ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ರಜೆ ನೀಡಿರುವ ವಿಚಾರ ಹುಬ್ಬೇರಿಸುವಂತಿದೆ. ಪೈರಸಿ ತಡೆಯುವ ಕ್ರಮದಲ್ಲಿ ಕಂಪನಿಗಳು ರಜೆ ನೀಡಿದ್ದು, ಕೆಲವೆಡೆ ಉದ್ಯೋಗಿಗಳಿಗೆ ಉಚಿತ ಟಿಕೆಟ್​ ಅನ್ನೂ​ ವಿತರಿಸಿವೆ.